Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

INDw vs BANw: ದೀಪ್ತಿ, ಶಫಾಲಿ ಮ್ಯಾಜಿಕ್; ಬಾಂಗ್ಲಾ ಮಹಿಳೆಯರ ವಿರುದ್ಧ ಭಾರತ ವನಿತೆಯರಿಗೆ ರೋಚಕ ಗೆಲುವು

ಮಂಗಳವಾರ, ಜುಲೈ 11ರಂದು ಢಾಕಾದ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ 2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ರೋಚಕ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 95 ರನ್ ಗಳಿಸಿತು. ಈ 96 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಮಹಿಳಾ ತಂಡ 20 ಓವರ್‌ಗಳಲ್ಲಿ 87 ರನ್ ಗಳಿಸಿ ಆಲೌಟ್ ಆಯಿತು.

 India Womens Beat Bangladesh Womens

ಈ ಮೂಲಕ ಭಾರತೀಯ ವನಿತೆಯರು 8 ರನ್‌ಗಳ ರೋಚಕ ಗೆಲುವು ಕಂಡರು ಮತ್ತು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ಗೆದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡದ ಪರ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ 13 ರನ್, ಶಫಾಲಿ ವರ್ಮಾ 19 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ 4.2 ಓವರ್‌ಗಳಲ್ಲಿ 33 ರನ್‌ಗಳಾಗಿದ್ದಾಗ ಸ್ಮೃತಿ ಮಂಧಾನ ವಿಕೆಟ್ ಒಪ್ಪಿಸಿದರು. ನಂತರ, 33 ರನ್‌ಗಳಿಗೆ 3 ವಿಕೆಟ್ ಉರುಳಿದ್ದವು.

ಜೆಮಿಮಾ ರೋಡ್ರಿಗಸ್ 8 ರನ್, ನಾಯಕಿ ಹರ್ಮನ್‌ಪ್ರೀತ್ ಕೌರ್ 0, ಯಾಸ್ತಿಕಾ ಭಾಟಿಯಾ 11 ರನ್, ಹರ್ಲೀನ್ ಡಿಯೋಲ್ 6 ರನ್, ದೀಪ್ತಿ ಶರ್ಮಾ 10 ರನ್, ಅಮನ್‌ಜೋತ್ ಕೌರ್ 14 ರನ್, ಪೂಜಾ ವಸ್ತ್ರಾಕರ್ 7 ರನ್, ಮಿನ್ನು ಮಣಿ 5 ರನ್ ಗಳಿಸಲಷ್ಟೇ ಶಕ್ತರಾದರು.

ಬಾಂಗ್ಲಾದೇಶ ಮಹಿಳಾ ತಂಡದ ಪರ ಸುಲ್ತಾನಾ ಖಾತುನ್ 3 ವಿಕೆಟ್, ಫಾಹಿಮಾ ಖಾತುನ್ 2 ವಿಕೆಟ್ ಮತ್ತು ಮಾರುಫಾ ಅಕ್ಟರ್, ನಹಿದಾ ಅಕ್ಟರ್, ರಬೇಯಾ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ನಾಯಕಿ ನಿಗರ್ ಸುಲ್ತಾನಾ 38 ರನ್ ಬಾರಿಸಿದ್ದು ಬಿಟ್ಟರೆ, ಉಳಿದವರಾರು ಎರಡಂಕಿ ಮೊತ್ತ ದಾಟಲಿಲ್ಲ. ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋದ ಬಾಂಗ್ಲಾ ವನಿತೆಯರು, ಕೊನೆಯ 2 ಓವರ್‌ಗಳಲ್ಲಿ 11 ರನ್‌ಗಳು ಬೇಕಿದ್ದಾಗ ಗಳಿಸಿದ್ದು 1 ರನ್ ಮಾತ್ರ, ಉರುಳಿದ್ದು ಐದು ವಿಕೆಟ್‌ಗಳು.

ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದ ಭಾರತ ತಂಡದ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 12 ರನ್ ನೀಡಿ 3 ವಿಕೆಟ್, ಶಫಾಲಿ ವರ್ಮಾ 3 ಓವರ್‌ಗಳಲ್ಲಿ 15 ರನ್ ನೀಡಿ 3 ಪಡೆದು ಮಿಂಚಿದರು. ಮಿನ್ನು ಮಣಿ 4 ಓವರ್‌ಗಳಲ್ಲಿ 2 ರನ್ ನೀಡಿ 2 ಪಡೆದರೆ, ಬಾರೆಡ್ಡಿ ಅನುಷಾ ಒಂದು ವಿಕೆಟ್ ಪಡೆದರು.

ಬ್ಯಾಟಿಂಗ್‌ನಲ್ಲಿ 10 ರನ್ ಮತ್ತು ಬೌಲಿಂಗ್‌ನಲ್ಲಿ 3 ವಿಕೆಟ್ ಪಡೆದ ಆಲ್‌ರೌಂಡರ್ ದೀಪ್ತಿ ಶರ್ಮಾ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಭಾನುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು.

Story first published: Tuesday, July 11, 2023, 17:04 [IST]
Other articles published on Jul 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+