Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ರಿಸ್ಬೇನ್‌ನಲ್ಲೂ ಸೂರ್ಯವಂಶಿ ಬ್ಯಾಟಿಂಗ್ "ವೈಭವ": 6 ಸಿಕ್ಸರ್‌ ಬಾರಿಸಿ ಅಬ್ಬರ

ಟೀಮ್ ಇಂಡಿಯಾ ಸದ್ಯ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಆಡುತ್ತಿದೆ. ಇತ್ತ ಭಾರತದ ಅಂಡರ್ 19 ಪುರುಷರ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಆಟಗಾರ ವೈಭವ್ ಸೂರ್ಯವಂಶಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದಾರೆ. ಇವರು ಆಸ್ಟ್ರೇಲಿಯಾದಲ್ಲೂ ತಮ್ಮ ನೈಜ್ಯ ಆಟವನ್ನು ಆಡಿದ್ದು ಎದುರಾಳಿಗಳಿಗೆ ನಡುಕ ಹುಟ್ಟಿದೆ.

ಬ್ರಿಸ್ಬೇನ್‌ ಅಂಗಳದಲ್ಲಿ ಭಾರತ ಅಂಡರ್ 19 ಹಾಗೂ ಆಸ್ಟ್ರೇಲಿಯಾ ಅಂಡರ್ 19 ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ವೇಳೆ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ ನಾಯಕ ಆಯುಷ್ ಮಾತ್ರೆ ಸೊನ್ನೆ ಸುತ್ತಿದರು. ಎರಡನೇ ವಿಕೆಟ್‌ಗೆ ವೈಭವ್ ಸೂರ್ಯವಂಶಿ ಹಾಗೂ ವಿಹಾನ್‌ ಮಲ್ಹೋತ್ರಾ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕಲು ಆಸೀಸ್ ಬೌಲರ್‌ಗಳು ಕಷ್ಟ ಪಟ್ಟರು. ಈ ಜೋಡಿ ಎರಡನೇ ವಿಕೆಟ್‌ಗೆ 117 ರನ್‌ ಸೇರಿಸಿತು.

India s Vaibhav Suryavanshi shines in Brisbane smashes 6 sixes in U19 match

ಈಗಾಗಲೇ ಐಪಿಎಲ್‌ನಲ್ಲಿ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನ ಮಾಡಿ ಸದ್ದು ಮಾಡಿದ್ದ ವೈಭವ್ ಸೂರ್ಯವಂಶಿ, ಆಸ್ಟ್ರೇಲಿಯಾ ಪ್ರವಾಸದಲ್ಲೂ ಇದೇ ಬ್ಯಾಟಿಂಗ್ ಝಲಕ್ ಮುಂದುವರೆಸಿದರು. ಇವರು ಎರಡನೇ ಪಂದ್ಯದಲ್ಲಿ ತಮ್ಮ ಕಲಾತ್ಮಕ ಬ್ಯಾಟಿಂಗ್ ನಡೆಸಿ, 102ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಇವರು 68 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 70 ರನ್‌ ಬಾರಿಸಿ ಅಬ್ಬರಿಸಿದರು. ಇವರ ಬ್ಯಾಟಿಂಗ್ ಕಂಡು ಅಭಿಮಾನಿಗಳು ಫುಲ್ ಖುಷ್ ಆದರು.

India s Vaibhav Suryavanshi shines in Brisbane smashes 6 sixes in U19 match

ಟೀಮ್ ಇಂಡಿಯಾ 300ಕ್ಕೆ ಆಲೌಟ್

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿಹಾನ್ ಮಲ್ಹೋತ್ರಾ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 70 ರನ್‌ ಬಾರಿಸಿದರೆ, ಅಭಿಗ್ಯಾನ್ ಕುಂಡು 5 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 71 ರನ್‌ ಬಾರಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 49.4 ಓವರ್‌ಗಳಲ್ಲಿ 300 ರನ್‌ ಕಲೆ ಹಾಕಿ ಆಲೌಟ್ ಅಯಿತು.

ಆಸೀಸ್‌ಗೆ ಸೋಲು

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಟೀಮ್ ಇಂಡಿಯಾ ನೀಡಿದ್ದ 301 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಅಂಡರ್ 19 ತಂಡ 47.2 ಓವರ್‌ಗಳಲ್ಲಿ 249 ರನ್‌ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾದ ಪರ ಜೇಡನ್ ಡ್ರೇಪರ್ ಶತಕ ಬಾರಿಸಿ ಮಿಂಚಿದರು. ಇವರು 72 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ 107 ರನ್‌ ಬಾರಿಸಿದರು. ಭಾರತದ ಪರ ಆಯುಷ್ ಮಾತ್ರೆ 3, ಕನಿಷ್ಕ್ ಚೌಹಾಣ್‌ 2 ವಿಕೆಟ್‌ ಪಡೆದು ಗೆಲುವಿನಲ್ಲಿ ಮಿಂಚಿದರು. ಟೀಮ್ ಇಂಡಿಯಾ ಸರಣಿಯಲ್ಲಿ ಇನ್ನು ಒಂದು ಪಂದ್ಯ ಉಳಿದಿರುವಂತೆಯೇ ಸರಣಿಯನ್ನು ವಶಕ್ಕೆ ಪಡೆದಿದೆ.

Story first published: Wednesday, September 24, 2025, 14:15 [IST]
Other articles published on Sep 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+