ಟೀಮ್ ಇಂಡಿಯಾ ಕಿವೀಸ್ ಪ್ರವಾಸದ ವೇಳಾಪಟ್ಟಿ ಪ್ರಕಟ: ಅಕ್ಟೋಬರ್‌ನಿಂದ ಟಿ20, ಏಕದಿನ, ಟೆಸ್ಟ್ ಸರಣಿ
ಟೀಮ್ ಇಂಡಿಯಾ ಮುಂದಿನ ಸರಣಿಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಇದೇ ವೇಳೆ ಭಾರತ ತಂಡದ ಮತ್ತೊಂದು ವೇಳಾಪಟ್ಟಿ ಪ್ರಕಟಿಸಲಾಗಿದೆ. ಟೀಮ್ ಇಂಡಿಯಾ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ. ಈ ಸರಣಿಯ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿತ್ತು. ಆದರೆ ಕಿವೀಸ್ ಸರಣಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಟಿ20, ಏಕದಿನ ಮತ್ತು ಟೆಸ್ಟ್ ಪಂದ್ಯಗಳು ನಡೆಯಲಿವೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ದೀರ್ಘ ಸರಣಿ ಆಡಲಿದೆ. ಈ ವೇಳೆ ಉಭಯ ತಂಡಗಳ ನಡುವಣ ಸರಣಿ ಟಿ20 ಸರಣಿಯಿಂದ ಆರಂಭವಾಗಲಿದೆ. ಈ ವೇಳೆ ಎರಡೂ ತಂಡಗಳು ಐದು ಪಂದ್ಯಗಳ ಟಿ20 ಸರಣಿ ಆಡಲಿವೆ. ಈ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಅಂತಿಮ ಟಿ20 ಪಂದ್ಯ ನವೆಂಬರ್ 1 ರಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

ಐದು ಪಂದ್ಯಗಳ ಟಿ20 ಸರಣಿಯ ಬಳಿಕ ಏಕದಿನ ಸರಣಿ ನಡೆಯಲಿದೆ. ಈ ಸರಣಿ ನವೆಂಬರ್ 4 ರಂದು ಆಕ್ಲೆಂಡ್‌ನಲ್ಲಿ ಆರಂಭವಾಗಲಿದ್ದು, ಅಂತಿಮ ಪಂದ್ಯ ನವೆಂಬರ್ 15 ರಂದು ನಡೆಯಲಿದೆ. ಏಕದಿನ ಸರಣಿಯ ಬಳಿಕ ಉಭಯ ತಂಡಗಳ ನಡುವಣ ಟೆಸ್ಟ್ ಸರಣಿ ನಡೆಯಲಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 19 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಮೇಲೆ ಕಣ್ಣು
ಮುಂದಿನ ವರ್ಷ ನಡೆಯಲಿರುವ 2027 ರ ಏಕದಿನ ವಿಶ್ವಕಪ್‌ಗೆ ಎರಡೂ ತಂಡಗಳು ತಯಾರಿ ನಡೆಸಲು ಈ ಸರಣಿ ಮಹತ್ವ ಪಡೆದಿದೆ. ಇನ್ನು ಉಭಯ ತಂಡಗಳ ನಡುವಣ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿ ಆಡಲಾಗುತ್ತಿದೆ. ಹೀಗಾಗಿ ಉಭಯ ತಂಡಗಳಿಗೂ ಅಂಕಗಳನ್ನು ಕಲೆ ಹಾಕುವುದು ಮುಖ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮೇಲೆ ಕಣ್ಣು ನೆಟ್ಟಿರುವ ಭಾರತಕ್ಕೆ ಈ ಸರಣಿ ಮಹತ್ವದಾಗಿದೆ.

ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20: ಅಕ್ಟೋಬರ್ 22: ಕ್ರೈಸ್ಟ್‌ಚರ್ಚ್
ಎರಡನೇ ಟಿ20: ಅಕ್ಟೋಬರ್ 24: ಕ್ರೈಸ್ಟ್‌ಚರ್ಚ್
ಮೂರನೇ ಟಿ20: ಅಕ್ಟೋಬರ್ 27: ವೆಲ್ಲಿಂಗ್ಟನ್
ನಾಲ್ಕನೇ ಟಿ20: ಅಕ್ಟೋಬರ್ 30: ಆಕ್ಲೆಂಡ್
ಐದನೇ ಟಿ20: ನವೆಂಬರ್ 1: ಹ್ಯಾಮಿಲ್ಟನ್
ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ: ನವೆಂಬರ್ 4: ಆಕ್ಲೆಂಡ್
ಎರಡನೇ ಏಕದಿನ: ನವೆಂಬರ್ 7: ವೆಲ್ಲಿಂಗ್ಟನ್
ಮೂರನೇ ಏಕದಿನ: ನವೆಂಬರ್ 10: ಹ್ಯಾಮಿಲ್ಟನ್
ನಾಲ್ಕನೇ ಏಕದಿನ: ನವೆಂಬರ್ 13: ಮೌಂಟ್ ಮೌಂಗನುಯಿ
ಐದನೇ ಏಕದಿನ: ನವೆಂಬರ್ 15: ಮೌಂಟ್ ಮೌಂಗನುಯಿ
ಟೆಸ್ಟ್ ಸರಣಿ ವೇಳಾಪಟ್ಟಿ
ಮೊದಲ ಟೆಸ್ಟ್: ನವೆಂಬರ್ 19 ರಿಂದ 23: ವೆಲ್ಲಿಂಗ್ಟನ್
ಎರಡನೇ ಟೆಸ್ಟ್: ನವೆಂಬರ್ 27 ರಿಂದ ಡಿಸೆಂಬರ್ 1: ಕ್ರೈಸ್ಟ್‌ಚರ್ಚ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications