For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆ

Injured Ravindra Jadeja ruled out of Indias fourth Test in Australia

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಹೊರ ಬಿದ್ದಿರುವ ಬೆನ್ನಲ್ಲೇ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಹೊರ ಬಿದ್ದಿದ್ದಾರೆ. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್‌ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಜಡೇಜಾ ಕೊನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ.

ಎಡಗೈಯ ಹೆಬ್ಬೆರಳಿಗೆ ರವೀಂದ್ರ ಜಡೇಜಾ ಗಾಯ ಮಾಡಿಕೊಂಡಿದ್ದಾರೆ. ಡ್ರಾಗೊಂಡಿರುವ ಮೂರನೇ ಟೆಸ್ಟ್‌ನಲ್ಲಿ ಆಡುತ್ತಿದ್ದಾಗ ಜಡೇಜಾ ಅವರ ಬೆರಳು ಡಿಸ್‌ಲೊಕೇಟೆ ಆಗಿತ್ತು ಎನ್ನಲಾಗಿದೆ. ಒಟ್ಟಾರೆ ಈಗಾಗಲೇ ಉದ್ದವಾಗಿರುವ ಟೀಮ್ ಇಂಡಿಯಾದ ಗಾಯಾಳುಗಳ ಪಟ್ಟಿ ಮತ್ತೂ ಬೆಳೆಯತೊಡಗಿದೆ.

'ಆಟದ ವೇಳೆ ಗಾಯಗೊಂಡಿದ್ದ ಜಡೇಜಾ ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಯಿತು. ಬಂದ ಫಲಿತಾಂಶ ಜಡೇಜಾ ಬೆರಳು ಡಿಸ್‌ಲೊಕೇಟ್ ಆಗಿದ್ದನ್ನು ತೋರಿಸುತ್ತಿತ್ತು,' ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೇಳಿಕೆ ನೀಡಿದೆ.

ಮೂರನೇ ಪಂದ್ಯದಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜಡೇಜಾ ಗಾಯದ ಮಧ್ಯೆಯೂ ಬ್ಯಾಟಿಂಗ್‌ಗೆ ಸಜ್ಜಾಗಿದ್ದರಾದರೂ ಐದನೇ ದಿನದಾಟದ ವೇಳೆ ಭಾರತ 5 ವಿಕೆಟ್ ಕಳೆದು ಆಡುತ್ತಿದ್ದರಿಂದ ಪಂದ್ಯ ಡ್ರಾಗೊಂಡಿರು. ನಾಲ್ಕು ಪಂದ್ಯಗಳ ಸರಣಿಯೀಗ 1-1ರಿಂದ ಸಮಬಲಗೊಂಡಿದೆ. 4ನೇ ಪಂದ್ಯ ಜನವರಿ 15ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

Story first published: Tuesday, January 12, 2021, 9:52 [IST]
Other articles published on Jan 12, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+