ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ಗಾಗಿ 15 ಸದಸ್ಯರ ಭಾರತ ತಂಡವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಸುವ ಸಾಧ್ಯತೆಯಿದೆ. ಏಕೆಂದರೆ ತಂಡಗಳನ್ನು ಸಲ್ಲಿಸಲು ಐಸಿಸಿ ಮೇ 1ರ ಗಡುವು ನೀಡಿದೆ ಎಂದು ಬಿಸಿಸಿಐ ಮೂಲಗಳು ಶನಿವಾರ ತಿಳಿಸಿವೆ.
ಆದಾಗ್ಯೂ, ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಪ್ರತಿ ತಂಡವು ಮೇ 25ರವರೆಗೆ ತಮ್ಮ ಆರಂಭಿಕ ತಂಡದಲ್ಲಿ ಆಟಗಾರರನ್ನು ಬದಲಾಯಿಸುವ ಅವಕಾಶವನ್ನು ಹೊಂದಿರುತ್ತವೆ.
ಜೂನ್ 2ರಂದು ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಸಹ-ಆತಿಥೇಯ ಯುಎಸ್ಎ ಮತ್ತು ಕೆನಡಾ ನಡುವಿನ ರೋಚಕ ಪಂದ್ಯದೊಂದಿಗೆ ಟಿ20 ವಿಶ್ವಕಪ್ ಪಂದ್ಯಾವಳಿಯು ಆರಂಭವಾಗಲಿದೆ.

ಜೂನ್ 5ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ಭಾರತ ತಂಡ ತನ್ನ ಅಭಿಯಾನ ಪ್ರಾರಂಭಿಸಲಿದೆ.
ಇದೇ ವೇಳೆ, ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯವನ್ನು ಜೂನ್ 9ರಂದು ಅದೇ ಸ್ಥಳದಲ್ಲಿ ಆಡಲಿದೆ.
ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಲೀಗ್ ಹಂತದ ಮುಕ್ತಾಯದ ನಂತರ, ಮೇ 19ರಂದು ಮೊದಲ ಬ್ಯಾಚ್‌ನ ಆಟಗಾರರು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯವು ಮೇ 26ರಂದು ನಡೆಯಲಿದೆ. ಅದಾದ ಐದು ದಿನಗಳ ನಂತರ ಬಹು ನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
"ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಆ ಸಮಯದಲ್ಲಿ ಐಪಿಎಲ್ ಮೊದಲಾರ್ಧವು ಮುಗಿಯುತ್ತದೆ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯು ಆಟಗಾರರ ಫಾರ್ಮ್ ಮತ್ತು ಫಿಟ್‌ನೆಸ್ ಅನ್ನು ನಿರ್ಣಯಿಸುವ ಸ್ಥಿತಿಯಲ್ಲಿರುತ್ತದೆ," ಎಂದು ಬಿಸಿಸಿಐನ ಅನಾಮಧೇಯ ಮೂಲಗಳು ಹೇಳಿವೆ.
"ಮೇ 19ರಂದು 2024ರ ಐಪಿಎಲ್‌ನ ಲೀಗ್ ಹಂತ ಮುಗಿದ ತಕ್ಷಣ ಮೊದಲ ಬ್ಯಾಚ್ ಆಟಗಾರರು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ," ಎಂದು ತಿಳಿಸಿದ್ದಾರೆ.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಪಂದ್ಯಾವಳಿ ನಡೆಯುವುದರಿಂದ, ಕೆಲವು ಸ್ಟ್ಯಾಂಡ್-ಬೈ ಆಟಗಾರರು ಸಹ ಭಾರತ ತಂಡದೊಂದಿಗೆ ಪ್ರಯಾಣಿಸಬಹುದೆಂದು ನಿರೀಕ್ಷಿಸಲಾಗಿದೆ. ಹೀಗಾಗಿ ಮುಖ್ಯ ತಂಡದ ಯಾವುದೇ ಆಟಗಾರ ಗಾಯಗೊಂಡರೆ, ಯಾವುದೇ ಲಾಜಿಸ್ಟಿಕಲ್ ದುಃಸ್ವಪ್ನ ಇರುವುದಿಲ್ಲ.
ಬಿಸಿಸಿಐನ ನಾಲ್ವರು ರಾಷ್ಟ್ರೀಯ ಆಯ್ಕೆಗಾರರು ಹೆಚ್ಚಿನ ಪಂದ್ಯಗಳನ್ನು ವೀಕ್ಷಿಸಲು ಪ್ರಯಾಣಿಸುತ್ತಿದ್ದಾರೆ. ಏಕೆಂದರೆ ಅವರು ಆಯ್ದ ಕೆಲವು ಪಂದ್ಯಗಳಿಗೆ ಪ್ರಯಾಣಿಸುವಾಗ, ಆಟಗಾರರನ್ನು ಟ್ರ್ಯಾಕ್ ಮಾಡಲಿದ್ದು, ಇತರ ಆವೃತ್ತಿಗಳಿಗಿಂತ ಭಿನ್ನವಾಗಿ ಈ ವಿಶ್ವಕಪ್‌ನ ಆಯ್ಕೆ ಇರಲಿದೆ.
ಹೆಚ್ಚುವರಿಯಾಗಿ, ಯಾವುದೇ ಕೇಂದ್ರೀಯ ಗುತ್ತಿಗೆ ಅಥವಾ ವಿಶ್ವಕಪ್‌ನ ಉದ್ದೇಶಿತ ಆಟಗಾರ ಗಾಯಗೊಂಡರೆ, ಅವರ ಪ್ರಕರಣವನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ವೈದ್ಯಕೀಯ ತಂಡವು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ. ಅಲ್ಲದೆ, ಕೋಚ್‌ಗಳು ಮತ್ತು ಫಿಸಿಯೋಥೆರಪಿಸ್ಟ್‌ಗಳು ಆಟಗಾರರ ಸ್ಥಿತಿಗತಿಯ ಬಗ್ಗೆ ಎನ್‌ಸಿಎಗೆ ಮಾಹಿತಿ ನೀಡಲಿದ್ದಾರೆ.