Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup T20: ಮೊದಲ ಪಂದ್ಯಕ್ಕೆ ಹೇಗಿರಲಿದೆ ಭಾರತದ ಪ್ಲೇಯಿಂಗ್ ಇಲೆವೆನ್‌?

ಯುಎಇನಲ್ಲಿ ಇಂದಿನಿಂದ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಭಾರತ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಭಾರತ "ಎ" ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವೆಲ್ಲಾ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ಬಗ್ಗೆ ಸೂಚನೆ ಸಿಕ್ಕಿದೆ. ಈ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ ಸೋಮವಾರ ದುಬೈನಲ್ಲಿ ಐಸಿಸಿ ಕ್ರಿಕೆಟ್‌ ಅಕಾಡಮಿಯಲ್ಲಿ ಅಭ್ಯಾಸ ನಡೆಸಿತು. ಈ ಅಭ್ಯಾಸವನ್ನು ಒಮ್ಮೆ ನೋಡಿದರೆ, ಯಾರು ಪ್ಲೇಯಿಂಗ್ ಇಲೆವೆನ್ ಭಾಗವಾಗಿರಲಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಂತೆ ಕಾಣುತ್ತಿದೆ. ಟೀಮ್ ಇಂಡಿಯಾದಲ್ಲಿರುವ ಮೂವರು ಆರಂಭಿಕ ಆಟಗಾರರಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ?, ಇಬ್ಬರು ವಿಕೆಟ್‌ ಕೀಪರ್‌ಗಳಲ್ಲಿ ಯಾರ ಅದೃಷ್ಟ ಖುಲಾಯಿಸುತ್ತದೆ ಎಂಬ ಬಗ್ಗೆ ನೆಟ್ಸ್‌ ಸೆಷನ್‌ನಲ್ಲಿ ತಿಳದು ಬಂದಿದೆ.

India s T20 Asia Cup Playing XI Sanju Samson and Rinku Singh Likely to Miss Out

ಸಂಜು ಸ್ಯಾಮ್ಸನ್‌ ಸೋಮವಾರ ವಿಕೆಟ್‌ ಕೀಪಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿತು. ಇವರು ಫೀಲ್ಡಿಂಗ್ ಕೋಚ್‌ ಟಿ ದಿಲೀಪ್‌ ಅವರೊಂದಿಗೆ ಕ್ಯಾಚಿಂಗ್ ಅಭ್ಯಾಸ ಮಾಡಿದರು. ವಿಶೇಷವಾಗಿ ಇವರು ಬಲಕ್ಕೆ ಡೈವ್ ಮಾಡಿ ಚೆಂಡನ್ನು ಹಿಡಿದು ಎಲ್ಲರ ಗಮನ ಸೆಳೆದರು. ಕೋಚ್‌ ಹಾಗೂ ಸಂಜು ನಡುವೆ ಕೊಂಚ ಕಾಲ ಮಾತುಕತೆ ಸಹ ನಡೆಯಿತು. ಆದರೆ ಈ ವೇಳೆ ಯಾವೆಲ್ಲಾ ವಿಷಯಗಳ ಬಗ್ಗೆ ಮಾತನಾಡಿದರು ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ.

ಯಾರಿಗೆ ಅವಕಾಶ?

ವಿಕೆಟ್‌ ಕೀಪರ್‌ ಆರ್‌ಸಿಬಿ ತಂಡದ ಜಿತೇಶ್‌ ಶರ್ಮಾ ಹುಮ್ಮಸ್ಸಿನಿಂದ ಮೈದಾನದಲ್ಲಿ ಅಡ್ಡಾಡುವುದು ಕಂಡು ಬಂದಿತು. ಇವರು ಶಿವಂ ದುಬೆ, ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಹೆಚ್ಚಿನ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಈ ಆಟಗಾರರು ಬ್ಯಾಟಿಂಗ್ ಮಾಡುವಾಗ ಸಂಜು ಪ್ಯಾಡ್‌ ಕಟ್ಟಿಕೊಂಡು ನೋಡುತ್ತಿದ್ದರು. ಆದರೆ ಸಂಜು ಬ್ಯಾಟಿಂಗ್ ಮಾಡಲು ಬಾರಲಿಲ್ಲ. ಈ ದೃಷ್ಯಗಳನ್ನು ನೋಡಿದಾಗ ಸಂಜು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿಯಬಹುದು ಎಂದು ತೋರುತ್ತಿದೆ.

ನಾಯಕ ಸೂರ್ಯಕುಮಾರ್ ಯಾದವ್, ಶುಭಮನ್‌ ಗಿಲ್‌, ವಿಶ್ವದ ನಂಬರ್ 1 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ ಹೆಚ್ಚು ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಆದರೆ ಸಂಜುಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಇನ್ನೇನು ನೆಟ್‌ ಸೆಷನ್‌ ಮುಗಿಯುತ್ತಿದೆ ಎಂದಾಗ ಸಂಜು, ನೆಟ್ ಬೌಲರ್‌ಗಳ ಎಸೆತಗಳನ್ನು ಎದುರಿಸಿದರು. ಇನ್ನು ರಿಂಕು ಸಿಂಗ್‌ ಸಹ ಈ ಸೆಷನ್‌ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಇದನ್ನು ನೋಡಿದರೆ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುವುದು ಡೌಟ್ ಎಂದು ಹೇಳಲಾಗುತ್ತಿದೆ. ಕೊನೆಯಲ್ಲಿ ರಿಂಕು ಥ್ರೋ ಡೌನ್‌ ಎದುರಿಸಿ ಅಭ್ಯಾಸ ಮಾಡಿದರು. ಟೀಮ್ ಇಂಡಿಯಾ ಫಿನಿಷರ್ ರೂಪದಲ್ಲಿ ಜಿತೇಶ್ ಶರ್ಮಾ ಅವರಿಗೆ ಮಣೆ ಹಾಕುತ್ತಿದೆ ಎಂಬುದಂತೂ ಮೆಲ್ನೋಟಕ್ಕಂತೂ ಸ್ಪಷ್ಟವಾಗಿದೆ.

Story first published: Tuesday, September 9, 2025, 14:51 [IST]
Other articles published on Sep 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+