Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ಕೋಚ್‌ ಗೌತಮ್ ಗಂಭೀರ್ ಕೊರಳಿಗೆ ಬೇಡದ ದಾಖಲೆಗಳ ಸರಮಾಲೆ

ಟೀಮ್ ಇಂಡಿಯಾ, ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಸಿದ್ಧತೆ ನಡೆಸಿದೆ. ಟೀಮ್ ಇಂಡಿಯಾ, ಐರ್ಲೆಂಡ್‌ ಪ್ರವಾಸದಲ್ಲಿ ಹೀನಾಯ ಸೋಲು ಕಂಡಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ, ಸರಣಿ ಸೋಲಿನ ಕಹಿಯನ್ನು ಉಂಡಿದೆ. ಈ ಸೋಲಿನ ಬಳಿಕ ಗೌತಮ್ ಗಂಭೀರ್ ಕಳಪೆ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ನಂತರ, ಟೀಮ್ ಇಂಡಿಯಾ ಹಲವು ಐತಿಹಾಸಿಕ ಮತ್ತು ನಿರಾಶಾದಾಯಕ ಸೋಲುಗಳನ್ನು ಎದುರಿಸಬೇಕಾಗಿ ಬಂದಿದೆ. ಶ್ರೀಲಂಕಾ ವಿರುದ್ಧ 27 ವರ್ಷಗಳ ನಂತರ ಏಕದಿನ ಸರಣಿ ಸೋಲಿನಿಂದ ಹಿಡಿದು, ನ್ಯೂಜಿಲೆಂಡ್ ವಿರುದ್ಧ ತಾಯ್ನಾಡಿನಲ್ಲಿ ಅನುಭವಿಸಿದ ಮೊದಲ ಕ್ಲೀನ್‌ಸ್ವೀಪ್ ಮುಖಭಂಗ ಹಾಗೂ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಕೈಚೆಲ್ಲಿರುವುದು ಸೇರಿದಂತೆ ಹಲವು 'ಬೇಡದ' ದಾಖಲೆಗಳು ಈಗ ಗಂಭೀರ್ ಅವರ ಕೋಚಿಂಗ್ ಅವಧಿಯಲ್ಲಿ ಇತಿಹಾಸದ ಪುಟ ಸೇರಿವೆ.

India s T20 Loss

ಶ್ರೀಲಂಕಾ ವಿರುದ್ಧ ಸೋಲು

ಟೀಮ್ ಇಂಡಿಯಾ, ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಕಳೆದ ವರ್ಷ ಕೈಗೊಂಡಿತ್ತು. ಆ ವೇಳೆ ಭಾರತ ಏಕದಿನ ಸರಣಿಯನ್ನು ಕೈ ಚೆಲ್ಲಿತು. ಅಲ್ಲದೆ 27 ವರ್ಷಗಳ ಬಳಿಕ ಭಾರತ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಕೈ ಚೆಲ್ಲಿತು.

ತವರಿನಲ್ಲಿ ಮುಖಭಂಗ

ಭಾರತ ತವರಿನಲ್ಲಿ ಟೆಸ್ಟ್‌ ಸರಣಿಯನ್ನು ಬಹು ವರ್ಷಗಳಿಂದ ಸೋತಿರಲೇ ಇಲ್ಲ. ಆದರೆ ಭಾರತದಲ್ಲಿ ಸತತ ಎರಡು ಸರಣಿಗಳಲ್ಲಿ ಕ್ಲೀನ್‌ಸ್ವೀಪ್‌ ಸೋಲು ಕಂಡಿತ್ತು. 36 ವರ್ಷಗಳ ಬಳಿಕ ಭಾರತ ತವರಿನಲ್ಲಿ ಟೆಸ್ಟ್‌ ಸೋಲು ಕಂಡಿದೆ. ಅಲ್ಲದೆ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲಿನ ಕಹಿಯನ್ನು ತವರಿನಲ್ಲಿ ಅನುಭವಿಸಿದೆ. ಅಲ್ಲದೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ 25 ವರ್ಷಗಳ ಬಳಿಕ ಟೆಸ್ಟ್ ಸರಣಿ ಸೋಲು ಕಂಡಿದೆ.

India s T20 Loss

ಆಸೀಸ್‌ ಪ್ರವಾಸದಲ್ಲಿ ನಿರಾಸೆ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿತು. ಅಲ್ಲದೆ 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಕೈ ಚೆಲ್ಲಿತು.

ಐತಿಹಾಸಿಕ ಸೋಲು

ಇನ್ನು ಇತ್ತೀಚೆಗೆ ಐರ್ಲೆಂಡ್‌ ಪ್ರವಾಸದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಸರಣಿಯಲ್ಲಿ ಭಾರತ 2 ಪಂದ್ಯಗಳನ್ನು ಆಡಿತು. ಈ ವೇಳೆ ಆಡಿದ ಎರಡೂ ಪಂದ್ಯಗಳನ್ನು ಕೈ ಚೆಲ್ಲಿತು. ಮೊದಲ ಪಂದ್ಯದಲ್ಲಿ 34 ರನ್‌ ಸೋಲು ಕಂಡಿದ್ದ ಭಾರತ, ಎರಡನೇ ಪಂದ್ಯದಲ್ಲಿ 1 ರನ್‌ ಸೋಲು ಕಂಡು, ಮೊದಲ ಬಾರಿಗೆ ಐರ್ಲೆಂಡ್‌ ವಿರುದ್ಧ ಸರಣಿ ಸೋಲಿನ ಕಹಿಯನ್ನು ಕಂಡಿದೆ.

ಈಗ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಟಿ20 ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸುವ ಇರಾದೆ ಭಾರತ ತಂಡದ್ದಾಗಿದೆ.

Story first published: Wednesday, July 1, 2026, 23:55 [IST]
Other articles published on Jul 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+