Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

INDw vs BANw: ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳೆಯರಿಗೆ ಶರಣಾದ ಭಾರತ ತಂಡ

ಭಾನುವಾರ, ಜುಲೈ 16ರಂದು ಢಾಕಾದ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ವಿರುದ್ಧ ಬಾಂಗ್ಲಾದೇಶ ಮಹಿಳಾ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮಹಿಳಾ ತಂಡ 43 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. 153 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ವನಿತೆಯರು 35.5 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಪ್ರವಾಸಿ ತಂಡ 40 ರನ್‌ಗಳಿಂದ ಮುಖಭಂಗ ಅನುಭವಿಸಿತು.

INDW vs BANW: Bangladesh Womens Beat India Womens By 40 Runs In 1st ODI Match

ಮೊದಲು ಬ್ಯಾಟಿಂಗ್ ಮಾ ಬಾಂಗ್ಲಾದೇಶ ಮಹಿಳಾ ತಂಡದ ಪರ ಮುರ್ಶಿದಾ ಖಾತುನ್ 13 ರನ್, ಫರ್ಗಾನ್ ಹೊಕ್ಯೂ ಪಿಂಕಿ 27 ರನ್, ನಾಯಕಿ ನಿಗರ್ ಸುಲ್ತಾನಾ 39 ರನ್, ರಿತು ಮೋನಿ 8 ರನ್, ರಬೇಯಾ ಖಾನ್ 10 ರನ್, ಫಾಹಿಮಾ ಖಾತುನ್ 12 ರನ್, ಸುಲ್ತಾನಾ ಖಾತುನ್ 16 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಭಾರತ ಮಹಿಳಾ ತಂಡದ ಪರ ಅಮನ್ಜೋತ್ ಕೌರ್ 9 ಓವರ್‌ಗಳಲ್ಲಿ 31 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ದೇವಿಕಾ ವೈದ್ಯ 7 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ದೀಪ್ತಿ ಶರ್ಮಾ ಒಂದು ವಿಕೆಟ್ ಕಬಳಿಸಿದರು.

ಇನ್ನು 153 ರನ್‌ಗಳ ಸಾಧಾರಣ ಗುರಿ ಚೇಸಿಂಗ್ ಮಾಡಿದ ಭಾರತ ಮಹಿಳಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. 13 ರನ್‌ಗಳಾಗಿದ್ದಾಗ 11 ರನ್ ಗಳಿಸಿ ಆಡುತ್ತಿದ್ದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ವಿಕೆಟ್ ಒಪ್ಪಿಸಿದರು. ಪ್ರಿಯಾ ಪೂನಿಯಾ 10 ರನ್, ಯಾಸ್ತಿಕಾ ಭಾಟಿಯಾ 15 ರನ್ ಗಳಿಸಿ ಔಟಾದರು.

ನಾಯಕ ಹರ್ಮನ್‌ಪ್ರೀತ್ ಕೌರ್ ಕೇವಲ 5 ರನ್, ಜೆಮಿಮಾ ರೋಡ್ರಿಗಸ್ 10 ರನ್, ದೀಪ್ತಿ ಶರ್ಮಾ 20 ರನ್, ಅಮನ್ಜೋತ್ ಕೌರ್ 15 ರನ್, ದೇವಿಕಾ ವೈದ್ಯ 10 ರನ್, ಪೂಜಾ ವಸ್ತ್ರಾಕರ್ 7 ರನ್ ಗಳಿಸಿದರು. ತಂಡದ ಗೆಲುವಿಗೆ ಯಾರೊಬ್ಬರು ನಿಂತು ಆಡಲಿಲ್ಲ.

ಬಾಂಗ್ಲಾದೇಶ ತಂಡದ ಪರ ಬೌಲಿಂಗ್‌ನಲ್ಲಿ ಮಾರುಫಾ ಅಕ್ಟರ್ 7 ಓವರ್‌ಗಳಲ್ಲಿ 27 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ರಬೇಯಾ ಖಾನ್ 7.5 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ನಹಿದಾ ಅಕ್ಟರ್ ಮತ್ತು ಸುಲ್ತಾನಾ ಖಾತುನ್ ತಲಾ ಒಂದೊಂದು ವಿಕೆಟ್ ಪಡೆದರು.

ಭಾರತ ಮಹಿಳಾ ತಂಡದ ಪ್ರಮುಖ 4 ವಿಕೆಟ್ ಪಡೆದ ಬಾಂಗ್ಲಾದೇಶ ತಂಡದ ಮಾರುಫಾ ಅಕ್ಟರ್ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾದರು.

Story first published: Sunday, July 16, 2023, 18:22 [IST]
Other articles published on Jul 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+