IND vs ENG Test: ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬಿಟ್ಟ ಕ್ಯಾಚ್‌ಗಳು ಎಷ್ಟು?
ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್-ತೆಂಡೂಲ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡ ಅಲ್ಪ ಮೊತ್ತದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಫೀಲ್ಡರ್‌ಗಳು ಸಾಲು ಸಾಲು ಕ್ಯಾಚ್‌ಗಳನ್ನು ಬಿಟ್ಟು ಕೈ ಚೆಲ್ಲಿದರು. ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದ್ದ ಬೌಲರ್‌ಗಳ ಖಾತೆಯಲ್ಲಿ ತಾವು ಅಂದುಕೊಂಡಷ್ಟು ವಿಕೆಟ್‌ಗಳು ಬರಲಿಲ್ಲ. ಇದಕ್ಕೆ ಕಾರಣ ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್. ಹಾಗಿದ್ದರೆ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬಿಟ್ಟ ಕ್ಯಾಚ್‌ಗಳು ಎಷ್ಟು ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಸಾಲು ಸಾಲು ಕ್ಯಾಚ್‌ಗಳನ್ನು ಕೈ ಚೆಲ್ಲಿದೆ. ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಜಸ್ಪ್ರಿತ್ ಬುಮ್ರಾ ಅವರ ಎಸೆತವನ್ನು ತಪ್ಪಾಗಿ ಗ್ರಹಿಸಿದ ಬೆನ್ ಡಕೆಟ್ ಕಟ್ ಮಾಡಿದರು. ಚೆಂಡು ಗಲ್ಲಿಯಲ್ಲಿದ್ದ ಜೈಸ್ವಾಲ್ ಕಡೆಗೆ ಸಾಗಿತು. ಆದರೆ ಜೈಸ್ವಾಲ್ ಈ ಕ್ಯಾಚ್ ಪಡೆಯುವಲ್ಲಿ ವಿಫಲರಾದರು. ಡಕೆಟ್ ಬಳಿಕ 62 ರನ್‌ಗಳ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾದರು.

ಇದಾದ ಬಳಿಕ ಬೆನ್ ಡಕೆಟ್ ಅವರಿಗೆ ಮತ್ತೊಮ್ಮೆ ಜೀವದಾನ ಲಭಿಸಿತು. ಬುಮ್ರಾ ಅವರ ಎಸೆತದಲ್ಲೇ ಜಡೇಜಾ ಕ್ಯಾಚ್ ಬಿಟ್ಟರು. ಇನಿಂಗ್ಸ್‌ನ ಏಳನೇ ಓವರ್‌ನ ಕೊನೆಯ ಎಸೆತದಲ್ಲಿ ಬುಮ್ರಾ ಡಕೆಟ್‌ಗೆ ಖೆಡ್ಡಾ ತೋಡಿದ್ದರು. ಆದರೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ, ಆಲ್‌ರೌಂಡರ್ ರವೀಂದ್ರ ಜಡೇಜಾ ಕ್ಯಾಚ್ ಚೆಲ್ಲಿದರು. ಈ ಜೀವದಾನವೂ ಭಾರತಕ್ಕೆ ಭಾರವಾಯಿತು.
ಪೋಪ್ ಕ್ಯಾಚ್ ಬಿಟ್ಟ ಜೈಸ್ವಾಲ್
ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಸಾಲು ಸಾಲು ಅವಕಾಶಗಳನ್ನು ಸೃಷ್ಟಿಸಿದರು. ಆದರೆ ಈ ಅವಕಾಶಗಳನ್ನು ಕೈ ಚೆಲ್ಲಿದರು. ಬುಮ್ರಾ ಅವರು ಎಸೆದ ಔಟ್ ಸೈಡ್ ಆಫ್ ಲೆಂತ್ ಡಿಲೇವರಿಯನ್ನು ಒಲಿ ಪೋಪ್ ಕೆಣಕಿದರು. ಈ ವೇಳೆ ಮೂರನೇ ಸ್ಲಿಪ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್ ಸುಲಭ ಕ್ಯಾಚ್ ಕೈಚೆಲ್ಲಿದರು. ಈ ಕ್ಯಾಚ್ ಕೈ ಬಿಟ್ಟಿತ್ತು ತಂಡಕ್ಕೆ ಬಹುವಾಗಿ ಕಾಡಿತು. ಒಲಿ ಪೋಪ್ 14 ಬೌಂಡರಿ ನೆರವಿನಿಂದ 106 ರನ್ ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ಆಧಾರವಾದರು.
ಬ್ರೂಕ್‌ಗೂ ಜೀವದಾನ
ಒಂದು ರನ್‌ಗಳಿಂದ ಶತಕ ವಂಚಿತರಾದ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಬ್ರೂಕ್ ಅವರಿಗೂ ಒಂದು ಜೀವದಾನ ಲಭಿಸಿತು. ರವೀಂದ್ರ ಜಡೇಜಾ ಎಸೆತದಲ್ಲಿ, ಬ್ರೂಕ್ ಆಫ್ ಸ್ಟಂಪ್ ಆಚೆಯ ಚೆಂಡನ್ನು ಕೆಣಕಿದರು. ಆದರೆ ವಿಕೆಟ್ ಕೀಪರ್ ರಿಷಭ್ ಪಂತ್ ಇದನ್ನು ಜಡ್ಜ್ ಮಾಡಿ ಹಿಡಿಯುವಲ್ಲಿ ವಿಫಲರಾದರು. ಪರಿಣಾಮ ಬ್ರೂಕ್ ಸಹ ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಇನ್ನು ಬುಮ್ರಾ ಎಸೆತದಲ್ಲಿ ಬ್ರೂಕ್‌ಗೆ ಮತ್ತೊಂದು ಜೀವದಾನ ಸಹ ಲಭಿಸಿತು. ಈ ವೇಳೆ ಹ್ಯಾರಿ ಬ್ರೂಕ್ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಗಲ್ಲಿ ಕಡೆ ಚೆಂಡನ್ನು ಅಟ್ಟಿದರು. ಆದರೆ ಅಲ್ಲಿ ಫಿಲ್ಡ್ ಮಾಡ್ತಾ ಇದ್ದ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ಈ ಕ್ಯಾಚ್ ಕೈ ಚೆಲ್ಲಿದರು.
ಜೇಮಿ ಸ್ಮಿತ್‌ಗೂ ಮೊದಲ ಇನಿಂಗ್ಸ್‌ನಲ್ಲಿ ಒಂದು ಜೀವದಾನ ಲಭಿಸಿದೆ. ಜಡೇಜಾ ಎಸೆತದಲ್ಲಿ ಪದಾರ್ಪಣಾ ಪಂದ್ಯವನ್ನು ಆಡುತ್ತಿದ್ದ ಸಾಯಿ ಸುದರ್ಶನ್ ಕ್ಯಾಚ್ ಬಿಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications