For Quick Alerts
ALLOW NOTIFICATIONS  
For Daily Alerts
 

INDW vs BANW: ಭಾರತ ವಿರುದ್ಧದ ಟಿ20 ಸರಣಿಗೆ ಬಾಂಗ್ಲಾದೇಶ ವನಿತೆಯರ ತಂಡ ಪ್ರಕಟ

ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು ಭಾರತ ವನಿತೆಯರ ವಿರುದ್ಧದ ಮುಂಬರುವ ಮಹಿಳಾ ಟಿ20 ಸರಣಿಗೆ 16 ಸದಸ್ಯರ ತಂಡವನ್ನು ಬುಧವಾರ, ಜುಲೈ 4ರಂದು ಪ್ರಕಟಿಸಿದೆ. ತಂಡದ ಅನುಭವಿ ವೇಗದ ಬೌಲರ್‌ಗಳಾದ ಜಹನಾರಾ ಆಲಂ ಮತ್ತು ಫರ್ಗಾನಾ ಹೊಕ್ ಪಿಂಕಿ ಅವರನ್ನು ಕೈಬಿಡಲಾಗಿದೆ.

ಇದಕ್ಕೂ ಮೊದಲು, ಜಹನಾರಾ ಆಲಂ ಅವರು ಟಿ20 ತಂಡದ ಭಾಗವಾಗಿಲ್ಲದ ರುಮಾನಾ ಅಹ್ಮದ್ ಜೊತೆಗೆ ಮಹಿಳಾ ಏಕದಿನ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶ ಮಹಿಳಾ ತಂಡದ ಪರ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಜಹನಾರಾ ಆಲಂ ಹೊರಗಿಡುವ ಮೊದಲು ಶ್ರೀಲಂಕಾದಲ್ಲಿ ಮೂರು ಪಂದ್ಯಗಳನ್ನು ಆಡಿದ್ದರು.

ಇನ್ನು ಫರ್ಗಾನಾ ಹೊಕ್ ಪಿಂಕಿ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ, ಆದರೆ ಲತಾ ಮೊಂಡಲ್, ಶರ್ಮಿನ್ ಅಕ್ಟರ್ ಸುಪ್ತಾ ಮತ್ತು ಫರಿಹಾ ತ್ರಿಸ್ನಾ ಅವರೊಂದಿಗೆ ಟಿ20 ಪಂದ್ಯಗಳಿಗೆ ಸ್ಟ್ಯಾಂಡ್‌ಬೈ ಆಟಗಾರ್ತಿಯರ ಪಟ್ಟಿಯಲ್ಲಿದ್ದಾರೆ.

Bangladesh announced 16-member womens squad

ಇದೇ ವೇಳೆ ಶ್ರೀಲಂಕಾ ಸರಣಿಗೆ ವಿಶ್ರಾಂತಿ ಪಡೆದ ನಂತರ ಬಾಂಗ್ಲಾದೇಶ ತಂಡದ ಅನುಭವಿ ಸ್ಪಿನ್ನರ್ ಮತ್ತು ಮಾಜಿ ನಾಯಕಿ ಸಲ್ಮಾ ಖಾತುನ್ ಅವರನ್ನು ಭಾರತ ಮಹಿಳಾ ತಂಡದ ವಿರುದ್ಧದ ಸರಣಿಗೆ ಮರಳಿ ಕರೆ ತಂದಿದೆ.

ಈ ವರ್ಷದ ಆರಂಭದಲ್ಲಿ ಅಂಡರ್-19 ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಿದ ದಿಲಾರಾ ಅಕ್ಟರ್ ಮತ್ತು ಮಾರುಫಾ ಅಕ್ಟರ್ ಕೂಡ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

ಭಾರತ ಮಹಿಳಾ ತಂಡದ ಬಾಂಗ್ಲಾದೇಶ ಪ್ರವಾಸವು ಜುಲೈ 9, 11 ಮತ್ತು 13ರಂದು ಮೂರು ಟಿ20 ಪಂದ್ಯಗಳೊಂದಿಗೆ ಆರಂಭವಾಗಲಿದೆ. ಎಲ್ಲಾ ಮೂರು ಪಂದ್ಯಗಳು ಮೀರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ.

