For Quick Alerts
ALLOW NOTIFICATIONS  
For Daily Alerts
 

World Cup 2023: ಭಾರತದ ಈತನಿಗೆ 'ಈ ಪೀಳಿಗೆಯ ಅತ್ಯುತ್ತಮ ಆಟಗಾರ'ನಾಗುವ ಸಾಮರ್ಥ್ಯವಿದೆ; ಯುವರಾಜ್ ಸಿಂಗ್

ಭಾರತದಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 5ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ಸೆಣಸಾಡಲಿವೆ.

ಇನ್ನು ಆತಿಥೇಯ ಭಾರತ ತಂಡ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತಮ್ಮ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

Indias This Batter Has the Potential To be the Best Player of This Generation Says Yuvraj Singh

ಇದೀಗ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಯುವ ಬ್ಯಾಟರ್ ಶುಭ್ಮನ್ ಗಿಲ್ ಅವರನ್ನು ಶ್ಲಾಘಿಸಿದರು ಮತ್ತು ಯುವ ತಾರೆ ಈ ಪೀಳಿಗೆಯ ಅತ್ಯುತ್ತಮ ಆಟಗಾರನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

2023ರಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಏಕದಿನ ಪಂದ್ಯಗಳಲ್ಲಿ ಅಸಾಧಾರಣ ಪ್ರದರ್ಶನವನ್ನು ನೀಡುತ್ತಿದ್ದಾರೆ. 20 ಇನ್ನಿಂಗ್ಸ್‌ಗಳಿಂದ 105.03ರ ಸ್ಟ್ರೈಕ್ ರೇಟ್‌ ಮತ್ತು 72.35ರ ಸರಾಸರಿಯಲ್ಲಿ 1230 ರನ್‌ಗಳನ್ನು ಗಳಿಸುವ ಮೂಲಕ ವರ್ಷದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.

2023ರ ಏಷ್ಯಾ ಕಪ್ ಸಮಯದಲ್ಲಿ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಪರಾಕ್ರಮವು ಸಂಪೂರ್ಣವಾಗಿತ್ತು. ಬಾಂಗ್ಲಾದೇಶದ ವಿರುದ್ಧ ಐದನೇ ಏಕದಿನ ಶತಕ ಬಾರಿಸಿದರು.

Indias This Batter Has the Potential To be the Best Player of This Generation Says Yuvraj Singh

ಈ ಸಾಧನೆಯು 2023ರಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರನಾಗಿ ಹೊರಹೊಮ್ಮಿದರು. ಇದೇ ವರ್ಷದಲ್ಲಿ ಐದು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

2023ರ ವರ್ಷದುದ್ದಕ್ಕೂ ಶುಭ್ಮನ್ ಗಿಲ್ ಒಂದು ದ್ವಿಶತಕ, ನಾಲ್ಕು ಶತಕಗಳು ಮತ್ತು ಐದು ಅರ್ಧಶತಕಗಳನ್ನು ಬಾರಿ ಅದ್ಭುತ ಪ್ರದರ್ಶಣ ನೀಡಿದ್ದಾರೆ. ಈ ವರ್ಷದಲ್ಲಿ ಯಾವುದೇ ಬ್ಯಾಟರ್ 1,000 ರನ್ ಪೂರೈಸದ ಕಾರಣ ಅವರ ಪ್ರದರ್ಶನಕ್ಕೆ ಬೇರೆ ಯಾರೂ ಸರಿಸಾಟಿಯಿಲ್ಲ.

'ದಿ ವೀಕ್‌'ನೊಂದಿಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಶುಭ್ಮನ್ ಗಿಲ್ ತನ್ನ ಬಾಲ್ಯದ ದಿನಗಳಿಂದ ಸಾಮಾನ್ಯ ವ್ಯಕ್ತಿಗಿಂತ ನಾಲ್ಕು ಪಟ್ಟು ಹೆಚ್ಚು ಕೆಲಸ ಮಾಡುತ್ತಾನೆ. 24 ವರ್ಷದ ಯುವ ಬ್ಯಾಟರ್ ಈ ಪೀಳಿಗೆಯ ಉತ್ತಮ ಆಟಗಾರನಾಗುವ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದು ಹೇಳಿದರು.

"ಶುಭ್ಮನ್ ಗಿಲ್ ಈ ಪೀಳಿಗೆಯ ಅತ್ಯುತ್ತಮ ಆಟಗಾರನಾಗುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆತ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಅವನು 19-20 ವರ್ಷದವನಾಗಿದ್ದಾಗಲೂ, ಅವನ ವರ್ತನೆ ಯಾವಾಗಲೂ ಹಾಗೆ ಇತ್ತು. ಅವನು ಚಿಕ್ಕಂದಿನಿಂದಲೂ ಸಾಮಾನ್ಯ ಹುಡುಗನಿಗಿಂತ ನಾಲ್ಕು ಪಟ್ಟು ಹೆಚ್ಚು ಕೆಲಸ ಮಾಡುತ್ತಾನೆ. ನಾನು ಅವನೊಂದಿಗೆ ಕೆಲಸ ಮಾಡಿದ್ದೇನೆ, ಅವನು ಈ ಯುಗದ ಆಟಗಾರನಾಗಬಹುದು," ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟರು.

ಮುಂಬರುವ ವರ್ಷಗಳಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಂತಹ ಸ್ಥಳಗಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಯುವರಾಜ್ ಸಿಂಗ್ ಯುವ ಬ್ಯಾಟರ್ ಶುಭ್ಮನ್ ಗಿಲ್‌ಗೆ ಸಲಹೆ ನೀಡಿದರು.

"ಶುಭ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದ ಟೆಸ್ಟ್ ಪಂದ್ಯದಲ್ಲಿ 91 ರನ್ ಗಳಿಸಿದರು. ಅವರು ಆಸೀಸ್‌ಗೆ ತಮ್ಮ ಮೊದಲ ಪ್ರವಾಸದಲ್ಲಿ ಎರಡು ಅರ್ಧಶತಕ ಬಾರಿಸಿದರು. ಇದನ್ನು ಎಷ್ಟು ಆಟಗಾರರು ಮಾಡಿದ್ದಾರೆಂದು ನನಗೆ ತಿಳಿದಿಲ್ಲ. ಆತ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ರನ್ ಗಳಿಸುತ್ತಾರೆ ಎಂದು ನನಗೆ ಖಾತ್ರಿಯಿದೆ," ಎಂದು ಯುವರಾಜ್ ಸಿಂಗ್ ತಿಳಿಸಿದರು.

Story first published: Sunday, October 1, 2023, 17:22 [IST]
Other articles published on Oct 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+