Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆನ್‌ಲೈನ್‌ ಗೇಮ್ಸ್‌ ನಿಷೇಧ; 2 ಲಕ್ಷ ಉದ್ಯೋಗ ನಷ್ಟವಾಗುವ ಆತಂಕ ವ್ಯಕ್ತಪಡಿಸಿದ ಉದ್ಯಮ

ಆನ್‌ಲೈನ್‌ನಲ್ಲಿ ಹಣ ಹೂಡಿ ಆಡುವ ಗೇಮ್‌ಗಳನ್ನು ನಿಷೇಧಿಸುವ ಬಿಲ್‌ ಬುಧವಾರ ಲೋಕಸಭೆಯಲ್ಲಿ ಅಂಗಿಕಾರವಾಗಿದೆ. ಈ ಮೂಲಕ ಜೂಜು ಆಧಾರಿತ ಕ್ರೀಡಾ ಪದ್ಧತಿಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಇಂತಹ ಆಟಗಳ ಮೂಲಕ ಬೆಟ್ಟಿಂಗ್ ಉತ್ತೇಜಿಸಿದರೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಆದರೆ ಆನ್‌ಲೈನ್‌ ಗೇಮ್‌ಗಿಂಗ್‌ ಕಂಪನಿಗಳು ಇದನ್ನು ವಿರೋಧಿಸಿವೆ. ಅಲ್ಲದೆ ಈ ವಿಧೇಯಕ ಜಾರಿ ಆದಲ್ಲಿ 20 ಸಾವಿರಕ್ಕೂ ಹೆಚ್ಚಿನ ಉದ್ಯೋಗ ನಷ್ಟವಾಗುತ್ತದೆ. 300 ಕಂಪನಿಗಳು ಬಂದ್ ಆಗಲಿವೆ ಎಂದು ತಿಳಿಸಿದೆ.

ಸರ್ಕಾರದ ಈ ಕ್ರಮಕ್ಕೆ ಗೇಮಿಂಗ್‌ ಇಂಡಸ್ಟ್ರೀ ಬೇಸರ ವ್ಯಕ್ತ ಪಡಿಸಿದೆ. ಅಲ್ಲದೆ ಈ ಬಿಲ್‌ ಡಿಜಿಟಲ್ ಕೈಗಾರಿಕೆಗಳ ಭವಿಷ್ಯ ಅಪಾಯಕ್ಕೆ ಸಿಲುಕುತ್ತದೆ ಎಂದು ಉದ್ಯಮಿಗಳ ಮೂಲದಿಂದ ತಿಳಿದು ಬಂದಿದೆ. ಈ ಬಿಲ್‌ ಯಥಾವತ್ ಆಗಿ ಜಾರಿ ಆದಲ್ಲಿ ಉದ್ಯಮಕ್ಕೆ ಹೊಡೆತ ಬೀಳಲಿದೆ. ಉದ್ಯೋಗ ಅವಕಾಶಗಳು ನಶಿಸಿಹೋಗುತ್ತವೆ ಎಂದು ಅಖಿಲ್ ಭಾರತೀಯ ಗೇಮಿಂಗ್ ಮಹಾಸಂಘ (AIGF) ತಿಳಿಸಿದೆ.

India s Online Gaming Ban Industry Warns of Job Losses Economic Impact

ಸರ್ಕಾರದ ಈ ಕ್ರಮದ ಬಗ್ಗೆ ಉದ್ಯಮ ತಜ್ಞರು ಹೇಳಿಕೆಗಳನ್ನು ನೀಡಿದ್ದು, ಈ ಬಿಲ್‌ ಕಾರ್ಯರೂಪಕ್ಕೆ ಬಂದಲ್ಲಿ ಸಾವಿರಾರು ಕಂಪನಿಗಳು ಬಂದ್ ಆಗುತ್ತವೆ. ಅಲ್ಲದೆ ಲಕ್ಷಾಂತರ ಉದ್ಯೋಗ ನಷ್ಟವಾಗುತ್ತದೆ. ಅಲ್ಲದೆ ಸರ್ಕಾರದ ಬೊಕ್ಕಸಕ್ಕೆ ಕೊಂಚ ಹೊಡೆತ ಬೀಳಲಿದೆ ಎಂದು ಸೂಚಿಸಿದೆ. ಈ ಕಾನೂನನ್ನು ಜಾರಿ ಆದಲ್ಲಿ ಆದಾಯ ಗಳಿಸಲು ಸ್ಪಷ್ಟ ಮಾರ್ಗವಿಲ್ಲದ ಕಾರಣ ಗೇಮಿಂಗ್ ಕಂಪನಿ ಸ್ಥಗಿತಗೊಳಿಸಬೇಕಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ನಿಷೇಧಿಸುವ ಬದಲು, ಸರ್ಕಾರವು ಉತ್ತಮ ನಿಯಮಗಳನ್ನು ರೂಪಿಸುವತ್ತ ಗಮನಹರಿಸಬೇಕು ಎಂದು ಗೇಮಿಂಗ್ ಸಂಸ್ಥೆಗಳು ತಿಳಿಸಿವೆ.

ತಜ್ಞರ ಹೇಳಿದ್ದೇನು?

ಮೂಲಗಳ ಪ್ರಕಾರ ದೇಶೀಯ ಹಾಗೂ ರಾಷ್ಟ್ರೀಯ ಕ್ರೀಡೆಗಳಿಗೆ ಪ್ರಾಯೋಜಕರ ಕೊರತೆ ಎದ್ದು ಕಾಣಬಹುದಾಗಿದೆ. ಅಲ್ಲದೆ ಈ ಲೀಗ್‌ಗಳ ಮೌಲ್ಯದ ಮೇಲೂ ಈ ಕಾನೂನು ಪ್ರಭಾವ ಬೀರಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅನೇಕ ಕ್ರೀಡೆಗಳ ಉಳುವಿಗೆ ಈ ಗೇಮಿಂಗ್ ಪ್ಲಾಟ್‌ ಫಾರ್ಮ್‌ಗಳು ಸಹಾಯ ಮಾಡುತ್ತಿವೆ. ಈ ಗೇಮಿಂಗ್‌ ರದ್ದುಗೊಳಿಸಿದರೆ, ಕ್ರೀಡೆಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿಸಿದ್ದಾರೆ. ಈ ಕಾನೂನು ರಚನೆಗೆ ಮುನ್ನವೇ ಸರ್ಕಾರ ಕಂಪನಿಳೊಂದಿಗೆ ಚರ್ಚೆ ನಡೆಸಿದೆ. ಆದರೆ ಉದ್ಯಮಕ್ಕೆ ಹಾನಿ ಉಂಟಾಗುವ ಬಗ್ಗೆ ಯಾವುದೇ ಮಹತ್ವದ ಚರ್ಚೆ ನಡೆದಿಲ್ಲ ಎಂದು ತಿಳಿದು ಬಂದಿದೆ.

India s Online Gaming Ban Industry Warns of Job Losses Economic Impact

ವೆಂಚರ್ ಕ್ಯಾಪಿಟಲ್ ಸಂಸ್ಥೆ ಲುಮಿಕೈ ಪ್ರಕಾರ, ಭಾರತೀಯ ಗೇಮಿಂಗ್ ಮಾರುಕಟ್ಟೆಯ ಮೌಲ್ಯ $3.8 ಬಿಲಿಯನ್ ಆಗಿದ್ದು, 2029 ರ ವೇಳೆಗೆ $9.2 ಬಿಲಿಯನ್‌ಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

Story first published: Thursday, August 21, 2025, 10:34 [IST]
Other articles published on Aug 21, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+