IND vs NZ Test: ಸ್ಪಿನ್ ಬಲೆಗೆ ಬಿದ್ದ ನ್ಯೂಜಿಲೆಂಡ್
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರೋಹಿತ್ ಪಡೆ ಉತ್ತಮ ಪ್ರದರ್ಶನ ನೀಡಿದೆ. ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಮಾಡಲಾಗದ ಸಾಧನೆಯನ್ನು ಈ ಬಾರಿ ಟೀಮ್ ಇಂಡಿಯಾ ಮುಂಬೈನ ವಾಂಖೇಡೆ ಅಂಗಳದಲ್ಲಿ ಮಾಡಿ ತೋರಿಸಿದೆ. ಈ ಮೂಲಕ ನ್ಯೂಜಿಲೆಂಡ್‌ನಲ್ಲಿ 143 ರನ್ ಮುನ್ನಡೆ ಸಾಧಿಸಿದೆ.
ಶನಿವಾರ ಎರಡನೇ ದಿನದಾಟವನ್ನು ಮುಂದುವರೆಸಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 86 ರನ್‌ಗಳಿಂದ ಆಟ ಮುಂದುವರಿಸಿ, 263 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 9 ವಿಕೆಟ್‌ಗೆ 171 ರನ್ ಸಿಡಿಸಿತು. ಅಜಾಜ್ ಪಟೇಲ್ ಅಜೇಯ 7 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಗಿಲ್, ಪಂತ್ ಅರ್ಧಶತಕ
ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಶುಭಮನ್ ಗಿಲ್ 90 ಹಾಗೂ ರಿಷಭ್ ಪಂತ್ 60 ರನ್ ಸಿಡಿಸಿದರು. ಇವರನ್ನು ಹೊರತು ಪಡಿಸಿದರೆ ರವೀಂದ್ರ ಜಡೇಜಾ 14, ವಾಷಿಂಗ್ಟನ್ ಸುಂದರ್ ಅಜೇಯ 38 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ನ್ಯೂಜಿಲೆಂಡ್ ಪರ ಅಜಾಜ್ ಪಟೇಲ್ 103 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಉಳಿದಂತೆ ಮ್ಯಾಟ್ ಹ್ಯಾನ್ರಿ, ಇಶ್ ಸೋಧಿ, ಗ್ಲೇನ್ ಫಿಲಿಪ್ಸ್ ತಲಾ ಒಂದು ವಿಕೆಟ್ ಉರುಳಿಸಿದರು.
ಕಳಪೆ ಆರಂಭ
ಇನ್ನು ನ್ಯೂಜಿಲೆಂಡ್ ತಂಡದ ಪರ ಸ್ಟಾರ್ ಆಟಗಾರರು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫರಾದರು. ಟಾಮ್ ಲಾಥಮ್, ರಚಿನ್ ರವೀಂದ್ರ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಡ್ವೇನ್ ಕಾನ್ವೆ 22 ರನ್ ಗಳಿಗೆ ಪೆವಿಲಿಯನ್ ಹಾದಿ ಹಿಡಿದರು. 44 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ ಹಾಗೂ ವಿಲ್ ಯಂಗ್ ಜೊತೆಗೂಡಿ ಸ್ಥಿರ ಜೊತೆಯಾಟದ ಕಾಣಿಕೆ ನೀಡಿದರು. 83 ಎಸೆತಗಳಲ್ಲಿ ಈ ಜೋಡಿ 50 ರನ್ ಕಲೆ ಹಾಕಿತು.

ಡೇರಿಲ್ ಮಿಚೆಲ್ 44 ಎಸೆತಗಳಲ್ಲಿ 21 ರನ್ ಸಿಡಿಸಿ ಔಟ್ ಮಾಡಿದರು. ಮಧ್ಯಮ ಕ್ರಮಾಂಕದ ಗ್ಲೇನ್ ಫಿಲಿಪ್ಸ್ 26 ರನ್ ಸಿಡಿಸಿದರು. ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ವಿಲ್ ಯಂಗ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್ ಕಲೆ ಹಾಕಿದರು.
ಜಡೇಜಾ 4, ಅಶ್ವಿನ್ 3
ಸ್ಪಿನ್ ಬೌಲರ್‌ಗಳಾದ ರವೀಂದ್ರ ಜಡೇಜಾ 52 ಓವರ್‌ಗಳಲ್ಲಿ 4 ವಿಕೆಟ್ ಪಡೆದರೆ, ಆರ್ ಅಶ್ವಿನ್ ಮೂರು ಅಮೂಲ್ಯ ವಿಕೆಟ್ ಕಬಳಿಸಿದರು. ಆಕಾಶ್ ದೀಪ್ ಹಾಗೂ ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಕಿತ್ತರು.
ಟೀಮ್ ಇಂಡಿಯಾ ಮೂರನೇ ದಿನದಾಟದ ಮೊದಲಾವಧಿಯಲ್ಲಿ ಬೇಗನೆ ವಿಕೆಟ್ ಕಬಳಿಸಬೇಕಿದೆ. ಅಲ್ಲದೆ ನ್ಯೂಜಿಲೆಂಡ್ ನೀಡುವ ಗುರಿಯನ್ನು ಬೇಗ ಮುಟ್ಟಿ ಮೊದಲ ಗೆಲುವಿನ ನಗೆ ಬೀರಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications