For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಈ ದೇಶದ ಪ್ರವಾಸ ಬೆಳೆಸುವುದು ಡೌಟ್

ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸ ಬೆಳೆಸಿದೆ. ಈ ವೇಳೆ ತಂಡ ಆಂಡರ್ಸನ್‌ ಹಾಗೂ ತೆಂಡೂಲ್ಕರ್ ಸರಣಿಯನ್ನು ಆಡುತ್ತಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಪ್ರವಾಸ ಆಗಸ್ಟ್‌ನಲ್ಲಿ ಮುಗಿಯಲಿದೆ. ಆ ಬಳಿಕ ಟೀಮ್ ಇಂಡಿಯಾ, ಬಾಂಗ್ಲಾದೇಶದ ಪ್ರವಾಸವನ್ನು ಬೆಳೆಸ ಬೇಕಿತ್ತು. ಆದರೆ ಈಗ ಈ ಪ್ರವಾಸವನ್ನು ತಡೆಹಿಡಿಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಭಾರತ, ಬಾಂಗ್ಲಾ ಪ್ರವಾಸದ ವೇಳೆ ಮೂರು ಏಕದಿನ ಪಂದ್ಯದ ಸರಣಿ ಹಾಗೂ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಳನ್ನು ಆಡಬೇಕಿತ್ತು. ಸರಣಿ ಆಗಸ್ಟ್‌ 17 ರಿಂದ ಆರಂಭವಾಗಬೇಕಿತ್ತು. ಆದರೆ ಈ ಸರಣಿ ನಡೆಯುತ್ತಿಲ್ಲ. ಆದರೆ ಈ ಸರಣಿ ರದ್ದಾದ ಬಗ್ಗೆ ಬಿಸಿಸಿಐ ಇನ್ನು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಕ್ರಿಕ್‌ ಬಜ್‌ ವರದಿಯ ಪ್ರಕಾರ ಬಾಂಗ್ಲಾ ಈ ಸರಣಿಯ ಸಿದ್ಧತೆಗಳನ್ನು ಸದ್ಯಕ್ಕೆ ನಿಲ್ಲಿಸಿದೆ ಎಂದು ತಿಳಿದು ಬಂದಿದೆ.

ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಪ್ರವಾಸ ಮುಂದುವರಿಸದಂತೆ ಸರ್ಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸರಣಿಗಳು ಇನ್ನು ಮುಂದೆ ನಡೆಯುವುದು ಅನುಮಾನವಾಗಿದೆ. ಇದಕ್ಕೆ ಕಾರಾಣ ಬಾಂಗ್ಲಾದೇಶ ಆ ಒಂದು ನಡೆಯಾಗಿದೆ. ಬಾಂಗ್ಲಾದೇಶ ಮಾಧ್ಯಮ ಹಕ್ಕಗಳ ಮಾರಕ್ಕೆ ಬ್ರೇಕ್ ಹಾಕಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಈ ಸರಣಿ ಮುಂದೂಡಲಾಗಿದೆ ಎಂಬ ವರದಿಗಳು ಸಹ ಬರುತ್ತಿವೆ. ಆದರೆ ಯಾವುದೇ ಸುದ್ದಿಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಈ ಸರಣಿಯನ್ನು ನಡೆಸುವ ಸಾಧ್ಯತೆ ದಟ್ಟವಾಗಿದೆ. ಈ ಸರಣಿಯ ಬಗ್ಗೆ ಉಭಯ ದೇಶಗಳು ಚರ್ಚಿಸಿ ನಿರ್ಧಾರವನ್ನು ಮಾಡಲಿವೆ.

India s Tour of Bangladesh Likely Postponed Amid Diplomatic Tensions

ಕ್ರಿಕೆಟ್‌ ಅಭಿಮಾನಿಗಳು ಈ ಸರಣಿಯನ್ನು ಎದುರು ನೋಡುತ್ತಿದ್ದರು. ಇದಕ್ಕೆ ಕಾರಣ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈ ಸರಣಿಯಲ್ಲಿ ಕಣಕ್ಕೆ ಇಳಿಯಬೇಕಿತ್ತು. ಈ ಇಬ್ಬರೂ ಸ್ಟಾರ್‌ ಆಟಗಾರರು ಈಗಾಗಲೇ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ನಿಂದ ದೂರ ಸರಿದಿದ್ದರಿಂದ ಅಭಿಮಾನಿಗಳ ಚಿತ್ತ ಈ ಸರಣಿಯಲ್ಲಿ ಮೇಲೆ ನೆಟ್ಟಿದೆ. ಹೀಗಾಗಿ ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು.

Story first published: Friday, July 4, 2025, 17:46 [IST]
Other articles published on Jul 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+