For Quick Alerts
ALLOW NOTIFICATIONS  
For Daily Alerts
 

China Open: ಭಾರತದ ಜೋಡಿಗೆ ಆಘಾತ

ಚೀನಾ ಓಪನ್‌ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರ ಅಭಿಯಾನ ಅಂತ್ಯವಾಗಿದೆ. ಭಾರತದ ಸ್ಟಾರ್ ಬ್ಯಾಟರ್ ಸಾತ್ವಿಕ್ ಸಾಯಿರಾಜ್‌ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಶನಿವಾರ ನಿರಾಸೆ ಅನುಭವಿಸಿದೆ. ಪುರುಷರ ಡಬಲ್ಸ್‌ ಸೆಮಿಫೈನಲ್ಸ್‌ ಪಂದ್ಯದಲ್ಲಿ ಭಾರತದ ಜೋಡಿ ಅಂಕಗಳನ್ನು ಕಲೆ ಹಾಕುವಲ್ಲಿ ಪರದಾಟ ನಡೆಸಿತು. ಅಲ್ಲದೆ ಫೈನಲ್‌ಗೆ ಪ್ರವೇಶ ಪಡೆಯುವ ಆಸೆಯನ್ನು ಕೈ ಚೆಲ್ಲಿತು.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್‌ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಎರಡು ನೇರ ಸೆಟ್‌ಗಳಲ್ಲಿ ಪಂದ್ಯವನ್ನು ಸೋತಿತು. ಈ ಜೋಡಿ ಸೆಮಿಫೈನಲ್‌ ಪಂದ್ಯದಲ್ಲಿ ಮಲೇಷ್ಯಾದ ಆರನ್ ಚಿಯಾ, ವೂಯಿ ಯಿಕ್ ವಿರುದ್ಧ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಭಾರತದ ಜೋಡಿ 13-21, 17-21 ರಿಂದ ಸೆಮಿಫೈನಲ್‌ ಪಂದ್ಯವನ್ನು ಕೈ ಚೆಲ್ಲಿದೆ. ವಿಜೇತ ಮಲೇಷ್ಯಾದ ಜೋಡಿ ಫೈನಲ್‌ ಪಂದ್ಯದಲ್ಲಿ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್, ಮುಹಮ್ಮದ್ ಶೋಹಿಬುಲ್ ಫಿಕ್ರಿ ವಿರುದ್ಧ ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿದೆ.

India s Satwik-Chirag Duo Falls in China Open Semifinals Campaign Ends

ಭಾರತದ ಬ್ಯಾಡ್ಮಿಂಟನ್ ಆಟಗಾರರು ಮೊದಲ ಗೇಮ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಪರಿಣಾಮ ಅಂಕದ ಖಾತೆಯನ್ನು ಮೊದಲು ಓಪನ್ ಮಾಡಿದರು. ಆದರೆ ಬಳಿಕ ಮಲೇಷ್ಯಾ ಜೋಡಿ ಅಬ್ಬರದ ಆಟವನ್ನು ಆಡಿತು. 5-5 ಅಂಕಗಳಲ್ಲಿ ಸಮಬಲದಲ್ಲಿ ಸಾಗುತ್ತಿದ್ದ ಜೋಡಿಯ ಆಟಕ್ಕೆ ಮಲೇಷ್ಯಾ ಜೋಡಿ ಬ್ರೇಕ್ ಹಾಕಿತು. ಬಳಿಕ ಭಾರತೀಯ ಆಟಗಾರರು 8-9 ಅಂಕಗಳಿಂದ ಹಿನ್ನಡೆ ಅನುಭವಿಸಿದರು. ಪರಿಣಾಮ ಮೇಲಷ್ಯಾದ ಆರನ್ ಚಿಯಾ, ವೂಯಿ ಯಿಕ್ ಅಂಕಗಳನ್ನು ಬಾಚಿಕೊಂಡು ಜಯ ಸಾಧಿಸಿತು.

ಭರ್ಜರಿ ಆಟ

ಎರಡನೇ ಹಾಗೂ ನಿರ್ಣಾಯಕ ಗೇಮ್‌ ಜಿದ್ದಾಜಿದ್ದಿನಿಂದ ಕೂಡಿತ್ತು. ಈ ಪಂದ್ಯದಲ್ಲಿ ಗೆಲುವು ದಾಖಲಿಸಲೇ ಬೇಕು ಎಂಬ ಹಠದಿಂದ ಭಾರತದ ಜೋಡಿ ಆಟವನ್ನು ಆಡಿತು. ಈ ಆಟದ ಆರಂಭದಲ್ಲಿ ಅಂಕಗಳನ್ನು ಉಭಯ ಆಟಗಾರರು ಸುಲಭವಾಗಿ ಬಿಟ್ಟುಕೊಡಲಿಲ್ಲ. ಪಂದ್ಯ 5 ಅಂಕಗಳಿಂದ ಸಮಬಲದಲ್ಲಿ ಸಾಗುತ್ತಿದ್ದಾಗ ಮಲೇಷ್ಯಾ ಜೋಡಿ ಸತತ 3 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಆದರೂ ಸಹ ಭಾರತೀಯ ಆಟಗಾರರು ಪುಟಿದೇಳುವ ಸೂಚನೆ ನೀಡಿದರು. ಅಲ್ಲದೆ 16 ಅಂಕಗಳಿಂದ ಸಮಬಲ ಸಾಧಿಸಿದ ಪಂದ್ಯದಲ್ಲಿ ಹೊಸ ಜೀವ ತುಂಬಿದರು. ಆದರೆ ಈ ಬಳಿಕವೂ ಆರನ್ ಚಿಯಾ, ವೂಯಿ ಯಿಕ್ ಜೋಡಿ ಸತತ ಮೂರು ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಅಲ್ಲದೆ 42 ನಿಮಿಷದಲ್ಲಿ ಪಂದ್ಯವನ್ನು ಗೆದ್ದು ಬೀಗಿತು.

Story first published: Saturday, July 26, 2025, 20:39 [IST]
Other articles published on Jul 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+