ICC Women's World Cup 2025: ಇಂಗ್ಲೆಂಡ್ ವಿರುದ್ಧ ಭಾರತ ಸೋತರೂ ಸೆಮಿಫೈನಲ್‌ಗೆ ಪ್ರವೇಶಿಸಿಬಹುದು? ಹೇಗೆ?
ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್ 2025 ನಡೆಯುತ್ತಿದೆ. ಈಗ ಈ ವಿಶ್ವಕಪ್ ರೋಚಕತೆ ಹುಟ್ಟಿಸಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಲೀಗ್ ಹಂತದ ಮಹತ್ವದ ಪಂದ್ಯ ಭಾನುವಾರ ಇಂದೋರ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 4 ರನ್‌ಗಳ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್ ಪ್ರಸಕ್ತ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ಈ ವಿಶ್ವಕಪ್‌ನಲ್ಲಿ ಈಗ ಮೂರು ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದಂತೆ ಆಗಿದೆ. ಇನ್ನು ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಭಾರತ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡರೂ ಸಹ ಉಪಾಂತ್ಯವನ್ನು ಪ್ರವೇಶಿಸುವ ಆಸೆಯನ್ನು ಇನ್ನು ಜೀವಂತವಾಗಿಟ್ಟುಕೊಂಡಿದೆ.
ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾದಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಪಂದ್ಯ ರದ್ದಾಗಿದ್ದು, 9 ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇನ್ನು ಇಂಗ್ಲೆಂಡ್ ಸಹ 9 ಅಂಕಗಳನ್ನು ಕಲೆ ಹಾಕಿದ್ದು ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಮೂರು ತಂಡಗಳು ಉಪಾಂತ್ಯ ತಲುಪಿವೆ.

ಇನ್ನು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ 4 ಅಂಕಗಳನ್ನು ಕಲೆ ಹಾಕಿದೆ. ನ್ಯೂಜಿಲೆಂಡ್ ತಂಡ ಆಡಿದ 5 ಪಂದ್ಯಗಳಲ್ಲಿ 4 ಅಂಕ ಸೇರಿಸಿದೆ. ಈ ಎರಡೂ ತಂಡಗಳು ಸಹ ಸೆಮೀಸ್ ಹಂತ ತಲುಪುವ ಆಸೆಯನ್ನು ಹೊಂದಿವೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಅದರ ನಂತರ, ಟೀಮ್ ಇಂಡಿಯಾ ಅಕ್ಟೋಬರ್ 26 ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ಟೀಮ್ ಇಂಡಿಯಾ ತಮ್ಮ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ, ಅವರು ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಸುಲಭವಾಗಿ ತಲುಪ ಬಹುದಾಗಿದೆ.
3 ತಂಡಗಳಿಗೆ ಇಲ್ಲ ಅವಕಾಶ
ಅಂಕಪಟ್ಟಿಯಲ್ಲಿ 6ನೇ ಬಾಂಗ್ಲಾದೇಶ, 7ನೇ ಸ್ಥಾನದಲ್ಲಿರುವ ಶ್ರೀಲಂಕಾ, 8ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಕಳೆದುಕೊಂಡಿವೆ. ಆದರೆ ಇನ್ನು ಉಳಿದಿರುವ ಒಂದು ಸೆಮಿಫೈನಲ್ ಸ್ಥಾನಕ್ಕಾಗಿ ಎರಡು ತಂಡಗಳು ಕಾದಾಟ ನಡೆಸಲಿವೆ. ಭಾರತ ತನ್ನ ಎರಡು ಪಂದ್ಯಗಳನ್ನು ಗೆದ್ರೆ ಮುಂದಿನ ಹಂತವನ್ನು ಸುಲಭವಾಗಿ ತಲುಪಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications