ಗಾಯಕ್ಕೀಡಾಗಿರುವ ಜೋಫ್ರಾ ಆರ್ಚರ್ ಆ್ಯಷಸ್, ಟಿ20 ವಿಶ್ವಕಪ್‌ನಿಂದ ಹೊರಕ್ಕೆ

ಲಂಡನ್: ಗಾಯಕ್ಕೀಡಾಗಿರುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರು ಆ್ಯಷಸ್ ಮತ್ತು ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಆರ್ಚರ್ ಗಾಯ ಗುಣಮುಣವಾಗಲು ಇನ್ನೂ ಕಾಲಾವಕಾಶ ಬೇಕಾಗಿರುವುದರಿಂದ ಈ ವರ್ಷ ಕೊನೆಯವರೆಗೂ ಆರ್ಚರ್ ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗೆಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಮಾಹಿತಿ ನೀಡಿದೆ.
ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ಭಾರತದ ಪ್ರವಾಸ ವೇಳೆ ಜೋಫ್ರಾ ಆರ್ಚರ್ ಕೈ ಗಾಯಕ್ಕೀಡಾಗಿರುವುದು ಕಂಡು ಬಂದಿತ್ತು. ಆ ಪ್ರವಾಸ ಸರಣಿಗಳ ವೇಳೆ ಗಾಯವಿದ್ದ ಕಾರಣ ಆರ್ಚರ್ ಕೆಲ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದನೂ ಆರ್ಚರ್ ಹೊರ ಬಿದ್ದಿದ್ದರು.
ಗಾಯದಿಂದಾಗಿ ಒಂದಿಷ್ಟು ಕಾಲ ಕ್ರಿಕೆಟ್‌ನಿಂದ ದೂರವಿದ್ದ ಆರ್ಚರ್, ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಸೆಕ್ಸ್ ಪರ ಆಡಿದ್ದರು. ಆದರೆ ಟೂರ್ನಿ ಮಧ್ಯೆ ಆರ್ಚರ್‌ಗೆ ಮತ್ತೆ ಗಾಯದ ಸಮಸ್ಯೆ ಕಾಡಿದೆ. ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರಿಂದ ಇನ್ನುಳಿದ ಯಾವುದೇ ಟೂರ್ನಿಗಳಲ್ಲಿ ಆರ್ಚರ್ ಪಾಲ್ಗೊಳ್ಳದಂತೆ ಆಗಿದೆ.
"ಕಳೆದ ವಾರ ಮೊಣಕೈ ಗಾಯಕ್ಕೀಡಾಗಿರುವ ಆರ್ಚರ್ ಮುಂದಿನ ಸ್ಕ್ಯಾನಿಂಗ್‌ಗಾಗಿ ತೆರಳಿದ್ದಾರೆ. ಅವರಿಗೆ ಮೊಣಕೈ ಮುರಿತದ ಸಮಸ್ಯೆ ಮತ್ತೆ ಎದುರಾಗಿದೆ. ಹೀಗಾಗಿ ಆರ್ಚರ್ ಈ ವರ್ಷ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಭಾರತ ವಿರುದ್ಧದ ಟೆಸ್ಟ್ ಸರಣಿ, ಐಸಿಸಿ ಪುರುಷರ ಟಿ20 ವಿಶ್ವಕಪ್, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಷಸ್ ಸರಣಿಯಲ್ಲಿ ಆರ್ಚರ್ ಆಡುತ್ತಿಲ್ಲ," ಎಂದು ಇಸಿಬಿ ಹೇಳಿಕೆಯ ಮೂಲಕ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications