For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ಭಾರತದ ಸಾಧನೆ ಹೇಗಿದೆ? ಏನು ಹೇಳುತ್ತವೆ ಅಂಕಿ ಅಂಶ

ಟೀಮ್ ಇಂಡಿಯಾ ಆಟಗಾರರು ಬುಧವಾರ ನವದೆಹಲಿಯಿಂದ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಲಿದೆ. ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬಲಿಷ್ಠ ಎರಡು ತಂಡಗಳು ಮತ್ತೆ ಅಂಗಳದಲ್ಲಿ ಮುಖಾಮುಖಿ ಆಗಲಿವೆ. ಟೀಮ್ ಇಂಡಿಯಾವನ್ನು ಈ ಬಾರಿ ಏಕದಿನ ಫಾರ್ಮೆಟ್‌ನಲ್ಲಿ ಶುಭಮನ್‌ ಗಿಲ್‌ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಆಸೀಸ್‌ ತಂಡದ ನಾಯಕರಾಗಿ ಮಿಚೆಲ್‌ ಮಾರ್ಷ್ ಕಣಕ್ಕೆ ಇಳಿಯಲಿದ್ದಾರೆ. ಏಕದಿನ ಫಾರ್ಮೆಟ್‌ನಲ್ಲಿ ಶುಭಮನ್‌ ಗಿಲ್‌ಗೆ ಈ ಸರಣಿಯ ಮೂಲಕ ದೊಡ್ಡ ಟೆಸ್ಟ್‌ ಎದುರಾಗಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಣಕ್ಕೆ ಇಳಿದಾಗಲೆಲ್ಲಾ ಜಿದ್ದು ಕಂಡು ಬರುತ್ತದೆ. ಈಗಾಗಲೇ ಉಭಯ ತಂಡಗಳು 152 ಏಕದಿನ ಪಂದ್ಯಗಳನ್ನು ಕಣಕ್ಕೆ ಇಳಿದಿವೆ. ಈ ವೇಳೆ ಆಸ್ಟ್ರೇಲಿಯಾ 84, ಭಾರತ 58 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಉಭಯ ತಂಡಗಳ ನಡುವಣ ಏಕದಿನ ಸರಣಿಗೆ 45 ವರ್ಷಗಳ ಇತಿಹಾಸ ಇದೆ. ಹೀಗಾಗಿ ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

India s ODI Record in Australia Stats Reveal a Tough Challenge Ahead of the Series

ಕಂಗರೂ ನಾಡಿನಲ್ಲಿ ಸರಣಿ ಗೆಲ್ಲುವುದು ಎಂದರೆ ಸವಾಲು. ಈ ಸವಾಲಿಗೆ ಟೀಮ್ ಇಂಡಿಯಾ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಭಾರತ ಈ ವರೆಗೆ ಆಸ್ಟ್ರೇಲಿಯಾದಲ್ಲಿ 54 ಏಕದಿನ ಪಂದ್ಯಗಳನ್ನು ಆಡಿದ್ದು, 14ರಲ್ಲಿ ಗೆಲುವು, 38ರಲ್ಲಿ ಸೋಲು ಕಂಡಿದ್ದು, 2 ಪಂದ್ಯಗಳು ಡ್ರಾ ಆಗಿವೆ. ಈ ಅಂಕಿ ಅಂಶಗಳನ್ನು ನೋಡಿದಾಗ ಆಸ್ಟ್ರೇಲಿಯಾದಲ್ಲಿ ಭಾರತ ಏಕದಿನ ಫಾರ್ಮೆಟ್‌ನಲ್ಲಿ 26 ಪ್ರತಿಶತ ಪಂದ್ಯಗಳನ್ನು ಮಾತ್ರ ಗೆದ್ದಿದೆ. ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳ ಪ್ರದರ್ಶನ ಸುಧಾರಣೆ ಕಂಡಿದ್ದು, ಜಿದ್ದು ಏರ್ಪಟ್ಟಿದೆ.

ಹೇಗಿದೆ ಭಾರತದ ಅಂಕಿ ಅಂಶ

ಭಾರತ ಆಸ್ಟ್ರೇಲಿಯಾದಲ್ಲಿ ನವೆಂಬರ್ 29, 2020 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 338 ರನ್‌ ಸೇರಿಸಿತ್ತು. ಇನ್ನು ಭಾರತ, ಆಸೀಸ್ ಪ್ರವಾಸದಲ್ಲಿ ಕಂಡ ದೊಡ್ಡ ಗೆಲುವನ್ನು ನೋಡುವುದಾದರೆ. 1991 ರಲ್ಲಿ ಪರ್ತ್‌ನಲ್ಲಿ 107 ರನ್‌ಗಳ ಅಮೋಘ ಜಯ ಸಾಧಿಸಿದ್ದು, ಮೆಲ್ಬೋರ್ನ್‌ನಲ್ಲಿ 2ಬಾರಿ 8 ವಿಕೆಟ್‌ಗಳಿಂದ ಮಣಿಸಿದೆ.

India s ODI Record in Australia Stats Reveal a Tough Challenge Ahead of the Series

ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಪ್ರಾಬಲ್ಯ ಸ್ಪಷ್ಟವಾಗಿ ಕಾಣುತ್ತದೆ. ಇವರು ಆಡಿದ 19 ಏಕದಿನ ಪಂದ್ಯಗಳಲ್ಲಿ 990 ರನ್‌ ಸಿಡಿಸಿದ್ದಾರೆ. ಇದರಲ್ಲಿ 4 ಶತಗಳು ಸೇರಿವೆ. ಅಲ್ಲದೆ 29 ಸಿಕ್ಸರ್‌ ಸಹ ಬಾರಿಸಿದ್ದಾರೆ. 2016ರ ಪ್ರವಾಸದಲ್ಲಿ ನಡೆದಿದ್ದ 5 ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್‌ 441 ರನ್‌ ಸೇರಿಸಿದ್ದು ಇತಿಹಾಸ.

Story first published: Thursday, October 16, 2025, 11:22 [IST]
Other articles published on Oct 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+