For Quick Alerts
ALLOW NOTIFICATIONS  
For Daily Alerts
 

ದೊಡ್ಡ ದಾಖಲೆಯ ಕನಸಿನಲ್ಲಿ ಸ್ಮೃತಿ ಮಂಧಾನ

ಟೀಮ್ ಇಂಡಿಯಾದ ಮಹಿಳಾ ತಂಡ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಆಡಲಾದ ಟಿ20 ಸರಣಿಯಲ್ಲಿ ಪ್ರವಾಸಿ ತಂಡ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈ ಸರಣಿಯ ಬಳಿಕ ಉಭಯ ತಂಡಗಳ ಮಧ್ಯ ಫೆಬ್ರವರಿ 24 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದಾದ ಬಳಿಕ ಎರಡೂ ತಂಡಗಳು ಒಂದೇ ಒಂದು ಟೆಸ್ಟ್ ಪಂದ್ಯ ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಸ್ಮೃತಿ ಮಂಧಾನ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮಿಥಾಲಿ ರಾಜ್ ಅವರ ವಿಶ್ವ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಇವರು ಮುಂದಿನ ನಾಲ್ಕು ಪಂದ್ಯಗಳಲ್ಲಿ 686 ರನ್ ಗಳಿಸಿದ್ದೇ ಆದಲ್ಲಿ ಈ ಸಾಧನೆಯನ್ನು ಮಾಡಬಹುದು. ಈ ಸಾಧನೆ ಮಾಡುವುದು ಕಷ್ಟ. ಆದರೆ ಅಸಾಧ್ಯವಲ್ಲ.

India s Smriti Mandhana

ಭರವಸೆಯ ಆರಂಭಿಕ ಆಟಗಾರ್ತಿ ಟೀಮ್ ಇಂಡಿಯಾದ ಪರ ಮೂರು ಸ್ವರೂಪಗಳಲ್ಲಿ 10,182 ರನ್ ಗಳಿಸಿದ್ದಾರೆ. ಇವರು ಮೊದಲ ಏಕದಿನ ಪಂದ್ಯದಲ್ಲಿ 92 ರನ್ ಬಾರಿಸುವಲ್ಲಿ ಯಶಸ್ವಿಯಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್ ಅವರ ದಾಖಲೆಯನ್ನು ಮೀರಿ ನಿಲ್ಲಲಿದ್ದಾರೆ. ಈ ಮೂಲಕ ಸ್ಮೃತಿ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೆರಲಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್ 314 ಇನ್ನಿಂಗ್ಸ್‌ಗಳಲ್ಲಿ 10,868 ರನ್ ಗಳಿಸಿ ಸಿಡಿಸಿದ್ದಾರೆ. ಮಿಥಾಲಿ ಅವರ ವಿಶ್ವ ದಾಖಲೆಯನ್ನು ಮುರಿಯಲು ಮಂಧಾನ ಅವರಿಗೆ ಇನ್ನು 687 ರನ್‌ ಅವಶ್ಯಕತೆ ಇದೆ.

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ್ತಿಯರು

ಮಿಥಾಲಿ ರಾಜ್‌, ಭಾರತ, 10,868 ರನ್‌
ಸೂಜಿ ಬೆಟ್ಸ್‌, ನ್ಯೂಜಿಲೆಂಡ್‌, 10,652 ರನ್‌
ಚಾರ್ಲೊಟ್ ಎಡ್ವರ್ಡ್ಸ್, ಇಂಗ್ಲೆಂಡ್‌, 10,273 ರನ್‌
ಸ್ಮೃತಿ ಮಂಧಾನ, ಭಾರತ, 10,053+ ರನ್‌

India s Smriti Mandhana

ಆಸ್ಟ್ರೇಲಿಯಾ ವಿರುದ್ಧ ಮಂಧಾನ ಭರ್ಜರಿ ಫಾರ್ಮ್‌ ಹೊಂದಿದ್ದಾರೆ. ಇವರು ಆಸೀಸ್ ವಿರುದ್ಧ ಆಡಿದ 21 ಇನಿಂಗ್ಸ್‌ಗಳಲ್ಲಿ 48.57 ಸರಾಸರಿಯಲ್ಲಿ 1,020 ರನ್ ಗಳಿಸಿದ್ದಾರೆ, ಇದರಲ್ಲಿ ನಾಲ್ಕು ಶತಕಗಳು ಮತ್ತು ಆರು ಅರ್ಧಶತಕಗಳು ಸೇರಿವೆ. ಇತ್ತೀಚಿಗೆ ಮುಕ್ತಾಯವಾದ ಟಿ20 ಸರಣಿಯಲ್ಲಿ ಮಂಧಾನ ಆಡಿದ ಮೂರು ಪಂದ್ಯಗಳಲ್ಲಿ 64.50 ಸರಾಸರಿಯಲ್ಲಿ 129 ರನ್ ಗಳಿಸಿದ್ದಾರೆ.

Story first published: Monday, February 23, 2026, 19:59 [IST]
Other articles published on Feb 23, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+