INDW vs AUSW: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಕ್ಕೆ 8 ವಿಕೆಟ್ ಜಯ
ಸಂಘಟಿತ ಆಟದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ವನಿತೆಯರ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಜಯ ಸಾಧಿಸಿದೆ.
ಭಾನುವಾರ ಎರಡನೇ ಇನ್ನಿಂಗ್ಸ್‌ನ್ನು 5 ವಿಕೆಟ್‌ಗೆ 233 ರನ್ ಗಳಿಂದ ಆಟ ಮುಂದುವರಿಸಿದ ಆಸ್ಟ್ರೇಲಿಯಾ 261 ರನ್ ಗಳಿಗೆ ಆಲೌಟ್ ಆಯಿತು. 75 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು ನಿಗದಿತ ಗುರಿಯನ್ನು ಮುಟ್ಟಿತು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 219 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 261 ರನ್ ಸೇರಿಸಿತು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 406 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 75 ರನ್ ಸೇರಿಸಿತು.

ಆಸೀಸ್ ಪರ ಭಾನುವಾರ ಬ್ಯಾಟಿಂಗ್ ಮುಂದುವರೆಸಿದ ಅನ್ನಾಬೆಲ್ ಸದರ್ಲ್ಯಾಂಡ್ 27 ಹಾಗೂ ಆಶ್ಲೀ ಗಾರ್ಡ್ನರ್ 7 ರನ್ ಗಳಿಸಿ ಔಟ್ ಆದರು. ಉಳಿದ ಆಟಗಾರರು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.
ಟೀಮ್ ಇಂಡಿಯಾ ಪರ ಸ್ನೇಹಾ ರಾಣ 63 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಉಳಿದಂತೆ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಹಾಗೂ ಹರ್ಮನ್ ಪ್ರೀತ್ ಕೌರ್ ತಲಾ ಎರಡು ವಿಕೆಟ್ ಕಬಳಿಸಿದರು.
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಭಾರತದ ಆರಂಭ ಕಳಪೆಯಾಗಿತ್ತು. ಶಫಾಲಿ ವರ್ಮಾ 4 ರನ್ ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್‌ಗೆ ಸ್ಮೃತಿ ಮಂಧನ ಹಾಗೂ ರಿಚಾ ಘೋಷ್ ಜೊತೆಗೂಡಿ 51 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ರಿಚಾ 13 ರನ್‌ಗಳಿಗೆ ಔಟ್ ಆದರು.

ಸ್ಮೃತಿ ಜೊತೆಗೂಡಿ ಜೆಮಿಮಾ ರಾಡ್ರಿಗಸ್ ಟೀಮ್ ಇಂಡಿಯಾಕ್ಕೆ ಗೆಲುವಿನ ಮಾಲೆ ತೊಡಿಸಿದರು. ಸ್ಮೃತಿ 61 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ ಅಜೇಯ 38 ರನ್ ಬಾರಿಸಿದರು. ಜೆಮಿಮಾ ರಾಡ್ರಿಗಸ್ ಅಜೇಯ 12 ರನ್ ಬಾರಿಸಿದರು.
ಇದಕ್ಕೂ ಮೊದಲು ಇಂಗ್ಲೆಂಡ್ ವನಿತೆಯರ ವಿರುದ್ಧ ನಡೆದ ಏಕೈಕ ಟೆಸ್ಟ್‌ನಲ್ಲೂ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 428 ರನ್ ಸೇರಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 136 ರನ್ ಗಳಿಗೆ ಆಲೌಟ್ ಆಗಿತ್ತು.

ಫಾಲೋ ಆನ್ ನೀಡದೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 6 ವಿಕೆಟ್‌ಗೆ 186 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು 131 ರನ್ ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ 347 ರನ್‌ಗಳ ಜಯ ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 219 ಹಾಗೂ ಎರಡನೇ ಇನ್ನಿಂಗ್ಸ್ 261
ಟೀಮ್ ಇಂಡಿಯಾ 406 ಹಾಗೂ ಎರಡನೇ ಇನ್ನಿಂಗ್ಸ್ 2 ವಿಕೆಟ್‌ಗೆ 75
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications