ಕ್ರಿಕೆಟ್ : ಜ. 23ರಿಂದ ಭಾರತದಿಂದ ನ್ಯೂಜಿಲೆಂಡ್ ಪ್ರವಾಸ ಆರಂಭ

ಬೆಂಗಳೂರು, ಜುಲೈ 31: 2019ರ ಜನವರಿ 23ರಿಂದ ಭಾರತ ಹಾಗೂ ನ್ಯೂಜಿಲೆಂಡ್ ಸರಣಿ ಆರಂಭವಾಗಲಿದೆ. ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತವು ಜನವರಿ23ರಂದು ನೇಪಿಯರ್ ನಲ್ಲಿ ತನ್ನ ಮೊದಲ ಪಂದ್ಯವನ್ನಾಡಲಿದೆ.
ಈ ಪ್ರವಾಸದ ವೇಳೆ ಭಾರತ ಹಾಗೂ ನ್ಯೂಜಿಲೆಂಡ್ 5 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿವೆ. ಮೌಂಟ್ ಮೌನಗನೂಯಿ ಹಾಗೂ ವೆಲ್ಲಿಂಗ್ಟನ್ ನಲ್ಲಿ ಉಳಿದ ಏಕದಿನ ಪಂದ್ಯಗಳು ನಡೆಯಲಿವೆ.
ಭಾರತದ ಮಹಿಳಾ ತಂದ ಕೂಡಾ ಇದೇ ಅವಧಿಯಲ್ಲಿ ಪ್ರವಾಸ ಕೈಗೊಳ್ಳಲಿದೆ. ಕೊಹ್ಲಿ ಪಡೆ ಏಕದಿನ ಹಾಗೂ ಟಿ20ಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮಹಿಳಾ ತಂಡವು ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲಿಸ್ಟ್ ಆಗಿತ್ತು.
ವೇಳಾಪಟ್ಟಿ;
ಮೊದಲ ಏಕದಿನ ಪಂದ್ಯ: ಜನವರಿ 23, ನೇಪಿಯರ್
ಎರಡನೇ ಏಕದಿನ ಪಂದ್ಯ: ಜನವರಿ 26,ಮೌನಗನೂಯಿ
ಮೂರನೇ ಏಕದಿನ ಪಂದ್ಯ: ಜನವರಿ 28, ಮೌಂಟ್ ಮೌನಗನೂಯಿ
ನಾಲ್ಕನೇ ಏಕದಿನ ಪಂದ್ಯ: ಜನವರಿ 31, ಹ್ಯಾಮಿಲ್ಟನ್
ಐದನೇ ಏಕದಿನ ಪಂದ್ಯ: ಫೆಬ್ರವರಿ 03, ಹ್ಯಾಮಿಲ್ಟನ್
ಮೊದಲ ಟಿ20ಐ : ಫೆಬ್ರವರಿ 08, ಆಕ್ಲೆಂಡ್
ಎರಡನೇ ಟಿ20ಐ : ಫೆಬ್ರವರಿ 10: ಹ್ಯಾಮಿಲ್ಟನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications