Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಲ್‌ ರೌಂಡರ್ ಜೇಮ್ಸ್ ನೀಶಮ್ ನ್ಯೂಜಿಲ್ಯಾಂಡ್ ಟಿ20 ತಂಡದಿಂದ ಔಟ್!

Injured James Neesham ruled out of Kiwis T20 squad

ಈಡನ್ ಪಾರ್ಕ್, ಜನವರಿ 8: ನ್ಯೂಜಿಲ್ಯಾಂಡ್ ಆಲ್ ರೌಂಡರ್ ಜೇಮ್ಸ್ ನೀಶಮ್ ಗಾಯಕ್ಕೀಡಾಗಿದ್ದು, ಮುಂಬರಲಿರುವ ಶ್ರೀಲಂಕಾ ವಿರುದ್ಧದ ಟಿ20 ತಂಡದಿಂದ ಹೊರಬಿದ್ದಿದ್ದಾರೆ. ನೀಶಮ್, ಮಂಡಿರಜ್ಜು (ಹ್ಯಾಮ್‌ಸ್ಟ್ರಿಂಗ್) ಗಾಯದಿಂದ ಬಳಲುತ್ತಿರುವುದು ಇದಕ್ಕೆ ಕಾರಣ.

ಮಂಗಳವಾರ (ಜನವರಿ 8) ಮುಕ್ತಾಯಗೊಂಡ ಪ್ರವಾಸಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿರುವಾಗಲೇ ನೀಶಮ್ ಗಾಯಕ್ಕೀಡಾಗಿದ್ದರು. ಸರಣಿಯಲ್ಲಿ ಆತಿಥೇಯ ಕಿವೀಸ್ 3-0ಯಿಂದ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಗೊಳಿಸಿದೆ. ಜನವರಿ 11ರಂದು ಶ್ರೀಲಂಕಾ-ಕಿವೀಸ್ ನಡುವಿನ ಒಂದು ಟಿ20 ಪಂದ್ಯ ನಡೆಯಲಿದೆ.

ಈ ಬಗ್ಗೆ ನ್ಯೂಜಿಲ್ಯಾಂಡ್ ರಾಷ್ಟ್ರೀಯ ತಂಡದ ಫಿಸಿಯೋ ವಿಜಯ್ ವಲ್ಲಭ ಮಾಹಿತಿ ನೀಡುತ್ತ, 'ಅಂತಿಮ ಏಕದಿನ ಪಂದ್ಯ ಆಡುವಾಗಲೇ ಎಡಗೈ ಬ್ಯಾಟ್ಸ್ಮನ್ ನೀಶಮ್ ಬಲತೊಡೆ ನೋವನ್ನು ಅನುಭವಿಸಿದ್ದರು. ಹಾಗಾಗಿ ಅವರು ವೈದ್ಯಕೀಯ ಉಪಚಾರದ ಕಾರಣಕ್ಕೆ ಮೈದಾನದಿಂದ ಹೊರ ಬರಬೇಕಾಗಿ ಬಂದಿತ್ತು. ಅವರಿಗೀಗ ಕೆಲ ದಿನಗಳ ಉಪಚಾರದ ಅಗತ್ಯವಿದೆ' ಎಂದರು.

Story first published: Tuesday, January 8, 2019, 20:51 [IST]
Other articles published on Jan 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+