ಸೆಪ್ಟೆಂಬರ್ 19 ರಿಂದ ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಭಾರತ ಪ್ಲ್ಯಾನ್ ಮಾಡಿಕೊಂಡಿದೆ. ಈ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾ ಹೊಸ ರಣ ತಂತ್ರವನ್ನು ರೂಪಿಸಿದೆ. ಈ ತಂತ್ರ ನಿಜಕ್ಕೂ ಬಾಂಗ್ಲಾ ಆಟಗಾರರ ಟೆನ್ಷನ್ ಹೆಚ್ಚಿಸಲಿದೆ.
ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುತ್ತದೆ. ಇದನ್ನೆ ಅರಿತು ಟೀಮ್ ಇಂಡಿಯಾ ನುರಿತ ಸ್ಪಿನ್ ಬೌಲರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡಿದೆ. ಅಲ್ಲದೆ ತನ್ನ ಸ್ಪಿನ್ ಜಾದು ಮೂಲಕ ಎದುರಾಳಿಯನ್ನು ಕಟ್ಟಿ ಹಾಕಲು, ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ರೋಹಿತ್ ಶರ್ಮಾ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ.

ತವರಿನಲ್ಲಿ ಬಾಂಗ್ಲಾ ತಂಡವನ್ನು ಬಗ್ಗು ಬಡೆಯಲು ಅಚ್ಚರಿಯ ಗೇಮ್ ಪ್ಲ್ಯಾನ್ ರಚಿಸಲು ಟೀಮ್ ಮ್ಯಾನೇಜ್ಮೆಂಟ್ ಸಿದ್ಧತೆ ನಡೆಸಿದೆ. ಕೋಚ್ ಹಾಗೂ ನಾಯಕ ಕೆಲವು ಬದಲಾವಣೆಗಳನ್ನು ನೆಟ್ಸ್‌ನಲ್ಲಿ ಮಾಡಿಕೊಂಡಿದೆ. ನೆಟ್ಸ್‌ನಲ್ಲಿ ಟೀಮ್ ಮ್ಯಾನೇಜ್ಮೆಂಟ್ ನ್ಯೂ ಗೇಮ್ ಪ್ಲ್ಯಾನ್ ಒಂದು ಹಂತಕ್ಕೆ ರಿವೀಲ್ ಆದಂತೆ ಕಾಣುತ್ತಿದೆ.
ಟೀಮ್ ಇಂಡಿಯಾದ ಓಪನರ್ ಯಶಸ್ವಿ ಜೈಸ್ವಾಲ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆಯಲಿಲ್ಲ. ಬದಲಿಗೆ ಅಭ್ಯಾಸದ ವೇಳೆ ಅವರು ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದರು. ಇವರು ಲೆಗ್ ಸ್ಪಿನ್ ಬೌಲಿಂಗ್ ನಡೆಸುತ್ತಾರೆ. ಟೆಸ್ಟ್‌ನಲ್ಲಿ ಸ್ಪಿನರ್‌ಗಳ ಪಾತ್ರ ಎಂತಹದ್ದು ಎಂದು ಈ ದೃಶ್ಯವನ್ನು ನೋಡಿದ ಮೇಲೆ ತಿಳಿಯುತ್ತದೆ. ಯಶಸ್ವಿ ಅವರ ಬೌಲಿಂಗ್ ಮಾಡುವುದು ಅವರನ್ನು ಟೆಸ್ಟ್ ತಂಡದಲ್ಲಿ ಅಷ್ಟೇ ಅಲ್ಲ ಎಲ್ಲ ಫಾರ್ಮೆಟ್‌ಗಳಲ್ಲೂ ತಂಡದಲ್ಲಿ ಪರಿಗಣಿಸುವಂತೆ ಮಾಡುತ್ತದೆ.
ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರೊಂದಿಗೆ ಯಶಸ್ವಿ ಜೈಸ್ವಾಲ್ ಮೂರನೇ ಸ್ಪಿನ್ ಬೌಲರ್ ರೂಪದಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ. ಈ ಮೂಲಕ ಜಡ್ಡು ಹಾಗೂ ಅಶ್ವಿನ್‌ಗೆ ಹೊಸ ಜೊತೆಗಾರ ಸಿಕ್ಕಂತೆ ಆಗುತ್ತದೆ. ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ ಒಂದೇ ಓವರ್ ಬೌಲ್ ಮಾಡಿದ್ದರು. ಈಗ ಬಾಂಗ್ಲಾ ಬ್ಯಾಟರ್‌ಗಳನ್ನು ಕಾಡಲು ಯಶಸ್ವಿ ಸನ್ನದ್ಧರಾದಂತೆ ಕಾಣುತ್ತಿದೆ.

ಬಾಂಗ್ಲಾ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಕೆಂಪು ಮಣ್ಣಿನ ಪಿಚ್ ಮೇಲೆ ನಡೆಯಲಿದೆ. ಈ ಪಿಚ್ ಕೊಂಚ ವೇಗಿಗಳಿಗೆ ಸಹಾಯ ಮಾಡಬಹುದು. ಇನ್ನು ಬಾಂಗ್ಲಾದೇಶ ಬ್ಯಾಟರ್‌ಗಳು ಸ್ಪಿನ್ ಬೌಲರ್‌ಗಳ ವಿರುದ್ಧ ಉತ್ತಮವಾಗಿ ಆಡುತ್ತಾರೆ. ಇತ್ತೀಚಿಗೆ ಪಾಕಿಸ್ತಾನದಲ್ಲಿ ನಡೆದ ಟೆಸ್ಟ್ ಸರಣಿಯನ್ನು ವಶಕ್ಕೆ ಪಡೆದಿರುವ ಬಾಂಗ್ಲಾ ಉತ್ಸಾದಲ್ಲಿದೆ. ಬಾಂಗ್ಲಾ ತಂಡವನ್ನು ತವರಿನಲ್ಲಿ ಬಗ್ಗು ಬಡೆಯಲು ಟೀಮ್ ಇಂಡಿಯಾ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಂತೆ ಕಾಣುತ್ತಿದೆ. ಈ ತಂತ್ರ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಕಾದು ನೋಡಬೇಕಿದೆ.