Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಭಾರತದ ಶ್ರೀ ಚರಣಿ ನಾಮ ನಿರ್ದೇಶನ

ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಯುವ ಸ್ಪಿನ್ ಬೌಲರ್‌ ಶ್ರೀ ಚರಣಿ ಅವರನ್ನು ಐಸಿಸಿ ಮಹಿಳಾ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ರೇಸ್‌ನಲ್ಲಿ ಭಾರತದ ಆಟಗಾರ್ತಿಯರ ಜೊತೆಗೆ ಇನ್ನು ಇಬ್ಬರು ಆಟಗಾರ್ತಿಯರು ಇದ್ದಾರೆ.

ಶ್ರೀ ಚರಣಿಯ ಜೊತೆಗೆ ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಆಟಗಾರ್ತಿಯರ ಪಟ್ಟಿಯಲ್ಲಿ ಸ್ಕಾಟ್ಲೆಂಡ್ ನಾಯಕಿ ಕ್ಯಾಥರೀನ್ ಬ್ರೈಸ್ ಮತ್ತು ಇಂಗ್ಲೆಂಡ್‌ನ ಸ್ಟಾರ್ ಓಪನರ್ ಡ್ಯಾನಿ ವ್ಯಾಟ್-ಹಾಡ್ಜ್ ಸಹ ಸೇರಿದ್ದಾರೆ. ಈ ಮೂವರು ಆಟಗಾರ್ತಿಯರು ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ತಮ್ಮ ತಮ್ಮ ತಂಡಗಳ ಪರ ಗೆಲುವಿನಲ್ಲಿ ಮಿಂಚಿದ್ದರು.

Shree Charani

ಶ್ರೀ ಚರಣಿ

ಟೀಮ್ ಇಂಡಿಯಾದ 21 ವರ್ಷದ ಎಡಗೈ ಸ್ಪಿನ್ ಬೌಲರ್‌ ಶ್ರೀ ಚರಣಿ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇವರು ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 8.35ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಚುಟುಕು ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ 3, ನೆದರ್‌ಲ್ಯಾಂಡ್ಸ್‌ ವಿರುದ್ಧ 4, ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಇವರು ತಮ್ಮ ಛಾಪನ್ನು ಮೂಡಿಸಿದ್ದಾರೆ. ಈ ಪ್ರದರ್ಶನದ ಆಧಾರದ ಮೇಲೆ ಇವರಿಗೆ ಐಸಿಸಿ ತಿಂಗಳು ಆಟಗಾರ್ತಿ ಪಟ್ಟಿಗೆ ಸ್ಥಾನ ನೀಡಲಾಗಿದೆ.

ಕ್ಯಾಥರೀನ್ ಬ್ರೈಸ್

ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಬ್ಬ ಆಟಗಾರ್ತಿ ಎಂದರೆ ಸ್ಕಾಟ್ಲೆಂಡ್ ನಾಯಕಿ ಕ್ಯಾಥರೀನ್ ಬ್ರೈಸ್. ಇವರು ತಮ್ಮ ಆಲ್‌ರೌಂಡರ್ ಪ್ರದರ್ಶನದ ಫಲವಾಗಿ ತಂಡಕ್ಕೆ ಆಧಾರವಾಗಿದ್ದಾರೆ. ಇವರು ಆಡಿದ 7 ಟಿ20 ಪಂದ್ಯಗಳಲ್ಲಿ 178 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್‌ 140 ಆಗಿದೆ. ಇದೇ ವೇಳೆ ಇವರು 7.10 ಎಕಾನಮಿಯೊಂದಿಗೆ 11 ವಿಕೆಟ್‌ ಪಡೆದಿದ್ದಾರೆ.

ಡ್ಯಾನಿ ವ್ಯಾಟ್-ಹಾಡ್ಜ್

ತಿಂಗಳ ಆಟಗಾರ್ತಿ ಪ್ರಶಸ್ತಿ ರೇಸ್‌ನಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಇದ್ದಾರೆ. ಇವರು ಆಡಿದ 6 ಟಿ20 ಪಂದ್ಯಗಳಲ್ಲಿ 71.75ರ ಸರಾಸರಿಯಲ್ಲಿ 287 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್‌ 151 ಆಗಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ್ದರು. ಇವರ ಸ್ಥಿರ ಪ್ರದರ್ಶನ ವೆಸ್ಟ್‌ ಇಂಡೀಸ್‌, ನ್ಯೂಜಿಲೆಂಡ್‌ ವಿರುದ್ಧವೂ ಮುಂದುವರೆದಿತ್ತು. ಇವರು ಟಿ20 ವಿಶ್ವಕಪ್‌ನಲ್ಲಿ 300ಕ್ಕೂ ಹೆಚ್ಚು ರನ್ ಬಾರಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

Story first published: Monday, July 13, 2026, 20:02 [IST]
Other articles published on Jul 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+