ಇಂಗ್ಲೆಂಡ್ vs ಐರ್ಲೆಂಡ್, 1ನೇ ಏಕದಿನ ಪಂದ್ಯ: ಇಂಗ್ಲೆಂಡ್‌ಗೆ ಸುಲಭ ಜಯ

ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸುಲಭ ಜಯ ಗಳಿಸಿದೆ. ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲಿ ಮಾರಕ ಬೌಲಿಂಗ್‌ನಿಂದ ಇಂಗ್ಲೆಂಡ್ 6 ವಿಕೆಟ್ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 1-0ಯ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡ 172 ರನ್ ಗಳಿಸಿ ಆಲ್‌ಔಟ್ ಆಗಿತ್ತು. ಕರ್ಟಿಸ್ ಕ್ಯಾಂಫರ್(59ರನ್) ಹಾಗೂ ಆಂಡಿ ಮೆಕ್‌ಬ್ರೈನ್(40 ರನ್) ಅಂತಿಮ ಹಂತದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿ ರನ್ ಹೆಚ್ಚಿಸಲು ಕಾರಣರಾದರು.
ಟಾಸ್ ಗೆದ್ದ ಇಂಗ್ಲೆಂಡ್ ಐರ್ಲೆಂಡನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್‌ಗೆ ಇಳಿದ ಐರ್ಲೆಂಡ್ ಆರಂಭದಲ್ಲೇ ಭಾರೀ ಕುಸಿತವನ್ನು ಕಂಡಿತು. ಒಂದು ಹಂತದಲ್ಲಿ 28 ರನ್‌ಗೆ 5 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಐರ್ಲೆಂಡ್. ಬಳಿಕ ಕೆವಿನ್ ಒಬ್ರಿಯನ್ ಕ್ಯಾಂಫರ್ ಜೊತೆ ಸೇರಿ ದಿಢೀರ್ ಕುಸಿತದಿಂದ ಪಾರು ಮಾಡಿದರು.
Live ಸ್ಕೋರ್‌ಪಟ್ಟಿ ಈ ಕೆಳಗಿನಂತಿದೆ:
ಇಂಗ್ಲೆಂಡ್ ಪರವಾಗಿ ಡೇವಿಡ್ ವಿಲ್ಲೀ 5 ವಿಕೆಟ್ ಪಡೆದು ಮಿಂಚಿದ್ದಾರೆ.
ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಜೇಮ್ಸ್ ವಿನ್ಸ್, ಇಯೊನ್ ಮೋರ್ಗಾನ್ (ನಾಯಕ), ಟಾಮ್ ಬ್ಯಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಟಾಮ್ ಕುರ್ರನ್, ಸಾಕಿಬ್ ಮಹಮೂದ್
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಗರೆಥ್ ಡೆಲಾನಿ, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಕೆವಿನ್ ಒ'ಬ್ರಿಯಾನ್, ಲಾರ್ಕಾನ್ ಟಕರ್ (ವಿಕೆಟ್ ಕೀಪರ್), ಸಿಮಿ ಸಿಂಗ್, ಕರ್ಟಿಸ್ ಕ್ಯಾಂಪರ್, ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications