Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Team India: ಭಾರತದ ಮುಂದಿನ ಟೆಸ್ಟ್‌ ಸರಣಿ ಯಾವಾಗ? ಯಾರ ವಿರುದ್ಧ ಆಡಲಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನವನ್ನು ನೀಡಿದ್ದು ಸೋಲು ಕಂಡಿದೆ. ಸರಣಿಯಲ್ಲಿ ಭಾರತ ಪರ್ತ್‌ ಅಂಗಳದಲ್ಲಿ ಗೆಲುವು ದಾಖಲಿಸಿದ್ದು ಬಿಟ್ಟರೆ, ಉಳಿದ ಎಲ್ಲ ಪಂದ್ಯಗಳಲ್ಲಿ ನಿರಾಸೆ ಅಪ್ಪಿಕೊಂಡಿದೆ. ಭಾರತ ಈ ಸರಣಿಯನ್ನು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕೆ ಇಳಿದಿತ್ತು. ಆದರೆ ನಿರಾಸೆ ಟೀಮ್ ಇಂಡಿಯಾವನ್ನು ಅಪ್ಪಿಕೊಂಡಿದೆ. ಹೀಗಾಗಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ಆಸೆಯನ್ನು ಕೈ ಬಿಟ್ಟಿದೆ.

ಭಾರತ ಕಳೆದ ಕೆಲವು ತಿಂಗಳುಗಳಿಂದ ಸತತ ಟೆಸ್ಟ್‌ ಸರಣಿಯನ್ನು ಆಡುತ್ತಿದೆ. ಆದರೆ ಇನ್ನು ಆರು ತಿಂಗಳು ಭಾರತೀಯ ಆಟಗಾರರು ವೈಟ್‌ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆರು ತಿಂಗಳು ಗಳ ಬಳಿಕವೇ ಟೀಮ್ ಇಂಡಿಯಾ ಮುಂದಿನ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ನಡುವೆ ಭಾರತ ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿ, ಚಾಂಪಿಯನ್ಸ್ ಟ್ರೋಫಿಗಳಲ್ಲಿ ಭಾಗವಹಿಸಲಿದೆ. ಇದೇ ವೇಳೆ ಭಾರತದಲ್ಲಿ ಐಪಿಎಲ್ ನಡೆಯುತ್ತಿದ್ದು, ಆಟಗಾರರು ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕವೇ ಮುಂದಿನ ಲೆಕ್ಕಾಚಾರ.

India s Next Test Series Five-Match Clash Against England in June 2025

ಟೆಸ್ಟ್‌ ಆಡಲು ಭಾರತ ಕಣಕ್ಕೆ ಇಳಿಯುವುದು ಯಾವಾಗ?

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ನೀಡಿರುವ ಪ್ರದರ್ಶನ ಟೀಕೆಗೆ ಗುರಿಯಾಗಿದೆ. ಇನ್ನು ಸ್ಟಾರ್ ಆಟಗಾರರ ಫಾರ್ಮ್‌ ಟೀಮ್ ಮ್ಯಾನೇಜ್ಮೆಂಟ್‌ ಟೆನ್ಷನ್‌ ಹೆಚ್ಚಿಸಿತ್ತು. ಹೀಗಾಗಿ ಸರಣಿಯ ಮಧ್ಯದಲ್ಲಿ ರೋಹಿತ್ ಶರ್ಮಾ ಕೊನೆಯ ಪಂದ್ಯದಿಂದ ದೂರ ಉಳಿದರು. ಹೀಗಾಗಿ ಟೀಮ್ ಇಂಡಿಯಾ ಜಸ್ಪ್ರಿತ್ ಬುಮ್ರಾ ನಾಯಕತ್ವದಲ್ಲಿ ಕಾಣಿಸಿಕೊಂಡಿತು. ಈ ಸರಣಿ ಸೋಲಿನ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ​​ಸೈಕಲ್‌ನಲ್ಲಿ ಟೀಮ್ ಇಂಡಿಯಾ ತನ್ನ ಅಭಿಯಾನ ಪೂರ್ಣಗೊಳಿಸಿದೆ.

ಭಾರತ ತಂಡದ ಆಟಗಾರರು ಇನ್ನು ಆರು ತಿಂಗಳುಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವುದನ್ನು ಕಾಣಬಹುದು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ 2025-27ರ ಸೈಕಲ್‌ನಲ್ಲಿ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ. ಈ ಸರಣಿ ಇಂಗ್ಲೆಂಡ್‌ನಲ್ಲಿ ನಡೆಯಲಿದ್ದು, ಭಾರತ ಆಂಗ್ಲರ ನಾಡಿಗೆ ಪ್ರವಾಸ ಬೆಳೆಸಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಇದನ್ನು ಜೂನ್ 20 ರಿಂದ ಆಗಸ್ಟ್ 04 ರವರೆಗೆ ಆಯೋಜಿಸಲಾಗುತ್ತಿದೆ.

India s Next Test Series Five-Match Clash Against England in June 2025

ಟೀಮ್ ಇಂಡಿಯಾ 2021ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿತ್ತು. ಈ ವೇಳೆಯೂ ಎರಡೂ ತಂಡಗಳ ನಡುವೆ ಐದು ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದವು. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಿಲ್ಲ. ಆಗ ಭಾರತ ತಂಡದ ಚುಕ್ಕಾಣಿ ವಿರಾಟ್‌ ಕೊಹ್ಲಿ ಕೈ ಯಲ್ಲಿತ್ತು.

ಭಾರತ, ಇಂಗ್ಲೆಂಡ್ ಸರಣಿಯ ವೇಳಾ ಪಟ್ಟಿ

  • ಮೊದಲ ಟೆಸ್ಟ್‌- ಜೂನ್‌ 20 ರಿಂದ 25, ಹೆಡಿಂಗ್ಲಿ
  • ಎರಡನೇ ಟೆಸ್ಟ್‌- ಜುಲೈ 02 ರಿಂದ 06, ಎಡ್ಜ್‌ಬಾಸ್ಟನ್
  • ಮೂರನೇ ಟೆಸ್ಟ್‌, ಜುಲೈ 10 ರಿಂದ 14, ಲಾರ್ಡ್ಸ್
  • ನಾಲ್ಕನೇ ಟೆಸ್ಟ್‌, ಜುಲೈ 23 ರಿಂದ 27, ಓಲ್ಡ್ ಟ್ರಾಫರ್ಡ್
  • ಐದನೇ ಟೆಸ್ಟ್‌: ಜುಲೈ 31 ರಿಂದ ಆಗಸ್ಟ್‌ 04, ಕೆನ್ನಿಂಗ್ಟನ್ ಓವಲ್

Story first published: Monday, January 6, 2025, 10:32 [IST]
Other articles published on Jan 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+