For Quick Alerts
ALLOW NOTIFICATIONS  
For Daily Alerts
 

INDW vs AUSW: ರಿಚಾ ಘೋಷ್‌ ಏಕಾಂಗಿ ಹೋರಾಟ ವ್ಯರ್ಥ, ಭಾರತಕ್ಕೆ ಸೋಲು

ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ತಂಡ ಸೋಲು ಕಂಡಿದೆ. ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾವನ್ನು 3 ರನ್‌ಗಳಿಂದ ಮಣಿಸಿತು.

ಪಂದ್ಯದ ಒಂದು ಹಂತದಲ್ಲಿ ಟೀಂ ಇಂಡಿಯಾ ಸುಲಭವಾಗಿ ಗೆಲ್ಲುತ್ತದೆ ಎಂದು ಅನಿಸಿದರೂ ಆಸ್ಟ್ರೇಲಿಯಾ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಗಮನ ಸೆಳೆದರು. 259 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 255 ರನ್ ಗಳಿಸಲಷ್ಟೇ ಶಕ್ತವಾಯಿತು. ರಿಚಾ ಘೋಷ್ ಭಾರತದ ಪರ 96 ರನ್‌ಗಳ ಅಮೋಘ ಇನ್ನಿಂಗ್ಸ್ ಕಟ್ಟಿ ಮಿಂಚಿದರು.

INDW vs AUSW: Richa Ghoshs Valiant Effort in Vain, India Faces Defeat

ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 258 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ತಂಡಕ್ಕೆ 63 ರನ್‌ಗಳ ದೊಡ್ಡ ಇನ್ನಿಂಗ್ಸ್ ಕಟ್ಟಿದರು. ಇದಲ್ಲದೇ ಅಲಿಸ್ಸಾ ಪೆರ್ರಿ 50 ರನ್ ಗಳಿಸಿ ತಂಡವನ್ನು 250 ರನ್ ಗಡಿ ದಾಟಿಸಲು ನೆರವಾದರು.

ಈ ಗುರಿಯನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಆಸ್ಟ್ರೇಲಿಯಾ ಬೌಲರ್ ಗಳು ಬಿಗುವಿನ ದಾಳಿ ನಡೆಸಿ 255 ರನ್ ಗಳಿಗೆ ಸೀಮಿತಗೊಳಿಸಿದರು. ರಿಚಾ ಘೋಷ್ ಬ್ಯಾಟಿಂಗ್ ಮಾಡುವಾಗ ಟೀಂ ಇಂಡಿಯಾ ಸುಲಭವಾಗಿ ಗೆಲ್ಲುತ್ತದೆ ಎಂದು ಅನಿಸುತ್ತಿತ್ತು. ಆದರೆ ರಿಚಾ ವಿಕೆಟ್ ನಂತರ ಗೆಲುವು ಆಸ್ಟ್ರೇಲಿಯಾ ಪರ ವಾಲಿತು.

259 ರನ್‌ಗಳ ಗುರಿ ಬೆನ್ನತ್ತಿದ ಭಾರತದ ಪರ ಯಾಸ್ತಿಕಾ 14 ಮತ್ತು ಸ್ಮೃತಿ 34 ರನ್ ಸಿಡಿಸಿದರು. ಎರಡನೇ ವಿಕೆಟ್‌ಗೆ ಸ್ಮೃತಿ ಮಂಧಾನ ಹಾಗೂ ರಿಚಾ ಘೋಷ್ 34 ರನ್‌ಗಳ ಜೊತೆಯಾಟ ನೀಡಿದರು.

INDW vs AUSW: Richa Ghoshs Valiant Effort in Vain, India Faces Defeat

ರಿಚಾ ಘೋಷ್ ಮತ್ತು ಜೆಮಿಮಾ ರಾಡ್ರಿಗಸ್ ಅವರೊಂದಿಗೆ ಮೂರನೇ ವಿಕೆಟ್‌ಗೆ 88 ರನ್ (108 ಎಸೆತಗಳು) ಜೊತೆಯಾಟವನ್ನು ನೀಡಿದರು. ಜೆಮಿಮಾ 3 ಬೌಂಡರಿಗಳ ನೆರವಿನಿಂದ 44 ರನ್ ಗಳಿಸಿದರು. ರಿಚಾ ಘೋಷ್ 13 ಬೌಂಡರಿ ಸಹಾಯದಿಂದ 96 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು.

ಉಳಿದಂತೆ ದೀಪ್ತಿ ಶರ್ಮಾ 24 ರನ್ ಬಾರಿಸಿದರೆ ಉಳಿದ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ನಲ್ಲಿನ ಆಟ ಮುಗಿಸಿದರು.

ಆಸ್ಟ್ರೇಲಿಯಾ ಪರ ಅನ್ನಾಬೆಲ್ ಸದರ್ಲ್ಯಾಂಡ್ ಗರಿಷ್ಠ 3 ವಿಕೆಟ್ ಪಡೆದರು. ಅವರು 9 ಓವರ್‌ಗಳಲ್ಲಿ 47 ರನ್‌ಗಳನ್ನು ಕಳೆದರು. ಇದಲ್ಲದೆ ಜಾರ್ಜಿಯಾ ವೆಹ್ರಾಮ್ ಅವರ ಹೆಸರಿನಲ್ಲಿ 2 ವಿಕೆಟ್ ಪಡೆದರು. ಅಲನ್ ಕಿಂಗ್, ಕಿಮ್ ಗಾರ್ತ್ ಮತ್ತು ಆಶ್ಲೇ ಗಾರ್ಡ್ನರ್ ತಲಾ ಒಂದು ವಿಕೆಟ್ ಪಡೆದರು.

Story first published: Saturday, December 30, 2023, 22:55 [IST]
Other articles published on Dec 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+