Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

"ಟೀಮ್ ಇಂಡಿಯಾಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶ ಇತ್ತು"

ಲೀಡ್ಸ್‌ ಅಂಗಳದಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದೆ. ಆಂಡರ್ಸನ್‌-ತೆಂಡೂಲ್ಕರ್‌ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 371 ರನ್‌ಗಳ ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಈ ವೇಳೆ ಭಾರತದ ನಾಯಕ ಶುಭಮನ್‌ ಗಿಲ್ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಆಟಗಾರರು ವಿಫಲರಾಗಿದ್ದಾರೆ. ಇಂಗ್ಲೆಂಡ್‌ ತನ್ನ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಕಳೆದುಕೊಂಡು ಈ ಗುರಿಯನ್ನು ಮುಟ್ಟಿತು. ಈ ಪಂದ್ಯದ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್‌ ದೊಡ್ಡ ಹೇಳಿಕೆ ನೀಡಿದ್ದಾರೆ.

ಟೀಮ್ ಇಂಡಿಯಾ ಯುವ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಇದ್ದಾಗಿನ ವೈಬ್ ಇಲ್ಲಾ ಎಂದು ನಾಸಿರ್ ಹುಸೇನ್ ತಿಳಿಸಿದ್ದಾರೆ. ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ನಾಸೀರ್, ಶುಭಮನ್‌ ಗಿಲ್ ನಾಯಕತ್ವದ ಬಗ್ಗೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

India s Young Squad Lacks Leadership Vibe Says Nasser Hussain After Leeds Loss

ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದಲ್ಲಿದ್ದಾಗ ಅವರು ಮುನ್ನಡೆಸುವ ಧಾಟಿಯನ್ನು ನೋಡಿ ಹೇಳಬಹುದಾಗಿತ್ತು. ಈಗ ಪಂದ್ಯವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂದು. ಲೀಡ್ಸ್‌ ಪಂದ್ಯದಲ್ಲಿ ಈ ರೀತಿಯ ಆಟ ಕಾಣಲಿಲ್ಲ. ಮೊದಲ ಟೆಸ್ಟ್‌ ವೇಳೆ ಟೀಮ್ ಇಂಡಿಯಾದ ಪರ ಇಬ್ಬರಿಂದ ಮೂವರು ಆಟಗಾರರು ತಂಡವನ್ನು ಮುನ್ನಡೆಸಿದರು ಎಂದು ಕಾಣಿಸುತ್ತಿತ್ತು. ಭಾರತದ ಈ ಸ್ಥಿತಿ ನೋಡಿ ಕಳವಳವಾಗಿತ್ತು ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾದ ಬಳಿ ರವಿ ಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಅವರಂತಹ ಸ್ಟಾರ್ ಆಲ್‌ರೌಂಡರ್‌ಗಳು ಇದ್ದರು. ಇಂಗ್ಲೆಂಡ್‌ ತಂಡದಲ್ಲಿ ಇನ್ನು ಸಾಕಷ್ಟು ಆಲ್‌ರೌಂಡರ್‌ಗಳು ಹುಡುಕುತ್ತಿದ್ದಾರೆ. ಭಾರತದ ಕೆಳ ಮಧ್ಯಮ ಕ್ರಮಾಂಕ ಈ ಪಂದ್ಯದಲ್ಲಿ ಆಡಿದ ಧಾಟಿ ಚಿಂತೆಯನ್ನು ಹೆಚ್ಚಿಸಿದೆ. ಒಮ್ಮೆ ಭಾರತ 31 ರನ್‌ಗಳಿಗೆ 6, ಇನ್ನೊಮ್ಮೆ 41 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿತು. ಸರಣಿಯಲ್ಲಿ ಈ ಆಟ ಹೀಗೆ ಮುಂದೆವರೆದಲ್ಲಿ ಫಲಿತಾಂಶ ಶೀಘ್ರದಲ್ಲಿ ಕಣ್ಣು ಮುಂದೆ ಇರಲಿದೆ ಎಂದು ನಾಸಿರ್ ಹುಸೇನ್ ತಿಳಿಸಿದ್ದಾರೆ.

India s Young Squad Lacks Leadership Vibe Says Nasser Hussain After Leeds Loss

ಸ್ಟುವರ್ಟ್ ಬ್ರಾಡ್‌ ಹೇಳಿದ್ದೇನು?

ಟೀಮ್ ಇಂಡಿಯಾದ ಈ ಆಟದ ಬಗ್ಗೆ ಇಂಗ್ಲೆಂಡ್‌ ತಂಡದ ಮಾಜಿ ವೇಗದ ಬೌಲರ್‌ ಸ್ಟುವರ್ಟ್ ಬ್ರಾಡ್‌ ಸಹ ಹೇಳಿಕೆ ನೀಡಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಭಾರತ ತಂಡಕ್ಕೆ ಪಂದ್ಯ ಗೆಲ್ಲುವ ಅವಕಾಶಗಳು ಇದ್ದವು. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಹಿಡಿತ ಸಾಧಿಸುವ ಅವಕಾಶವನ್ನು ಸಾಕಷ್ಟು ಬಾರಿ ಪಡೆದರೂ ಸಹ, ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಯಿತು ಎಂದಿದ್ದಾರೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯ ಎಡ್ಜ್‌ಬಾಸ್ಟನ್ ನಲ್ಲಿ ಜುಲೈ 2ರಿಂದ ಆರಂಭವಾಗಲಿದೆ. ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪುಟಿದೇಳುವ ವಿಶ್ವಾಸವನ್ನು ಹೊಂದಿದೆ. ಈ ವೇಳೆ ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ ದಟ್ಟವಾಗಿದೆ.

Story first published: Wednesday, June 25, 2025, 22:19 [IST]
Other articles published on Jun 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+