ಚಾಂಪಿಯನ್ ಭಾರತ ತಂಡವನ್ನು ಭೇಟಿಯಾಗಲಿರುವ ಪ್ರಧಾನಿ ಮೋದಿ
ಭಾನುವಾರ ನವಿ ಮುಂಬೈನ ಡಿವೈ ಪಾಟೀಲ್ ಅಂಗಳದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಈ ಟ್ರೋಫಿಗೆ ಮುತ್ತಿಟ್ಟ ವಿಶ್ವದ ನಾಲ್ಕನೇ ತಂಡ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದೆ. ಈ ಮೂಲಕ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದೆ. ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿದ ಭಾರತ ತಂಡಕ್ಕೆ ಅಭಿಮಾನಿಗಳ ಮಹಾಪೋರ ಹರಿದು ಬಂದಿದೆ. ಚಾಂಪಿಯನ್ ತಂಡಕ್ಕೆ ಪ್ರಧಾನಿ ಮೋದಿ ಸಹ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕ್ರೀಡಾಪಟುಗಳಿಗೆ ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಉತ್ತೇಜಿಸುತ್ತಾರೆ. ಈ ಬಾರಿಯೂ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಚಾಂಪಿಯನ್ ತಂಡವನ್ನು ಶೀಘ್ರದಲ್ಲಿ ಭೇಟಿಯಾಗಲಿದ್ದಾರೆ. ಮೋದಿ ಹರ್ಮನ್ ಪ್ರೀತ್ ಪಡೆಯನ್ನು ನವೆಂಬರ್ 5 ರಂದು ಭೇಟಿಯಾಗುವು ಸಾಧ್ಯತೆ ಇದೆ. ಇದೇ ವೇಳೆ ಅವರೊಂದಿಗೆ ಉಪಹಾರ ಸೇವಿಸುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾವನ್ನು ಮಣಿಸಿದ ಬಳಿಕ ಹರ್ಮನ್ ಪ್ರಿತ್ ಪಡೆ ರಾತ್ರಿಯಿಡಿ ಹೊಟೇಲ್‌ನಲ್ಲಿ ಸಂಭ್ರಮಾಚರಣೆ ನಡೆಸಿದೆ. ಮಂಗಳವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಆಟಗಾರ್ತಿಯರು ದೆಹಲಿಗೆ ತೆರಳಲಿದ್ದಾರೆ. ವಿಜಯೋತ್ಸವದ ಮೆರವಣಿಗೆಗೆ ಸಂಬಂಧಿಸಿದಂತೆ, ಬಿಸಿಸಿಐ ಕಾರ್ಯದರ್ಶಿ ಇನ್ನೂ ಅಂತಹ ಯಾವುದೇ ಯೋಜನೆಗಳನ್ನು ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ಸನ್ಮಾನ ಯಾವಾಗ
ಇನ್ನು ದುಬೈನಲ್ಲಿ ನವೆಂಬರ್ 4 ರಿಂದ 7ರ ವರೆಗೆ ಐಸಿಸಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆತಲ್ಲಿ ಬಿಸಿಸಿಐ ಅಧಿಕಾರಿಗಳು ಸಹ ಭಾಗವಹಿಸಲಿದ್ದಾರೆ. ಈ ಸಭೆಯ ಬಳಿಕ ಬಿಸಿಸಿಐ ಹರ್ಮನ್ ಪ್ರೀತ್ ಪಡೆಯನ್ನು ಸನ್ಮಾನಿಸುವ ಸಾಧ್ಯತೆ ಇದೆ. ಈ ವೇಳೆ ಬಿಸಿಸಿಐ ಆಟಗಾರ್ತಿಯರು ಹಾಗೂ ಸಹಾಯಕ ಸಿಬ್ಬಂದಿಗಿಳಗೆ ಸನ್ಮಾನ ಕಾರ್ಯಕ್ರಮ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications