Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

INDW vs SAW: ದ‍ಕ್ಷಿಣ ಆಫ್ರಿಕಾ ಮಹಿಳಾ ಪ್ರವಾಸದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಮೇ 14 ಮಂಗಳವಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ದಕ್ಷಿಣ ಆಫ್ರಿಕಾ ಮಹಿಳಾ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ಜೂನ್ ಮಧ್ಯದಲ್ಲಿ ಪ್ರಾರಂಭವಾಗುವ ಎಲ್ಲಾ ಮಾದರಿಯ ದ್ವಿಪಕ್ಷೀಯ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಹೋರಾಡಲು ಸಜ್ಜಾಗಿದೆ. ಮೂರು ಏಕದಿನ, ಒಂದು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳಿಗೆ ಭಾರತ ಆತಿಥ್ಯ ವಹಿಸಲಿದೆ.

INDW vs SAW BCCI has announced the schedule of South Africa womens tour

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 16, 19 ಮತ್ತು 23 ರಂದು ಮೂರು ಏಕದಿನ ಪಂದ್ಯಗಳು ನಡೆಯುವ ಮೂಲಕ ಭಾರತದ ತವರಿನ ಸರಣಿಯು ಪ್ರಾರಂಭವಾಗುತ್ತದೆ. ಏಕದಿನ ಪಂದ್ಯಗಳು 2022-2025ರ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿದೆ.

ಏಕದಿನ ಸರಣಿ ಮುಗಿದ ನಂತರ ಜೂನ್ 28 ರಿಂದ ಜುಲೈ 1 ರವರೆಗೆ ನಾಲ್ಕು ದಿನಗಳ ಟೆಸ್ಟ್ ಅನ್ನು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಬಳಿಕ ಮೂರು ಟಿ20 ಪಂದ್ಯಗಳ ಸರಣಿ ಜುಲೈ 5, 7 ಮತ್ತು 9 ರಂದು ನಡೆಯಲಿದೆ.

ದಕ್ಷಿಣ ಆಫ್ರಿಕಾ ಮಹಿಳೆಯರ ತಂಡವು ಜೂನ್ 13 ರಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೋರ್ಡ್ ಅಧ್ಯಕ್ಷರ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ತಡವಾಗಿ, ಭಾರತೀಯ ಮಹಿಳಾ ತಂಡವು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಸಾಮಾನ್ಯವಾಗಿ ಪುರುಷರ ಟೆಸ್ಟ್ ಐದು ದಿನಗಳ ಆಟವಾಗಿದ್ದು, ಮಹಿಳೆಯರ ಟೆಸ್ಟ್‌ ನಾಲ್ಕು ದಿನಗಳ ಪಂದ್ಯವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು, ದಕ್ಷಿಣ ಆಫ್ರಿಕನ್ನರ ವಿರುದ್ಧ ಆಡುವುದು ಭಾರತೀಯ ಮಹಿಳಾ ತಂಡಕ್ಕೆ ಲಾಭವಾಗಲಿದೆ.

INDW vs SAW BCCI has announced the schedule of South Africa womens tour

ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ

ಮಹಿಳೆಯರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಬಾಂಗ್ಲಾದೇಶ ಅತೀಥೆಯ ವಹಿಸಿದ್ದು, ಢಾಕಾ ಮತ್ತು ಸಿಲ್ಹೆಟ್‌ನಲ್ಲಿ 19 ದಿನಗಳಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಭಾರತ ಮಹಿಳಾ ಕ್ರಿಕೆಟ್ ತಂಡ ಅಕ್ಟೋಬರ್ 4 ರಿಂದ ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ನ್ಯೂಜಿಲೆಂಡ್‌ನೊಂದಿಗೆ ಆಡಲಿದೆ. ಸಾಂಪ್ರಾದಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಕ್ಟೋಬರ್ 6 ರಂದು ಸಿಲ್ಹೆಟ್ ನಲ್ಲಿ ಆಡಲಿದೆ.

ಅಕ್ಟೋಬರ್ 9 ರಂದು ಭಾರತ ಕ್ವಾಲಿಫೈಯರ್ ಮೊದಲ ಪಂದ್ಯವಾಡಲಿದೆ. ಅಕ್ಟೋಬರ್ 13 ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಪಂದ್ಯವಾಡಲಿದೆ. ಈ ನಾಲ್ಕು ಪಂದ್ಯಗಳು ಬಾಂಗ್ಲಾದೇಶದ ಸಿಲ್ಹೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.

Story first published: Tuesday, May 14, 2024, 21:06 [IST]
Other articles published on May 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+