For Quick Alerts
ALLOW NOTIFICATIONS  
For Daily Alerts
 

Women World Cup 2025: ಭಾರತ ಸೆಮಿಫೈನಲ್‌ ಹೇಗೆ ತಲುಪಲಿದೆ? ಇಲ್ಲಿದೆ ಲೆಕ್ಕಾಚಾರ

ಮಹಿಳಾ ಏಕದಿನ ವಿಶ್ವಕಪ್‌ ಈಗ ರೋಚಕ ಘಟ್ಟದತ್ತ ಮುಖ ಮಾಡಿದೆ. ಎಲ್ಲ ತಂಡಗಳು ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚುತ್ತಿವೆ. ಇನ್ನು ಲೀಗ್‌ ಹಂತದ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲೆಯನ್ನು ಮೊತ್ತವನ್ನು ಕಲೆ ಹಾಕಿದರೂ, ಜಯ ಸಾಧಿಸುವಲ್ಲಿ ವಿಫಲರಾಗಿರುವ ಭಾರತ, ಸೆಮಿಫೈನಲ್‌ ಲೆಕ್ಕಾಚಾರವನ್ನು ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸೋಲು ಭಾರತದ ಸೆಮಿಫೈನಲ್‌ ಆಸೆಗೆ ಪೆಟ್ಟು ನೀಡಿದೆ. ಆದರೆ ಭಾರತಕ್ಕೆ ಇನ್ನು ಉಪಾಂತ್ಯ ತಲುಪುವ ಕನಸು ಇದೆ. ಹಾಗಿದ್ದರೆ ಆ ಲೆಕ್ಕಾಚಾರ ಏನು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಟೀಮ್ ಇಂಡಿಯಾ ತವರಿನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಆರಂಭದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ, ಮೂರನೇ ಗೆಲುವಿನ ಕನಸನ್ನು ದಕ್ಷಿಣ ಆಫ್ರಿಕಾ ಆಟಗಾರ್ತಿಯರು ನುಚ್ಚು ನೂರು ಮಾಡಿದರು. ಇನ್ನು ಆಸ್ಟ್ರೇಲಿಯಾ ವಿರುದ್ಧ ದಾಖಲೆ ಮೊತ್ತವನ್ನು ಕಲೆ ಹಾಕಿ ಡಿಫೆಂಡ್ ಮಾಡಿಕೊಳ್ಳುವ ತಂಡದ ಆಸೆ ಕೈ ಕೊಟ್ಟಿದೆ. ಆಸ್ಟ್ರೇಲಿಯಾ 331 ರನ್‌ಗಳ ಗುರಿಯನ್ನು ಇನ್ನು 6 ಎಸೆತ ಬಾಕಿ ಇರುವಂತೆ ಮಟ್ಟಿ ಬೀಗಿದೆ. ಆಡಿರುವ 4 ಪಂದ್ಯಗಳಲ್ಲಿ 2 ಜಯ, 2 ಸೋಲು ಕಂಡಿರುವ ಭಾರತ ನೆಟ್‌ ರನ್‌ ರೇಟ್‌ ಉತ್ತಮವಾಗಿದ್ದರಿಂದ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.

India s Women s ODI World Cup Semifinal Scenario Must-Win Matches and Points Table Analysis

ಹರ್ಮನ್ ಪ್ರೀತ್ ಪಡೆ ಪ್ರಸಕ್ತ ವಿಶ್ವಕಪ್‌ನಲ್ಲಿ ಇನ್ನು ಮೂರು ಪಂದ್ಯಗಳನ್ನು ಆಡಲಿವೆ. ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಭಾರತ ಲೀಗ್ ಹಂತದಲ್ಲಿ ಕಾದಾಟ ನಡೆಸಲಿದೆ. ಉಪಾಂತ್ಯ ಪಂದ್ಯವನ್ನು ತಲುಪಲು ಟೀಮ್ ಇಂಡಿಯಾ ಮುಂದೆ ಆಡುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವ ಅನಿವಾರ್ಯತೆ ಇದೆ. ಭಾರತ ಮೂರು ಪಂದ್ಯಗಳಲ್ಲಿ 2 ಗೆದ್ದು, 1 ಸೋಲು ಕಂಡರೆ ಕಷ್ಟ ಎದುರಿಸಲಿದೆ. ಆಗ ತಂಡ ಬೇರೆ ತಂಡಗಳ ಆಟದ ಮೇಲೆ ಅವಲಂಬಿತವಾಗುತ್ತದೆ.

ಮಹಿಳಾ ವಿಶ್ವಕಪ್ 2025: ಭಾರತದ ಉಳಿದ ಪಂದ್ಯ

ಅಕ್ಟೋಬರ್ 19 ಇಂಗ್ಲೆಂಡ್ ವಿರುದ್ಧ
ಅಕ್ಟೋಬರ್ 23 ನ್ಯೂಜಿಲೆಂಡ್ ವಿರುದ್ಧ
ಅಕ್ಟೋಬರ್ 26 ಬಾಂಗ್ಲಾದೇಶ ವಿರುದ್ಧ

India s Women s ODI World Cup Semifinal Scenario Must-Win Matches and Points Table Analysis

ಅಂಕ ಪಟ್ಟಿ

ಆಸ್ಟ್ರೇಲಿಯಾ ಆಡಿರುವ 4 ಪಂದ್ಯಗಳಲ್ಲಿ 3 ಜಯ 1 ಪಂದ್ಯ ರದ್ದಾಗಿದ್ದು, 7 ಅಂಕಗಳಿಂದ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಇನ್ನು ಇಂಗ್ಲೆಂಡ್‌ ಆಡಿರುವ 3 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು 6 ಅಂಕಗಳೊಂದಿಗೆ ಎರಡನೇ ಸ್ಥಾನವನ್ನುವನ್ನು ಹೊಂದಿದೆ. ಇನ್ನು ಟೀಮ್ ಇಂಡಿಯಾ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಅಲ್ಲದೆ ರನ್‌ ರೇಟ್‌ ಸಹ ಪ್ಲಸ್‌ನಲ್ಲಿದೆ. ಇನ್ನು ದಕ್ಷಿಣ ಆಫ್ರಿಕಾ 3 ಪಂದ್ಯಗಳಲ್ಲಿ 2 ಜಯ ಸಾಧಿಸಿದ್ದು, 4 ಅಂಕಗಳನ್ನು ಕಲೆ ಹಾಕಿದೆ. ಆದರೆ ಈ ತಂಡದ ನೆಟ್‌ ರನ್‌ ರೇಟ್‌ ಮೈನಸ್‌ನಲ್ಲಿ ಇದೆ. ನ್ಯೂಜಿಲೆಂಡ್ ತಂಡ ಐದನೇ ಸ್ಥಾನದಲ್ಲಿದ್ದು, ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ.

Story first published: Monday, October 13, 2025, 19:40 [IST]
Other articles published on Oct 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+