ಬ್ಯಾಟರ್ಸ್ ಮಾಡದ ಕೆಲಸ ಮಾಡಿದ ಬೌಲರ್ಸ್: 3 ವಿಕೆಟ್ ಪಡೆಯಲು ಇಂಗ್ಲೆಂಡ್ 50 ಓವರ್ ಹೆಣಗಾಟ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 22 ರನ್‌ಗಳ ಸೋಲು ಕಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಪ್ರದರ್ಶಿಸಿದ ಅಮೋಘ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್‌ಗಳು ಮಾಡಬೇಕಿದ್ದ ಕೆಲಸವನ್ನು ಕೆಳ ಕ್ರಮಾಂಕದ ಬ್ಯಾಟರ್‌ಗಳು ಮಾಡಿ ಗಮನ ಸೆಳೆದರು. ಈ ಮೂಲಕ ಇಂಗ್ಲೆಂಡ್ ಗೆಲುವಿನ ಜೋಶ್‌ನ್ನು ಹತ್ತಿಕ್ಕಲು ಕೊಂಚ ಕಾಲ ಸಫಲರಾಗಿದ್ದರು.
ಟೀಮ್ ಇಂಡಿಯಾ 193 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. ಈ ವೇಳೆ ಸೋಮವಾರ ಎರಡನೇ ಇನಿಂಗ್ಸ್‌ನಲ್ಲಿ ಭಾರತ 4 ವಿಕೆಟ್‌ಗೆ 58 ರನ್‌ಗಳಿಂದ ಆಟ ಮುಂದುವರೆಸಿತು. ಈ ವೇಳೆ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೊದಲಾವಧಿಯಲ್ಲಿ ಟೀಮ್ ಇಂಡಿಯಾ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವಲ್ಲಿ ಎಡವಿತು. ರಿಷಭ್ ಪಂತ್ ತಮ್ಮ ನೈಜ್ಯ ಆಟವನ್ನು ಆಡಲು ಹೋಗಿ ಔಟ್ ಆದರು. ಕೆಎಲ್ ರಾಹುಲ್ (39), ವಾಷಿಂಗ್ಟನ್ ಸುಂದರ್ ಸಹ ನಿರಾಸೆ ಅನುಭವಿಸಿದರು. ಇನ್ನು ನಿತೀಶ್ ಕುಮಾರ್ ರೆಡ್ಡಿ ಭೋಜನ ವಿರಾಮದ ವೇಳೆಗೆ ತಮ್ಮ ವಿಕೆಟ್ ಒಪ್ಪಿಸಿದರು.

ಭಾರತ ಭೋಜನ ವಿರಾಮದ ವೇಳೆಗೆ 8 ವಿಕೆಟ್ ಕಳೆದುಕೊಂಡು 112 ರನ್ ಸೇರಿಸಿತ್ತು. ಈ ಸ್ಕೊರ್ ಬೋರ್ಡ್ ನೋಡಿದ ಮೇಲೆ ಎಲ್ಲರಿಗೂ ಟೀಮ್ ಇಂಡಿಯಾ ಬೇಗ ಆಲ್‌ಔಟ್ ಆಗುತ್ತದೇ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಇಂಗ್ಲೆಂಡ್ ಗೆಲುವಿಗೆ ತೊಡಕಾಗಿ ನಿಂತುಕೊಂಡರು.
82 ರನ್‌ಗೆ 7 ವಿಕೆಟ್
ಒಂದು ಹಂತದಲ್ಲಿ ಟೀಮ್ ಇಂಡಿಯಾ 24.4 ಓವರ್‌ಗಳಲ್ಲಿ 82 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಟೀಮ್ ಇಂಡಿಯಾದ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ತೋರಿಸಿದ ಕೆಚ್ಚೆದಯ ಆಟ ಎಲ್ಲರ ಗಮನ ಸೆಳೆಯಿತು. ರವೀಂದ್ರ ಜಡೇಜಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಜೋಡಿ 8ನೇ ವಿಕೆಟ್‌ಗೆ 91 ಎಸೆತಗಳ ಕಾಲ ಕಾಡಿದರು. ಈ ಜೋಡಿ 30 ರನ್ ಕಲೆ ಹಾಕಿತು. ಆದರೆ ನಿತೀಶ್ ಕುಮಾರ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಬುಮ್ರಾ ಕೆಚ್ಚಿದೆಯ ಬ್ಯಾಟಿಂಗ್
9ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಅವರನ್ನು ಸೇರಿಕೊಂಡು ಬ್ಯಾಟಿಂಗ್ ಮಾಡಿದ ಜಸ್ಪ್ರೀತ್ ಬುಮ್ರಾ ಅಮೋಘ ತಾಳ್ಮೆಯ ಆಟ ಪ್ರದರ್ಶಿಸಿದರು. ಭಾರತದ ಪರ ಈ ಜೋಡಿ ಗೆಲುವಿನ ಆಸೆಯನ್ನು ಚಿಗುರಿಸಿತು. ನಿಜಕ್ಕೂ ಬುಮ್ರಾ ಒಬ್ಬ ವೀರ ಸೇನಾನಿಯಂತೆ ಹೋರಾಡಿದರು. ಜಡೇಜಾ ಇವರು ಬ್ಯಾಟ್ ಮಾಡಿದ ಅಷ್ಟೂ ಓವರ್‌ಗಳ ವರೆಗೆ ಕೊನೆಯ ಎರಡು ಬೌಲ್ ಅಥವಾ ಒಂದು ಬೌಲ್ ಎದುರಿಸಲು ಬಿಟ್ಟುಕೊಡುತ್ತಿದ್ದರು. ಪರಿಣಾಮ 9ನೇ ವಿಕೆಟ್‌ಗೆ ಭಾರತ 132 ಎಸೆತಗಳಲ್ಲಿ 35 ರನ್ ಸೇರಿಸಿತು. ಬುಮ್ರಾ ಸುಮಾರು 1 ಗಂಟೆ 41 ನಿಮಿಷ ಬ್ಯಾಟ್ ಮಾಡಿದರು.
ಜಸ್ಪ್ರೀತ್ ಬುಮ್ರಾ 54 ಎಸೆತಗಳನ್ನು ಎದುರಿಸಿದರು. ಈ ಮೂಲಕ ಬುಮ್ರಾ ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಶುಭಮನ್ ಗಿಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಅವರಿಗಿಂತ ಹೆಚ್ಚು ಎಸೆತವನ್ನು ಎದುರಿಸಿದರು.
ಬುಮ್ರಾ ಔಟ್ ಆಗುತ್ತಾ ಇದ್ದಂತೆ ಮೊಹಮ್ಮದ್ ಸಿರಾಜ್ ಮೈದಾನಕ್ಕೆ ಇಳಿದರು. ಇವರು ಸಹ ತಮ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಕೊನೆಯ ವಿಕೆಟ್‌ಗೆ ಭಾರತ 80 ಎಸೆತಗಳಲ್ಲಿ 23 ರನ್ ಸೇರಿಸಿತು. ಟೀಮ್ ಇಂಡಿಯಾ ಆಲ್ ಔಟ್ ಆಗಿದ್ದಾಗ 74.5 ಓವರ್ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications