Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತವರಿನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಲು ಕಾರಣರಾದ 5 ಆಟಗಾರರು

ಟೀಮ್ ಇಂಡಿಯಾ ತವರಿನಲ್ಲಿ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 96 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿತು. ಭಾರತ ಟೂರ್ನಿಯುದಕ್ಕೂ ಅಮೋಘ ಪ್ರದರ್ಶನ ನೀಡಿ ಮೂರನೇ ಬಾರಿಗೆ ಟಿ20 ವಿಶ್ವಕಪ್‌ಗೆ ಮುತ್ತಿಟ್ಟಿದೆ.

ನಿಶ್ಚಿತವಾಗಿ ಟೀಮ್ ಇಂಡಿಯಾ ಈ ಗೆಲುವಿನಲ್ಲಿ ಸಂಘಟಿತ ಆಟ ಎದ್ದು ಕಾಣುತ್ತದೆ. ಆದರೆ ತಂಡದ ಆಟಗಾರರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಫಲವಾಗಿಯೇ ಭಾರತ ಭಾನುವಾರ ಐತಿಹಾಸಿಕ ಸಾಧನೆ ಮಾಡುವಲ್ಲಿ ಸಫಲವಾಗಿದೆ. ಹಾಗಿದ್ದರೆ, ಭಾರತ ತವರಿನಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕಾರಣರಾದ 5 ಪ್ರಮುಖ ಆಟಗಾರರ ಪರಿಚಯ ಇಲ್ಲಿದೆ.

India s T20 World Cup Heroes

ಜಸ್ಪ್ರೀತ್ ಬುಮ್ರಾ

ಟೀಮ್ ಇಂಡಿಯಾದ ಆಪದ್ಬಾಂಧವ ಜಸ್ಪ್ರಿತ್ ಬುಮ್ರಾ. ತಂಡ ಸಂಕಷ್ಟದಲ್ಲಿದ್ದಾಗ ಎಲ್ಲ ಇವರ ಕೈಗೆ ಚೆಂಡನ್ನು ನೀಡಿದರೆ ಯಶಸ್ಸು ಫಿಕ್ಸ್‌. ಇವರ ಸ್ಲೋವರ್ ಎಸೆತಗಳು, ಯಾರ್ಕರ್, ಲೆಂಥ್ ಎಸೆತಗಳನ್ನು ಎದುರಿಸುವಲ್ಲಿ ಎದುರಾಳಿ ಬ್ಯಾಟರ್ಸ್‌ ಕಕ್ಕಾಬಿಕ್ಕಿಯಾಗಿದ್ದಾರೆ. ಇವರು ಫೈನಲ್ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ ನಾಲ್ಕು ವಿಕೆಟ್‌ ಪಡೆದರು. ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ನೀಡಲಾಯಿತು. ಇವರು ಟೂರ್ನಿಯುದ್ದಕ್ಕೂ ಬಿಗುವಿನ ದಾಳಿ ನಡೆಸಿ ಎದುರಾಳಿಗಳ ರನ್ ದಾಹಕ್ಕೆ ಕಡಿವಾಣ ಹಾಕಿದ್ದಾರೆ. ಬುಮ್ರಾ ಆಡಿದ 8 ಪಂದ್ಯಗಳಲ್ಲಿ 6.21ರ ಎಕಾನಮಿಯಲ್ಲಿ 14 ವಿಕೆಟ್‌ ಪಡೆದಿದ್ದಾರೆ.

ಹಾರ್ದಿಕ್ ಪಾಂಡ್ಯ

ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾದ ಆಟಗಾರ. ಇವರು ಬಿಗ್ ಹಿಟ್ ಬಾರಿಸಿ ತಂಡದ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 217 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 2 ಅರ್ಧಶತಕ ಸಹ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲೂ ಇವರು 8.81ರ ಎಕಾನಮಿ ಹೊಂದಿದ್ದು, 9 ವಿಕೆಟ್ ಕಬಳಿಸಿದ್ದಾರೆ.

India s T20 World Cup Heroes

ಶಿವಂ ದುಬೆ

ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಿ ತಂಡದ ಪರ ಹಲವು ಪಂದ್ಯಗಳಲ್ಲಿ ಅಮೋಘ ಇನಿಂಗ್ಸ್‌ ಆಡಿರುವ ಶಿವಂ ದುಬೆ ಸಹ ತಂಡ ತವರಿನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ. ಇವರು ಆಡಿದ 9 ಪಂದ್ಯಗಳಲ್ಲಿ 39ರ ಸರಾಸರಿಯಲ್ಲಿ 235 ರನ್‌ ಸಿಡಿಸಿದ್ದು, 5 ವಿಕೆಟ್‌ ಪಡೆದಿದ್ದಾರೆ.

ಇಶಾನ್ ಕಿಶನ್‌

ದೇಶೀಯ ಟಿ20ಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರಿಂದ ಇಶಾನ್ ಕಿಶನ್‌ ಅವರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಲಭಿಸಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಇಶಾನ್‌ ಆಡಿದ 9 ಪಂದ್ಯಗಳಲ್ಲಿ 35.22ರ ಸರಾಸರಿಯಲ್ಲಿ 317 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.

ಸಂಜು ಸ್ಯಾಮ್ಸನ್‌

ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಿಂದಲೇ ದೂರ ಉಳಿದಿದ್ದ ಸಂಜು ಸ್ಯಾಮ್ಸನ್‌ ಅವರಿಗೆ ಅನಿರೀಕ್ಷಿತವಾಗಿ ತಂಡದಲ್ಲಿ ಸ್ಥಾನ ಸಿಕ್ಕಿತು. ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಸಂಜು ತಮ್ಮ ಮೇಲೆ ಇದ್ದ ಟೀಕೆಗಳಿಗೆ ಮೈದಾನದಲ್ಲಿ ಉತ್ತರ ನೀಡಿದರು. ಕೋಲ್ಕತ್ತಾದಲ್ಲಿ ಸಂಜು ಸ್ಯಾಮ್ಸನ್‌ ವೆಸ್ಟ್‌ ಇಂಡೀಸ್ ವಿರುದ್ಧ ಆಡಿದ ಧಾಟಿ ಅವರಿಗೆ ಹೊಸ ಗುರುತನ್ನು ನೀಡಿತು. ಈ ಪಂದ್ಯದಲ್ಲಿ ಇವರು ಅಜೇಯ 97 ರನ್‌ ಸಿಡಿಸಿ ಮಿಂಚಿದರು. ಮುಂಬೈನ ವಾಂಖೆಡೆಯಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ ಕಲೆ ಹಾಕಲು ಇವರು ದೊಡ್ಡ ಕಾಣಿಕೆ ನೀಡಿದರು. ಇನ್ನು ಫೈನಲ್‌ ಪಂದ್ಯದಲ್ಲಿ 89 ರನ್ ಬಾರಿಸಿ ತಂಡಕ್ಕೆ ನೆರವಾದರು. ಇವರು ಆಡಿದ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ 3 ಅರ್ಧಶತಕ ಬಾರಿಸಿದ್ದು, 80ರ ಸರಾಸರಿಯಲ್ಲಿ 321 ರನ್‌ ಕಲೆ ಹಾಕಿದ್ದಾರೆ. ಇವರ ಅಮೋಘ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಸಹ ಸಿಕ್ಕಿದೆ.

Story first published: Monday, March 9, 2026, 8:15 [IST]
Other articles published on Mar 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+