ಭಾರತ ತಂಡ ಗುರುವಾರ, ಜೂನ್ 6ರಂದು ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದೆ. ಇನ್ನು ಜುಲೈ 16ರಿಂದ ಜುಲೈ 22ರವರೆಗೆ ಢಾಕಾದಲ್ಲಿಯೇ ಏಕದಿನ ಸರಣಿ ನಡೆಯಲಿದೆ. ವಿಕೆಟ್ ಕೀಪರ್-ಬ್ಯಾಟರ್ ನಿಗರ್ ಸುಲ್ತಾನಾ ಜೋಟಿ ಎರಡೂ ಸರಣಿಗಳಲ್ಲಿ ಬಾಂಗ್ಲಾದೇಶ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ವಿರುದ್ಧ ಬಾಂಗ್ಲಾದೇಶ ಮಹಿಳಾ ಟಿ20 ತಂಡ

ನಿಗರ್ ಸುಲ್ತಾನಾ ಜೋಟಿ (ನಾಯಕಿ/ ವಿಕೆಟ್ ಕೀಪರ್), ನಹಿದಾ ಅಕ್ಟರ್ (ಉಪನಾಯಕಿ), ದಿಲಾರಾ ಅಕ್ಟರ್, ಶಥಿ ರಾಣಿ, ಶಮೀಮಾ ಸುಲ್ತಾನಾ, ಸೋಭಾನಾ ಮೊಸ್ತರಿ, ಮುರ್ಷಿದಾ ಖಾತುನ್, ಶೋರ್ನಾ ಅಕ್ಟರ್, ರಿತು ಮೋನಿ, ದಿಶಾ ಬಿಸ್ವಾಸ್, ಮಾರುಫಾ ಅಕ್ಟರ್, ಶಂಜಿದಾ ಅಕ್ಥರ್ ಮೇಘಲಾ, ರಬೇಯಾ ಖಾನ್, ಸುಲ್ತಾನಾ ಖಾತುನ್, ಸಲ್ಮಾ ಖಾತುನ್, ಫಾಹಿಮಾ ಖಾತುನ್.

ಸ್ಟ್ಯಾಂಡ್‌ಬೈ ಆಟಗಾರ್ತಿಯರು: ಫರ್ಗಾನಾ ಹೊಕ್ ಪಿಂಕಿ, ಲತಾ ಮೊಂಡೋಲ್, ಶರ್ಮಿನ್ ಅಕ್ಟರ್ ಸುಪ್ತಾ, ಫರಿಹಾ ಇಸ್ಲಾಂ ತ್ರಿಸ್ನಾ.

ಬಾಂಗ್ಲಾದೇಶ ವಿರುದ್ಧ ಭಾರತ ಮಹಿಳಾ ಏಕದಿನ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ, ಯಾಸ್ತಿಕಾ (ವಿಕೆಟ್ ಕೀಪರ್), ಹರ್ಲೀನ್, ದೇವಿಕಾ ವೈದ್ಯ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಸ್ನೇಹ್ ರಾಣಾ.

ಬಾಂಗ್ಲಾದೇಶ ವಿರುದ್ಧ ಭಾರತ ಮಹಿಳಾ ಟಿ20 ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ, ಯಾಸ್ತಿಕಾ (ವಿಕೆಟ್ ಕೀಪರ್), ಹರ್ಲೀನ್, ದೇವಿಕಾ ವೈದ್ಯ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ಸಬ್ಬಿನೇನಿ ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಮಿನ್ನು ಮಣಿ.

Story first published: Wednesday, July 5, 2023, 20:25 [IST]
Other articles published on Jul 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+