For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯುವ ಭಾರತದ ಅಗ್ರ ಕ್ಯಾಪ್ಡ್ ಆಟಗಾರರ ಪಟ್ಟಿ!

ಮಂಗಳವಾರ, ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ಎಲ್ಲಾ ಹತ್ತು ಫ್ರಾಂಚೈಸಿಗಳು ಸಜ್ಜಾಗಿದ್ದು, ಭಾರತೀಯ ಕ್ಯಾಪ್ಡ್ ಆಟಗಾರರಿಗೆ ಮತ್ತೊಮ್ಮೆ ಹೆಚ್ಚಿನ ಬೇಡಿಕೆ ಬರಲಿದೆ.

ಹರಾಜು ಪಟ್ಟಿಯಲ್ಲಿ ಹೆಚ್ಚಿನ ಭಾರತೀಯ ಆಯ್ಕೆಗಳು ಲಭ್ಯವಿಲ್ಲದ ಕಾರಣ, 2024ರ ಮಿನಿ-ಹರಾಜಿನಲ್ಲಿ ಖಂಡಿತವಾಗಿಯೂ ದೇಶೀಯ ಆಟಗಾರರಿಗೆ ದೊಡ್ಡ ಮಾರುಕಟ್ಟೆ ಇರಲಿದೆ.

Indias Top Capped Players Fetching Huge Sums in IPL Auction 2024!

ಕಳೆದ ತಿಂಗಳು ರಿಟೇನ್ ಗಡುವಿನ ಮುನ್ನ ಕೆಲವು ಭಾರತೀಯ ಸ್ಟಾರ್ ಆಟಗಾರರನ್ನು ಆಯಾ ತಂಡಗಳಿಂದ ಬಿಡುಗಡೆ ಮಾಡಲಾಯಿತು. ಐಪಿಎಲ್ 2024ರ ಮಿನಿ ಹರಾಜಿನ 333 ಆಟಗಾರರ ಪೂಲ್‌ನಲ್ಲಿ ಒಟ್ಟು 14 ಕ್ಯಾಪ್ಡ್ ಭಾರತೀಯ ಆಟಗಾರರು ಲಭ್ಯವಿದ್ದಾರೆ.

14 ಕ್ಯಾಪ್ಡ್ ಭಾರತೀಯ ಆಟಗಾರರ ಪೈಕಿ ಕೇವಲ ಮೂವರು ಮಾತ್ರ 2 ಕೋಟಿ ರೂಪಾಯಿ ಮೂಲ ಬೆಲೆ ಬ್ರಾಕೆಟ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರೆಂದರೆ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್ ಮತ್ತು ಹರ್ಷಲ್ ಪಟೇಲ್. ಇನ್ನುಳಿದ 11 ಆಟಗಾರರ ಮೂಲ ಬೆಲೆ 50 ಲಕ್ಷ ರೂಪಾಯಿ ಮೂಲ ಬೆಲೆಯಲ್ಲಿ ಹೆಸರಿಸಿದ್ದಾರೆ.

ದುಬೈನಲ್ಲಿ ನಡೆಯುವ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆಯುವ ಮತ್ತು ಬಿಡ್ ವಾರ್ ಉಂಟುಮಾಡುವ ಕ್ಯಾಪ್ಡ್ ಭಾರತೀಯ ಆಟಗಾರರ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

Indias Top Capped Players Fetching Huge Sums in IPL Auction 2024!

ಮಿನಿ ಹರಾಜಿನಲ್ಲಿ ಭಾರತೀಯ ಕ್ಯಾಪ್ಡ್ ಆಟಗಾರರು

2 ಕೋಟಿ ರೂಪಾಯಿ: ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್.

50 ಲಕ್ಷ ರೂಪಾಯಿ: ವರುಣ್ ಆರೋನ್, ಕೆಎಸ್ ಭರತ್, ಸಿದ್ದಾರ್ಥ್ ಕೌಲ್, ಶಿವಂ ಮಾವಿ, ಕರುಣ್ ನಾಯರ್, ಮನೀಶ್ ಪಾಂಡೆ, ಚೇತನ್ ಸಕರಿಯಾ, ಬರೀಂದರ್ ಸ್ರಾನ್, ಜಯದೇವ್ ಉನಾದ್ಕಟ್, ಹನುಮ ವಿಹಾರಿ, ಸಂದೀಪ್ ವಾರಿಯರ್.

ಶಾರ್ದೂಲ್ ಠಾಕೂರ್

2024ರ ಐಪಿಎಲ್ ರಿಟೇನ್ ಗಡುವಿಗೂ ಮುನ್ನ ಶಾರ್ದೂಲ್ ಠಾಕೂರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬಿಡುಗಡೆ ಮಾಡಿತು. ಶಾರ್ದೂಲ್ ಠಾಕೂರ್ ಐಪಿಎಲ್‌ನಲ್ಲಿ ಅನುಭವಿ ಆಟಗಾರನಾಗಿದ್ದಾರೆ. ಆಡಿದ ಎಂಟು ಋತುಗಳಲ್ಲಿ 86 ವಿಕೆಟ್‌ಗಳನ್ನು ಪಡೆದಿದ್ದಾರೆ.

ವೇಗದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 18.83ರ ಸರಾಸರಿ ಮತ್ತು 9.18ರ ಎಕಾನಮಿಯಲ್ಲಿ 89 ವಿಕೆಟ್‌ಗಳನ್ನು ಪಡೆದಿದ್ದಾರೆ. 140.20ರ ಸ್ಟ್ರೈಕ್ ರೇಟ್‌ನಲ್ಲಿ 286 ರನ್ ಗಳಿಸಿದ್ದಾರೆ ಮತ್ತು ಏಕೈಕ ಅರ್ಧಶತಕ ಗಳಿಸಿದ್ದಾರೆ.

ಆರ್‌ಸಿಬಿ, ಸಿಎಸ್‌ಕೆ, ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಸೇರಿದಂತೆ ವೇಗದ ಬೌಲಿಂಗ್ ಆಲ್‌ರೌಂಡರ್ ಅಥವಾ ಭಾರತೀಯ ವೇಗಿಗಳನ್ನು ಹುಡುಕುತ್ತಿರುವ ತಂಡಗಳಿಗೆ ಅವರು ಉತ್ತಮ ಆಯ್ಕೆಯಾಗಿದ್ದಾರೆ.

ಹರ್ಷಲ್ ಪಟೇಲ್

ಐಪಿಎಲ್ 2024ರ ಮಿನಿ ಹರಾಜಿಗೂ ಮುನ್ನ ಬಲಗೈ ವೇಗಿ ಹರ್ಷಲ್ ಪಟೇಲ್ ಅವರನ್ನು ಆರ್‌ಸಿಬಿ ಕೈಬಿಟ್ಟಿತು. ಹರ್ಷಲ್ ಪಟೇಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆಡಿದ 91 ಪಂದ್ಯಗಳಲ್ಲಿ 111 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಗ್ರ ಭಾರತೀಯ ವೇಗಿಗಳಲ್ಲಿ ಒಬ್ಬರಾಗಿದ್ದಾರೆ.

ಕಳೆದ ಋತುವಿನಲ್ಲಿ 13 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದರು, 2021ರ ಋತುವಿನಲ್ಲಿ ಆಡಿದ 15 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದರು.

ಕೆಎಸ್ ಭರತ್

ವಿಕೆಟ್ ಕೀಪರ್-ಬ್ಯಾಟರ್ ಐಪಿಎಲ್ 2024ರ ಹರಾಜಿನ ಪೂಲ್‌ನಲ್ಲಿ ಹೆಚ್ಚಿನ ಭಾರತೀಯ ವಿಕೆಟ್-ಕೀಪರ್‌ಗಳು ಲಭ್ಯವಿಲ್ಲ. ಕೆಎಸ್ ಭರತ್ ಹರಾಜು ಪೂಲ್‌ನಲ್ಲಿರುವ ಏಕೈಕ ಭಾರತೀಯ ವಿಕೆಟ್-ಕೀಪರ್ ಆಗಿದ್ದಾರೆ ಮತ್ತು ಡಿಸೆಂಬರ್ 19ರಂದು ಹಲವು ತಂಡಗಳ ಗಮನ ಸೆಳೆದಿದ್ದಾರೆ.

ಐಪಿಎಲ್ 2023ರ ಫೈನಲಿಸ್ಟ್‌ಗಳಾದ ಗುಜರಾತ್ ಟೈಟನ್ಸ್‌ನಿಂದ ಕೆಎಸ್ ಭರತ್ ಅವರನ್ನು ಬಿಡುಗಡೆಗೊಳಿಸಿತು. ಕಳೆದ ಋತುವಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಕೇವಲ ಎಂಟು ರನ್ ಗಳಿಸಿದರು.

ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಈವರೆಗೆ 10 ಪಂದ್ಯಗಳನ್ನು ಆಡಿದ್ದಾರೆ ಹಾಗೂ 28.43ರ ಸರಾಸರಿಯಲ್ಲಿ 199 ರನ್ ಗಳಿಸಿದ್ದಾರೆ. ಆದರೆ 122.09ರ ಸ್ಟ್ರೈಕ್‌ರೇಟ್‌ನಲ್ಲಿ ಹೊಡೆದಿದ್ದಾರೆ. ಸ್ಟಂಪ್ ಹಿಂದೆ, ಕೆಎಸ್ ಭರತ್ ಐದು ಕ್ಯಾಚ್‌ ಮತ್ತು ಒಂದು ಸ್ಟಂಪಿಂಗ್‌ನೊಂದಿಗೆ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಶಿವಂ ಮಾವಿ

2024ರ ಹೊಸ ಐಪಿಎಲ್ ಋತುವಿನ ಮುನ್ನ ಯುವ ವೇಗದ ಬೌಲರ್‌ನನ್ನು ಗುಜರಾತ್ ಟೈಟನ್ಸ್ ಬಿಡುಗಡೆ ಮಾಡಿತು. ಬಲಗೈ ವೇಗಿ ಈವರೆಗೆ 32 ಪಂದ್ಯಗಳಲ್ಲಿ 51 ರನ್ ಗಳಿಸಿ 30 ವಿಕೆಟ್ ಪಡೆದಿದ್ದಾರೆ. ಶಿವಂ ಮಾವಿ ಕಳೆದ ವರ್ಷ ಅತ್ಯುತ್ತಮ ಋತು ಹೊಂದಿರಲಿಲ್ಲ. ಏಕೆಂದರೆ, ಆರು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಆರ್‌ಸಿಬಿ, ಪಂಜಾಬ್ ಕಿಂಗ್ಸ್, ಸಿಎಸ್‌ಕೆ ತಂಡಗಳು ಶಿವಂ ಮಾವಿಯನ್ನು ಹುಡುಕಬಹುದು. ಆದರೆ ಗುಜರಾತ್ ಟೈಟನ್ಸ್ ಅವರನ್ನು ಕಡಿಮೆ ಬೆಲೆಗೆ ಮರಳಿ ಪಡೆಯಲು ಪ್ರಯತ್ನಿಸಬಹುದು.

ಮನೀಶ್ ಪಾಂಡೆ

ಐಪಿಎಲ್‌ನ ಹಳೆಯ ಆಟಗಾರನನ್ನು ಡೆಲ್ಲಿ ಕ್ಯಾಪಿಟಲ್ಸ್ ಕೈಬಿಟ್ಟಿತು. ಐಪಿಎಲ್‌ನ 16 ಸೀಸನ್‌ಗಳಲ್ಲಿ 170 ಪಂದ್ಯಗಳನ್ನು ಆಡಿರುವ ಮನೀಶ್ ಪಾಂಡೆ ಸೇರುವ ಯಾವುದೇ ತಂಡಕ್ಕೆ ತಮ್ಮ ದೀರ್ಘಾವಧಿ ಅನುಭವವನ್ನು ತರುತ್ತಾರೆ.

ಮನೀಶ್ ಪಾಂಡೆ ಮಿನಿ ಹರಾಜಿಗಾಗಿ 50 ಲಕ್ಷ ರೂಪಾಯಿ ಮೂಲಕ ಬೆಲೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆದರೆ ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಹುಡುಕುತ್ತಿರುವ ಕೆಲವು ತಂಡಗಳಿಂದ ದೊಡ್ಡ ಮೊತ್ತವನ್ನು ಪಡೆಯಬಹುದು.

ಮನೀಶ್ ಪಾಂಡೆ 29.07ರ ಸರಾಸರಿ ಮತ್ತು 120.97ರ ಸ್ಟ್ರೈಕ್‌ರೇಟ್‌ನಲ್ಲಿ 3808 ರನ್ ಗಳಿಸಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ ಈವರೆಗೆ 22 ಅರ್ಧಶತಕಗಳು ಮತ್ತು ಏಕೈಕ ಶತಕ ಬಾರಿಸಿದ್ದಾರೆ.

Story first published: Monday, December 18, 2023, 21:37 [IST]
Other articles published on Dec 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+