For Quick Alerts
ALLOW NOTIFICATIONS  
For Daily Alerts
 

ಎದುರಾಳಿಗಳ ನಿದ್ದೆಗೆಡಿಸಿದ ಭಾರತ ಪಂಚ ಪಾಂಡವರು

ಭಾರತ ಎರಡನೇ ಬಾರಿ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಟೀಮ್ ಇಂಡಿಯಾ ಸಹ ಬಲಿಷ್ಠವಾಗಿದೆ. ಸ್ಟಾರ್‌ ಆಟಗಾರರನ್ನೇ ಹೊಂದಿರುವ ಟೀಮ್ ಇಂಡಿಯಾ ಪ್ಲೇಯರ್ಸ್‌ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಲು ಪ್ಲ್ಯಾನ್ ಮಾಡಿದ್ದಾರೆ. ಈಗಾಗಲೇ ಟಿ20 ಫಾರ್ಮೆಟ್‌ನಲ್ಲಿ ಧಮಾಕೆದಾರ್ ಪ್ರದರ್ಶನ ನೀಡಿರುವ ಬ್ಲ್ಯೂ ಬಾಯ್ಸ್ ಮತ್ತೊಂದು ಪ್ರಶಸ್ತಿಯ ಕನಸು ಕಾಣುತ್ತಿದೆ. ಟೀಮ್ ಇಂಡಿಯಾದ ಸ್ಥಾನ ಪಡೆದ ಪಂಚ ಪಾಂಡವರ ಸದ್ಯ ಎದುರಾಳಿ ತಂಡಗಳ ನಿದ್ದೆಗೆಡಿಸಿದ್ದಾರೆ. ಆ ಆಟಗಾರರ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರ ಬಾಲ್ಯದ ಸ್ನೇಹಿತ ಅಭಿಷೇಕ್‌ ಶರ್ಮಾ, ಆರಂಭಿಕರಾಗಿ ಕಾಣಿಸಿಕೊಳ್ಳುವ ಆಟಗಾರ. ಇವರು ತಮ್ಮ ಬಿರುಸಿನ ಆಟದ ಶೈಲಿಯಿಂದಲೇ ಹೆಸರುವಾಸಿ ಆಗಿದ್ದಾರೆ. ಅಲ್ಲದೆ ಇವರು ಸದ್ಯ ಐಸಿಸಿಯ ನಂಬರ್ 1 ಬ್ಯಾಟರ್. ಇವರು ಒಂದೊಮ್ಮೆ ಕ್ರೀಸ್‌ನಲ್ಲಿ ನೆಲಕಚ್ಚಿ ನಿಂತಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಸರಾಗವಾಗಿ ಬಾರಿಸ ಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಹೀಗಾಗಿ ಇವರ ಆಟಕ್ಕೆ ಕಡಿವಾಣ ಹಾಕುವುದು ದೊಡ್ಡ ಸಮಸ್ಯೆಯಾಗಿದೆ.

India s Top 5 Players to Watch Out for in Asia Cup T20

ಸಂಜು ಸ್ಯಾಮ್ಸನ್‌ ಸಹ ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದ ಪರ ಸ್ಥಿರ ಪ್ರದರ್ಶನ ನೀಡಿ, ಆರಂಭಿಕ ಸ್ಥಾನವನ್ನು ಕಬ್ಜಾ ಮಾಡಿರುವ ಆಟಗಾರ. ಇವರು ಕೇರಳ ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಕೇರಳ ಲೀಗ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕಗಳನ್ನು ಬಾರಿಸಿ ತಮ್ಮನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಸದ್ಯ ಭಾರತ ತಂಡದಲ್ಲಿ ಮೂವರು ಓಪನರ್ಸ್‌ ಇದ್ದಾರೆ. ಹೀಗಾಗಿ ಇವರು ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದು ಸಹ ಪ್ರಶ್ನೆಯಾಗಿದೆ. ಇವರ ಸದ್ಯದ ಫಾರ್ಮ್‌ ಎದುರಳಿಗಳನ್ನು ಕಾಡುತ್ತಿದೆ.

ಮಿಸ್ಟರ್‌ 360

ಟೀಮ್ ಇಂಡಿಯಾವನ್ನು ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮುನ್ನಡೆಸುತ್ತಿರುವ ಸೂರ್ಯಕುಮಾರ್ ಯಾದವ್, ಮಿಸ್ಟರ್‌ 360 ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ತಮ್ಮ ಕ್ಲಾಸಿಕ್‌ ಬ್ಯಾಟಿಂಗ್‌ನಿಂದ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರ ಆಟಕ್ಕೆ ಕಡಿವಾಣ ಹಾಕುವುದು ಎದುರಾಳಿಗೆ ದೊಡ್ಡ ತಲೆ ನೋವಾಗಿದೆ.

ಬರವಸೆಯ ಆಲ್‌ರೌಂಡರ್ಸ್‌

ಈಗಾಗಲೇ ದುಬೈನಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡದ ಭಾಗವಾಗಿರುವ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್‌ ಇಬ್ಬರೂ ಸಹ ತಮ್ಮ ಆಲ್‌ರೌಂಡರ್ ಆಟದಿಂದ ಎದುರಾಳಿಗಳಿಗೆ ಕಾಡಬಲ್ಲರು. ಹಾರ್ದಿಕ್‌ ಶಾರ್ಟ್‌ ಬೌಲ್‌ಗಳನ್ನು ಎಸೆದು ವಿಕೆಟ್‌ ಬೇಟೆ ನಡೆಸದರೆ, ಅಕ್ಷರ್ ಪಿರ್ಕಿ ಜಾದು ನಡೆಸಲಿದ್ದಾರೆ. ಇನ್ನು ಈ ಇಬ್ಬರೂ ಆಟಗಾರರು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕ್ಷಮತೆಯನ್ನು ಹೊಂದಿದ್ದು ತಂಡಕ್ಕೆ ನೆರವಾಗಬಲ್ಲರು. ಈ ಇಬ್ಬರೂ ಆಟಗಾರರು ಈ ವರ್ಷದ ಆರಂಭದಲ್ಲಿ ನಡೆದ ಚಾಂಪಿಯನ್‌ ತಂಡದ ಭಾಗವಾಗಿದ್ದರು. ಹೀಗಾಗಿ ಇವರಿಗೆ ಈ ಪಿಚ್‌ಗಳ ಮರ್ಮದ ಅರಿವಿದೆ.

Story first published: Saturday, September 6, 2025, 16:24 [IST]
Other articles published on Sep 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+