Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India Vs South Africa: ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ವೇಳಾಪಟ್ಟಿ ಬಿಡುಗಡೆ

2023ರ ಏಕದಿನ ವಿಶ್ವಕಪ್ ಬಳಿಕ ಭಾರತ ದಕ್ಷಿಣ ಆಫ್ರಿಕಾಗೆ ತೆರಳಲಿದ್ದು ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಗಳನ್ನು ಆಡಲಿದೆ. ಡಿಸೆಂಬರ್-ಜನವರಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. 2 ಟೆಸ್ಟ್, 3 ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.

ಡರ್ಬನ್, ಜಿಕೆಬರ್ಹಾ, ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಪರ್ಲ್ ಮತ್ತು ಕೇಪ್ ಟೌನ್‌ಗಳಲ್ಲಿ ಎಲ್ಲಾ ಮಾದರಿಯ ಪಂದ್ಯಗಳನ್ನು ಆಯೋಜಿಸಲಾಗಿದೆ. 1ನೇ ಟಿ20 ಪಂದ್ಯ ಡರ್ಬನ್‌ನಲ್ಲಿ ನಡೆಯಲಿದೆ. 2 ನೇ ಮತ್ತು 3 ನೇ ಟಿ20 ಪಂದ್ಯಗಳು ಕ್ರಮವಾಗಿ ಗುಕ್‌ಬರ್ಹಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿವೆ.

 Indias Tour of South Africa: T20Is, ODIs, and Tests Scheduled; Matches Begin December 10.

ಮೊದಲ ಏಕದಿನ ಪಂದ್ಯ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದ್ದು, ಎರಡನೇ ಏಕದಿನ ಪಂದ್ಯ ಗುಕ್‌ಬರ್ಹಾದಲ್ಲಿ ನಡೆಯಲಿದೆ. ಸರಣಿಯ ಅಂತಿಮ ಪಂದ್ಯ ಪರ್ಲ್‌ನಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾದ ಅಪ್ರತಿಮ ನಗರಗಳಾದ ಸೆಂಚುರಿಯನ್ ಮತ್ತು ಕೇಪ್ ಟೌನ್ 2 ಪಂದ್ಯಗಳ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಲಿದೆ.

ಗಾಂಧೀಜಿ, ಮಂಡೇಲಾ ಅವರಿಗೆ ಗೌರವ ಸಮರ್ಪಣೆ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವೇಳಾಪಟ್ಟಿಯ ಕುರಿತು ಮಾತನಾಡುತ್ತಾ, ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಹೊಸ ವರ್ಷದ ಟೆಸ್ಟ್ ತೀವ್ರ ಪೈಪೋಟಿ ನಡೆಸಲಿವೆ ಎಂದು ಹೇಳಿದ್ದಾರೆ.

"ಫ್ರೀಡಂ ಸರಣಿಯು ಎರಡು ಅತ್ಯುತ್ತಮ ಟೆಸ್ಟ್ ತಂಡಗಳ ನಡುವಿನ ಸ್ಪರ್ಧೆ ಮಾತ್ರವಲ್ಲ, ಬದಲಾಗಿ ಉಭಯ ರಾಷ್ಟ್ರಗಳ ಇಬ್ಬರು ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾರಿಗೆ ನೀಡುವ ಗೌರವ ಸಮರ್ಪಣೆಯಾಗಿದೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದರು.

ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಹೊಸ ವರ್ಷದ ಟೆಸ್ಟ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿನ ಪ್ರಮುಖ ಪಂದ್ಯಗಳಲ್ಲಿ ಸೇರಿವೆ ಮತ್ತು ವೇಳಾಪಟ್ಟಿಯನ್ನು ವಿಶೇಷ ದಿನಾಂಕಗಳಲ್ಲಿ ಯೋಜಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತವು ಯಾವಾಗಲೂ ಭಾರಿ ಬೆಂಬಲ ಪಡೆಯುತ್ತಿದೆ ಮತ್ತು ಅಭಿಮಾನಿಗಳು ಯಾವುದೇ ತೀವ್ರತೆಯ ಕೊರತೆಯಿಲ್ಲದೆ ಕೆಲವು ರೋಮಾಂಚಕ ಸ್ಪರ್ಧೆಗಳನ್ನು ನೋಡಬಹುದು ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು.

ಭಾರತ-ದಕ್ಷಿಣ ಆಫ್ರಿಕಾ ಸರಣಿ ವಿವರ

1ನೇ ಟಿ20 ಪಂದ್ಯ ಡಿಸೆಂಬರ್ 10, 2023. ಸ್ಥಳ: ಡರ್ಬನ್
2ನೇ ಟಿ20 ಪಂದ್ಯ ಡಿಸೆಂಬರ್ 12, 2023. ಸ್ಥಳ: ಗುಕ್ಯುಬೆರ್ಹಾ
3ನೇ ಟಿ20 ಪಂದ್ಯ ಡಿಸೆಂಬರ್ 14, 2023. ಸ್ಥಳ: ಜೋಹಾನ್ಸ್‌ಬರ್ಗ್
1ನೇ ಏಕದಿನ ಪಂದ್ಯ ಡಿಸೆಂಬರ್ 17,2023. ಸ್ಥಳ: ಜೋಹಾನ್ಸ್‌ಬರ್ಗ್
2ನೇ ಏಕದಿನ ಪಂದ್ಯ ಡಿಸೆಂಬರ್ 19, 2023. ಸ್ಥಳ: ಗುಕ್ಯುಬೆರ್ಹಾ
3ನೇ ಏಕದಿನ ಪಂದ್ಯ ಡಿಸೆಂಬರ್ 21, 2023. ಸ್ಥಳ: ಪಾರ್ಲ್
1 ನೇ ಟೆಸ್ಟ್ ಪಂದ್ಯ ಡಿಸೆಂಬರ್ 26-30, 2023 ಸ್ಥಳ: ಸೆಂಚುರಿಯನ್
2 ನೇ ಟೆಸ್ಟ್ ಪಂದ್ಯ ಜನವರಿ 3-7, 2024 ಸ್ಥಳ: ಕೇಪ್‌ಟೌನ್

Story first published: Saturday, July 15, 2023, 11:20 [IST]
Other articles published on Jul 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+