For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ಹೊಸ್ತಿಲಲ್ಲಿ ನಿಂತಿದ್ದಾರಾ ರೋ-ಕೊ? ಇಲ್ಲಿದೆ ಅಂಕಿ ಅಂಶ

ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ ಆಟಗಾರರಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಅಗ್ರ ಸ್ಥಾನ. ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ಚಾಂಪಿಯನ್‌ ಮುಕುಟ ತೊಡಿಸಿದ ಈ ಇಬ್ಬರು ಸೂಪರ್ ಸ್ಟಾರ್‌ಗಳು, ಬಳಿಕ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಈಗ ಬರೀ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

ಪ್ರಸಕ್ತ ನ್ಯೂಜಿಲೆಂಡ್‌ ವಿರುದ್ಧ ಟೀಮ್ ಇಂಡಿಯಾ ತವರಿನಲ್ಲಿ ಹೀನಾಯ ಸೋಲು ಕಂಡ ಬಳಿಕ ಈ ಇಬ್ಬರೂ ಸೂಪರ್ ಸ್ಟಾರ್‌ಗಳು ನಿವೃತ್ತಿ ಪಡೆಯುತ್ತಾರಾ ಎಂಬ ಊಹಾಪೋಹಗಳು ಆರಂಭವಾಗಿವೆ. ಈ ನಿಟ್ಟಿನಲ್ಲಿ ಮಾಜಿ ಆಟಗಾರರು ಸಹ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇವರ ಅಂಕಿ ಅಂಶಗಳು ಸಹ ಇದಕ್ಕೆ ಪುಷ್ಠಿ ನೀಡುವಂತೆ ಇವೆ.

India s Test Woes Rohit Sharma amp amp Virat Kohli Struggle in 0-3 Defeat Against New Zealand

ತವರಿನಲ್ಲಿ ಮುಖಭಂಗ

ತವರಿನಲ್ಲಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್‌ ಸೋಲು ಕಾಣಲು ತಂಡದ ಬ್ಯಾಟಿಂಗ್ ಕಾರಣವಾಗಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರು ಒಮ್ಮೆಯೂ ಸರಣಿಯಲ್ಲಿ ಮೈ ಚಳಿ ಬಿಟ್ಟು ಆಡಲೇ ಇಲ್ಲ. ಪರಿಣಾಮ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕುತ್ತಾ ಬಂದಿತು. ತಂಡವನ್ನು ಒತ್ತಡದ ಸನ್ನಿವೇಶದಿಂದ ಮೇಲೆತ್ತುವ ಜವಾಬ್ದಾರಿಯನ್ನು ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಮಾಡುವಲ್ಲಿ ಎಡವಿದರು.

ಟೀಮ್‌ ಇಂಡಿಯಾದ ನಾಯಕ ರೋಹಿತ್ ಶರ್ಮಾ ಪೇಸ್ ಬೌಲಿಂಗ್ ಆಡುವಲ್ಲಿ ಎಡವುತ್ತಿದ್ದಾರೆ. ಹಾಗೇ ವಿರಾಟ್‌ ಕೊಹ್ಲಿ ಸ್ಪಿನ್ ಬೌಲರ್‌ಗಳ ವಿರುದ್ಧ ನಿಂತು ಆಡುವಲ್ಲಿ ಹೆಣಗಾಟ ನಡೆಸುತ್ತಿದ್ದಾರೆ. ಈ ಇಬ್ಬರೂ ಸೂಪರ್ ಸ್ಟಾರ್‌ಗಳ ಕಳೆದ 10 ಇನಿಂಗ್ಸ್‌ಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಈ ಇಬ್ಬರೂ ಬ್ಯಾಟರ್‌ಗಳು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವುದು ಕಾಣುತ್ತಿದೆ.

ಅಂಕಿ ಅಂಶಗಳ ಆಟ

ರೋಹಿತ್ ಶರ್ಮಾ ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 133 ರನ್ ಗಳಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಕೊನೆಯ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 192 ರನ್ ಗಳಿಸಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತವರಿನಲ್ಲೇ ರನ್‌ ಕಲೆ ಹಾಕುವಲ್ಲಿ ಹಿಂದೆ ಬೀಳುತ್ತಿರುವುದು ಮ್ಯಾನೇಜ್ಮೆಂಟ್ ಚಿಂತೆಯನ್ನು ದ್ವಿಗುಣ ಗೊಳಿಸಿದೆ. ಈ ಇಬ್ಬರೂ ಆಟಗಾರರು ಬೌನ್ಸಿ ಪಿಚ್‌ಗಳಲ್ಲಿ ಹೇಗೆ ಆಡಬಹುದು ಎಂಬ ಚಿಂತೆ ಮ್ಯಾನೇಜ್ಮೆಂಟ್ಗೆ ಆರಂಭವಾಗಿದೆ.

India s Test Woes Rohit Sharma amp amp Virat Kohli Struggle in 0-3 Defeat Against New Zealand

ಗಿಲ್ ಟಾಪ್‌ ಸ್ಕೋರರ್

ಕಳೆದ 10 ಇನಿಂಗ್ಸ್‌ಗಳಲ್ಲಿ ಭಾರತದ ಪರ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ, ಶುಭಮನ್‌ ಗಿಲ್‌ ಮೊದಲ ಸ್ಥಾನದಲ್ಲಿ ಇದ್ದಾರೆ. ಇವರು 470 ರನ್‌ ಕಲೆ ಹಾಕಿದ್ದಾರೆ. ಇನ್ನೂ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೆ ಸ್ಥಾನ ವಿದೆ. ಇವರು 431 ರನ್‌ ಸಿಡಿಸಿದರೆ, ರಿಷಭ್‌ ಪಂತ್‌ 422 ರನ್‌ ಕಲೆ ಹಾಕಿದ್ದಾರೆ. ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಯಶಸ್ವಿ ಜೈಸ್ವಾಲ್‌ ಸಹ 379 ರನ್‌ ಕಲೆ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಆಲ್‌ರೌಂಡರ್‌ ವಾಶಿಂಗ್ಟನ್‌ ಸುಂದರ್‌ ಐದನೇ ಸ್ಥಾನದಲ್ಲಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದು ಟೀಕೆಗೆ ಗುರಿಯಾಗಿದ್ದ ಕೆಎಲ್‌ ರಾಹುಲ್‌ ಅವರು ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರಿಗಿಂತ ಹೆಚ್ಚು ರನ್ ಕಲೆ ಹಾಕಿದ್ದಾರೆ. ಇನ್ನು ತಂಡದಿಂದ ದೂರ ಇರುವ ಅಜಿಂಕ್ಯ ರಹಾನೆ ಸಹ ಈ ಇಬ್ಬರೂ ಸೂಪರ್ ಸ್ಟಾರ್‌ಗಳಿಗೆ ಹೋಲಿಸಿದರೆ ಹೆಚ್ಚು ರನ್‌ ಸಿಡಿಸಿದ್ದಾರೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಈ ಇಬ್ಬರು ಶ್ರೇಷ್ಠ ಆಟಗಾರರ ಯುಗವು ನಿಧಾನವಾಗಿ ಕೊನೆಗೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ.

India s Test Woes Rohit Sharma amp amp Virat Kohli Struggle in 0-3 Defeat Against New Zealand

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆದಷ್ಟು ಬೇಗ ತಮ್ಮ ಫಾರ್ಮ್ ಅನ್ನು ಮರಳಿ ಪಡೆಯಬೇಕಾಗಿದೆ. ಇಲ್ಲದಿದ್ದರೆ ಟೀಂ ಇಂಡಿಯಾ ಸಾಕಷ್ಟು ಸಮಸ್ಯೆ ಎದುರಿಸಲಿದ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ವೇಳೆ ಉಭಯ ಸ್ಟಾರ್‌ ಆಟಗಾರರ ಫಾರ್ಮ್‌ಗೆ ಮರಳುವುದು ಅನಿವಾರ್ಯ.

Story first published: Monday, November 4, 2024, 13:08 [IST]
Other articles published on Nov 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+