ತವರಿನಲ್ಲಿ ಬಾಂಗ್ಲಾ ಬ್ಯಾಟರ್‌ಗಳನ್ನು ಕಾಡಲಿದ್ದಾರೆ ಸ್ಪಿನ್ ಮಾಂತ್ರಿಕ
ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಬಾಂಗ್ಲಾ ತಂಡವನ್ನು ಮಣಿಸಿ, ಟೀಮ್ ಇಂಡಿಯಾ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಸಜ್ಜಾಗಿದೆ. ಈ ಅಂಗಳ ನಿಜಕ್ಕೂ ವಿದೇಶಿ ಆಟಗಾರರ ಪಾಲಿಗೆ ದುಸ್ವಪ್ನದಂತೆ ಕಾಡಿದೆ.
ಚೆನ್ನೈನ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದೆ. ಇದರಿಂದಾಗಿ ಭಾರತದ ಸ್ಟಾರ್ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬಾಂಗ್ಲಾದೇಶಕ್ಕೆ ಕಾಟ ನೀಡಬಲ್ಲರು. ಚೆನ್ನೈನಲ್ಲಿ ಭಾರತದ ಗೆಲುವಿನ ಪರ್ಸೆಂಟೆಜ್ 44 ಆಗಿದೆ. ಇದು ಭಾರತದ ಇತರೆ ಮೈದಾನಕ್ಕಿಂತ ಉತ್ತಮ. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ನಾಲ್ಕು ಸ್ಪಿನ್ ಬೌಲರ್‌ಗಳನ್ನು ಆಡಿಸಿದರೆ, ಬಾಂಗ್ಲಾಗೆ ಕಂಟಕ ಗ್ಯಾರಂಟಿ.

ಚೆನ್ನೈನಲ್ಲಿ ಭಾರತದ ದಾಖಲೆ ಹೇಗಿದೆ?
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಭಾರತ ಇದುವರೆಗೆ ಒಟ್ಟು 34 ಟೆಸ್ಟ್ ಪಂದ್ಯ ಆಡಿದೆ. ಇದರಲ್ಲಿ 15 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದರೆ, ಈ ಅಂಗಳದಲ್ಲಿ ಆತಿಥೇಯ ತಂಡ ಏಳು ಬಾರಿ ಮಾತ್ರ ಸೋತಿದೆ. ಇದರೊಂದಿಗೆ 11 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದರೆ, ಒಂದು ಪಂದ್ಯ ಟೈ ಆಗಿದೆ. ಟೀಮ್ ಇಂಡಿಯಾ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಕೊನೆಯ ಪಂದ್ಯವನ್ನು ಆಡಿತ್ತು. ಆಗ 317 ರನ್‌ಗಳ ಗೆಲುವು ದಾಖಲಿಸಿತ್ತು.
ತವರಿನಲ್ಲಿ ಅಶ್ವಿನ್ ಶೈನ್
ಭಾರತದ ನೆಲದಲ್ಲಿ ಅಶ್ವಿನ್ ಒಬ್ಬ ಸೂಪರ್ ಸ್ಟಾರ್ ಬೌಲರ್. ಸ್ಪಿನ್ ಸ್ನೇಹಿ ಪಿಚ್‌ಗಳಿದ್ದರೆ ಅಶ್ವಿನ್, ಎದುರಾಳಿ ಬ್ಯಾಟರ್‌ಗಳನ್ನು ಬೆನ್ನು ಹತ್ತಿ ಕಾಡುತ್ತಾರೆ. ಈ ಮೈದಾನದಲ್ಲಿ ಅಶ್ವಿನ್ ಕೇವಲ ನಾಲ್ಕು ಟೆಸ್ಟ್‌ಗಳಲ್ಲಿ 30 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅಂಗಳದಲ್ಲಿ 103 ರನ್‌ಗಳಿಗೆ ಏಳು ವಿಕೆಟ್ ಪಡೆದಿರುವುದು ಅಶ್ವಿನ್ ಬೆಸ್ಟ್ ಬೌಲಿಂಗ್ ಪರ್ಫಾಮನ್ಸ್ ಆಗಿದೆ. ಅಲ್ಲದೆ ಈ ಅಂಗಳದಲ್ಲಿ ಅವರು ನಾಲ್ಕು ಬಾರಿ ಐದು ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಬರೀ ಬೌಲಿಂಗ್‌ನಲ್ಲಿ ಮಾತ್ರ ಎದುರಾಳಿಗಳನ್ನು ಕಾಡದ ಅಶ್ವಿನ್, ಬ್ಯಾಟಿಂಗ್‌ನಲ್ಲೂ ಕಾಡಿದ್ದಾರೆ. ಆಡಿದ 6 ಇನಿಂಗ್ಸ್‌ಗಳಲ್ಲಿ ಅವರು 229 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿದೆ.

ಸೆಪ್ಟೆಂಬರ್ 19 ರಿಂದ ಆರಂಭವಾಗುವ ಟೆಸ್ಟ್‌ನಲ್ಲಿ ಎಲ್ಲರ ಚಿತ್ತ ಅಶ್ವಿನ್ ಮೇಲೆ ನೆಟ್ಟಿರಲಿದೆ.
ಚೆನ್ನೈ ಟೆಸ್ಟ್‌ಗಾಗಿ ಭಾರತ ತಂಡ - ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications