ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಐಸಿಸಿ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅಹಮದಾಬಾದ್‌ನಲ್ಲಿ ಅಕ್ಟೋಬರ್ 5ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.
ಇನ್ನು ಅಕ್ಟೋಬರ್ 8ರಂದು ಟೀಂ ಇಂಡಿಯಾ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಬಳಿಕ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ.
2023ರ ಏಕದಿನ ವಿಶ್ವಕಪ್‌ಗೆ ಶಿಖರ್ ಧವನ್ ಉತ್ತಮ ಪುನರಾಗಮನ ಆಗಬಹುದು ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ವಾಸಿಂ ಜಾಫರ್ ವಿಶ್ವಾಸ ವ್ಯಕ್ತಪಡಿಸಿದ್ದು, ಆದರೆ ಐಸಿಸಿ ಪಂದ್ಯಾವಳಿಗೆ ಸಂಭಾವ್ಯ ತಂಡವನ್ನು ಆಯ್ಕೆ ಮಾಡುವಾಗ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಹೊರಗಿಟ್ಟಿದ್ದಾರೆ.

ಇನ್ನು ವಾಸಿಂ ಜಾಫರ್ ಅವರು ಕೆಎಲ್ ರಾಹುಲ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪಿಂಗ್ ಆಯ್ಕೆಗಳಾಗಿ ಆಯ್ಕೆ ಮಾಡಿದ್ದಾರೆ. ಇದೇ ವೇಳೆ ಇಶಾನ್ ಕಿಶನ್ ಅವರು ವಿಶ್ವಕಪ್ ತಂಡದಿಂದ ಕಾಣೆಯಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಮೂವರು ಸ್ಪಿನ್ನರ್‌ಗಳನ್ನು ವಾಸಿಂ ಜಾಫರ್ ಆಯ್ಕೆ ಮಾಡಿದ್ದು, ಅವರೆಲ್ಲರೂ ಎಡಗೈ ಸ್ಪಿನ್ನರ್‌ಗಳಾಗಿದ್ದಾರೆ. ಕುಲದೀಪ್ ಯಾದವ್ ಅವರು ವಾಸಿಂ ಜಾಫರ್ ಆಯ್ಕೆ ಮಾಡಿದ ತಂಡದಲ್ಲಿ ಪುನರಾಗಮನ ಮಾಡಿದ್ದಾರೆ.
"ನನ್ನ ಆಯ್ಕೆಯ ಮೂವರು ಆರಂಭಿಕರು ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಮತ್ತು ಶಿಖರ್ ಧವನ್. ಶಿಖರ್ ಧವನ್ ಆಯ್ಕೆಯಾಗದಿದ್ದರೂ, ನಾನು ಅವರನ್ನು ಬ್ಯಾಕಪ್ ಆರಂಭಿಕನಾಗಿ ಇರಿಸುತ್ತೇನೆ. ಅವರು ಇನ್ನಿಂಗ್ಸ್ ತೆರೆಯದಿದ್ದರೂ, ನಾನು ಅದಕ್ಕೆ ಓಕೆ," ಎಂದು ವಾಸಿಂ ಜಾಫರ್ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.
"ಇನ್ನು ವಿರಾಟ್ ಕೊಹ್ಲಿಯನ್ನು 3ನೇ ಕ್ರಮಾಂಕದಲ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರು 4ನೇ ಸ್ಥಾನದಲ್ಲಿ ಆಡಲಿದ್ದಾರೆ. ನಂತರ ಕೆಎಲ್ ರಾಹುಲ್ 5ನೇ ಸ್ಥಾನ ಮತ್ತು ಹಾರ್ದಿಕ್ ಪಾಂಡ್ಯ 6ನೇ ಸ್ಥಾನದಲ್ಲಿದ್ದಾರೆ. ತಮ್ಮ ಆಡುವ 11ರ ಬಳಗದಲ್ಲಿ ಮೂವರು ಸ್ಪಿನ್ನರ್‌ಗಳಿದ್ದಾರೆ. ಅವರೆಂದರೆ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಆಗಿರುತ್ತಾರೆ," ಎಂದು ಹೇಳಿದರು.
ವೇಗದ ಬೌಲಿಂಗ್ ದಾಳಿಯ ವಿಷಯಕ್ಕೆ ಬಂದರೆ, ವಾಸಿಂ ಜಾಫರ್ ಅವರ ಆಯ್ಕೆಗಳು ಸ್ವಲ್ಪಮಟ್ಟಿಗೆ ನಿರೀಕ್ಷಿತ ಮಾರ್ಗಗಳಲ್ಲಿದ್ದು, ವೇಗದ ಬೌಲಿಂಗ್ ವಿಭಾಗಕ್ಕೆ ತಮ್ಮ ಆಯ್ಕೆಯ ಹೆಸರುಗಳನ್ನು ಬಹಿರಂಗಪಡಿಸಿದರು.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಸಂಪೂರ್ಣ ಕೋಟಾದ ಓವರ್‌ಗಳನ್ನು ಬೌಲ್ ಮಾಡದಿದ್ದರೂ, ತಾವು ತೃಪ್ತರಾಗುತ್ತೇನೆ. ಭಾರತದಲ್ಲಿ ಆಡುತ್ತಿರುವ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವುದು ನಿರ್ಣಾಯಕವಾಗಿದೆ ಎಂದು ವಾಸಿಂ ಜಾಫರ್ ತಿಳಿಸಿದರು.
ಇನ್ನು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಅಥವಾ ಮೊಹಮ್ಮದ್ ಶಮಿ ಅವರನ್ನು ಆಡುವ 11ರ ಬಳಗದಲ್ಲಿ ತನ್ನ ಇಬ್ಬರು ಸ್ಪೆಷಲಿಸ್ಟ್ ವೇಗದ ಬೌಲರ್‌ಗಳಾಗಿ ವಾಸಿಂ ಜಾಫರ್ ಹೆಸರಿಸಿದ್ದಾರೆ.
"ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದರೆ, ನಾನು ಖಂಡಿತವಾಗಿಯೂ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲು ಬಯಸುತ್ತೇನೆ. ಅದರಲ್ಲಿ ಖಂಡಿತವಾಗಿಯೂ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಇರುತ್ತಾರೆ. ನನ್ನ ಮೂರನೇ ಸ್ಪಿನ್ನರ್ ನಿಸ್ಸಂಶಯವಾಗಿ ಕುಲದೀಪ್ ಯಾದವ್ ಆಗಿರುತ್ತಾರೆ. ನನ್ನ ನಾಲ್ಕನೇ ವೇಗಿ ಶಾರ್ದೂಲ್ ಠಾಕೂರ್ ಆಗಿದ್ದು, ಸಂಜು ಸ್ಯಾಮ್ಸನ್ ಬ್ಯಾಕಪ್ ವಿಕೆಟ್ ಕೀಪರ್ ಆಗಿರುತ್ತಾರೆ," ಎಂದರು.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್.