ಟೀಮ್ ಇಂಡಿಯಾ ಅಭಿಮಾನಿಗಳಿಗೆ ಸದ್ಯ ಒಳ್ಳೆಯ ಸುದ್ದಿ. ಗಾಯಕ್ಕೆ ತುತ್ತಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಅವರನ್ನು ಸದ್ಯ ಸಿಡ್ನಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇವರ ಗಾಯದ ಚೇತರಿಕೆಯ ಹಂತದಲ್ಲಿದ್ದು ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ ಅಯ್ಯರ್ ಗಾಯಕ್ಕೆ ತುತ್ತಾಗಿದ್ರು. ಇವರು ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ನೀಡಿದ ಕ್ಯಾಚ್ ಪಡೆಯಲು ಹೋಗಿ ಗಾಯ ಮಾಡಿಕೊಂಡಿಕೊಂಡಿದ್ದರು. ಇವರು ಕ್ಯಾಚ್ ಹಿಡಿಯುತ್ತಲೇ ಮೈದಾನದಲ್ಲೇ ಬಿದ್ದರು. ಇವರನ್ನು ಕರೆದುಕೊಂಡು ಹೋಗಲು ಸಹಾಯಕ ಸಿಬ್ಬಂದಿ ಮೈದಾನಕ್ಕೆ ಆಗಮಿಸಿದರು. ಕೂಡಲೇ ಅವರನ್ನು ಮೈದಾನದಿಂದ ಹೊರಗಡೆ ತೆಗೆದುಕೊಂಡು ಹೋಗಲಾಗಿದ್ದು, ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೇ ವೇಳೆ ಕೆಲ ಸಮಯ ಶ್ರೇಯಸ್ ಅಯ್ಯರ್ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆದರು. ಇವರನ್ನು ಸ್ಕ್ಯಾನ್‌ಗೆ ಒಳಪಡಿಸಿದಾಗ ಅವರ ದೇಹದಲ್ಲಿ ಆಂತರಿಕ ರಕ್ತ ಸ್ರಾವ ಆದ ಬಗ್ಗೆ ತಿಳಿದು ಬಂದಿತು. ಇದಾದ ಬಳಿಕ ಅವರು ಸಣ್ಣ ಶಸ್ತ್ರಚಿಕಿತ್ಸೆಗೂ ಒಳಗಾದರು. ಅದು ರಕ್ತಸ್ರಾವವನ್ನು ನಿಲ್ಲಿಸಿತು. ಇದೇ ವೇಳೆ ಅವರಿಗೆ ಸೂಕ್ತ ವೈದ್ಯಕೀಯ ನೆರವನ್ನು ಸಹ ನೀಡಲಾಯಿತು. ಇನ್ನು ಈ ಬಗ್ಗೆ ಬಿಸಿಸಿಐ ಹೆಲ್ತ್ ಅಪ್‌ಡೇಟ್ ನೀಡುತ್ತಲೇ ಇತ್ತು. ಇತ್ತೀಚಿಗೆ ಬಿಡುಗಡೆ ಮಾಡಿದ ಹೆಲ್ತ್ ಕೇರ್‌ನಲ್ಲಿ ಅವರು ಗಾಯದಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಸಿಡ್ನಿಯ ವೈದ್ಯರೊಂದಿಗೆ ಬಿಸಿಸಿಐ ವೈದ್ಯರ ತಂಡ ಸಮಾಲೋಚನೆ ನಡೆಸುತ್ತಲೇ ಇದೆ. ಇನ್ನು ಕೆಲವು ದಿನಗಳ ಕಾಲ ಶ್ರೇಯಸ್ ಅಯ್ಯರ್ ಸಿಡ್ನಿಯಲ್ಲಿ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಅವರು ಸಂಪೂರ್ಣ ಫಿಟ್ ಆದ ಬಳಿಕವೇ ಅವರನ್ನು ಭಾರತಕ್ಕೆ ಕರೆತರಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಶ್ರೇಯಸ್ ಅಯ್ಯರ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಅಲ್ಲದೆ ಭಾರತದ ಪರ ಗರಿಷ್ಠ ರನ್ ಸಾಧನೆ ಮಾಡಿದ್ದರು. ಇವರು ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಫಲ ಇವರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಕ್ಕಿದೆ. ಇನ್ನು ಶ್ರೇಯಸ್ ಅಯ್ಯರ್ ಭಾರತದ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇವರು 2017ರಲ್ಲಿ ಭಾರತದ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 73 ಏಕದಿನ ಪಂದ್ಯಗಳಲ್ಲಿ ಐದು ಶತಕಗಳು ಮತ್ತು 23 ಅರ್ಧಶತಕ ಸೇರಿದಂತೆ 2917 ರನ್ ಗಳಿಸಿದ್ದಾರೆ.