ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಕ್ಕೆ ತುತ್ತಾಗಿದ್ದ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಈಗ ಗುಣಮುಖರಾಗುತ್ತಿದ್ದಾರೆ. ಇವರು ಹರಾಜು ಅಂಗಳಕ್ಕೆ ಇಳಿಯುವ ಸಾಧ್ಯತೆ ಇದೆ. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ತಂಡದ ನಿಯೋಗವನ್ನು ಮುನ್ನಡೆಸಲು ಅಬುಧಾಬಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ. ಇನ್ನು ಫ್ರಾಂಚೈಸಿಗಳು ತಮ್ಮ ಹರಾಜು ತಂಡವನ್ನು ಬಿಸಿಸಿಐಗೆ ಕಳುಹಿಸಲು ಡಿಸೆಂಬರ್ 10 ಕೊನೆಯ ದಿನವಾಗಿತ್ತು.
ಬಿಸಿಸಿಐಗೆ ಸಲ್ಲಿಸಲಾದ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರ ಹೆಸರು ಇದೆ ಎಂದು ಮಂಡಳಿಯ ಮೂಲಗಳ ತಿಳಿಸಿದೆ. ಬಿಸಿಸಿಐ ಮಾರ್ಗಸೂಚಿಗಳ ಪ್ರಕಾರ, ಫ್ರಾಂಚೈಸಿಗಳು ಲೀಸ್ಟ್ ನೀಡುವ ವೇಳೆ 8 ಸದಸ್ಯರು ಹರಾಜು ಅಂಗಳದಲ್ಲಿ ಹಾಗೂ 6 ಸದಸ್ಯರ ತಂಡ ಹೊರಗಡೆಗೆ ಅನುಮತಿ ನೀಡಲಾಗಿದೆ. ಕೊನೆಯ ಕ್ಷಣದಲ್ಲಿ ಬದಲಾವಣೆಗಳು ಇಲ್ಲದೇ ಇದ್ದರೆ, ಅಬುಧಾಬಿಯಲ್ಲಿ ನಡೆಯಲಿರುವ ಹರಾಜಿನಲ್ಲಿ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಕೆಆರ್ ತಂಡ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಟ್ಟ ಇವರು ಮೆಗಾ ಹರಾಜಿನ ಅಂಗಳಕ್ಕೆ ಎಂಟ್ರಿ ನೀಡಿದರು. ಇವರಿಗೆ ಪಂಜಾಬ್ ದಾಖಲೆಯ ಮೊತ್ತ ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಅಲ್ಲದೆ ಇವರ ಮುಂದಾಳತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡ ಅಮೋಘ ಪ್ರದರ್ಶನ ನೀಡಿತ್ತು. ಅಲ್ಲದೆ ಇವರ ಮುಂದಾಳತ್ವದಲ್ಲಿ ಪಂಜಾಬ್ ಕಿಂಗ್ಸ್ ದಶಕಗಳ ಬಳಿಕ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತು.
ಶ್ರೇಯಸ್ ಅಯ್ಯರ್ ಹರಾಜು ಅಂಗಳಕ್ಕೆ ಎಂಟ್ರಿ ನೀಡಿದರೆ, ಹರಾಜು ಅಂಗಳಕ್ಕೆ ಎಂಟ್ರಿ ಪಡೆದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರಿಗಿಂತ ಮೊದಲು ಗೌತಮ್ ಗಂಭೀರ್ ಮತ್ತು ರಿಷಭ್ ಪಂತ್ ಈ ಹಿಂದೆ ಹರಾಜಿನಲ್ಲಿ ನಾಯಕರಾಗಿ ಭಾಗವಹಿಸಿದ್ದರು.

ಪಂಜಾಬ್ ಕೋಚ್ ರಿಕಿ ಪಾಂಟಿಂಗ್ ಅಬುಧಾಬಿಗೆ ಪ್ರಯಾಣಿಸುವ ಸಾಧ್ಯತೆ ಕಡಿಮೆ. ಪಾಂಟಿಂಗ್ ಪ್ರಸ್ತುತ ಆಸ್ಟ್ರೇಲಿಯಾದ ಚಾನೆಲ್ ಸೆವೆನ್ ನೆಟ್‌ವರ್ಕ್‌ಗೆ ನಿರೂಪಕರಾಗಿದ್ದರಿಂದ ಇವರು ಹರಾಜಿನಲ್ಲಿ ಭಾಗವಹಿಸುವುದು ತೀರಾ ಕಡಿಮೆ. ಆಶಸ್ ಸರಣಿಯ ಮೂರನೇ ಪಂದ್ಯ ಡಿಸೆಂಬರ್ 17 ರಂದು ಆಡಿಲೇಡ್‌ನಲ್ಲಿ ನಡೆಯಲಿದೆ. ಇನ್ನು ಪಂಜಾಬ್ ಬಳಿ 11.5 ಕೋಟಿ ರೂ. ಇದ್ದು ನಾಲ್ಕು ಆಟಗಾರರನ್ನು ಖರೀದಿಸಬಹುದಾಗಿದೆ. ಇದರಲ್ಲಿ ಇಬ್ಬರು ವಿದೇಶಿ ಆಟಗಾರರು ಸೇರಿದಂತೆ ನಾಲ್ವರು ಆಟಗಾರರನ್ನು ಖರೀದಿಸಬಹುದಾಗಿದೆ. ಇನ್ನು ಹರಾಜಿನಲ್ಲಿ ಲ್ಯಾಂಗರ್ ಮತ್ತು ಟಾಮ್ ಮೂಡಿ ಸಹ ಹಾಜರಿರುತ್ತಾರೆ.
ಈ ಬಾರಿಯ ಹರಾಜಿನಲ್ಲಿ ಒಟ್ಟು 1355 ಆಟಗಾರರು ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದರು. ಬಿಸಿಸಿಐ ಈ ಆಟಗಾರರ ಹೆಸರುಗಳನ್ನು ಶಾರ್ಟ್ ಲೀಸ್ಟ್ ಮಾಡಿ 350 ಇಳಿಸಿದೆ. ಹರಾಜಿನ ಅಂಗಳದಲ್ಲಿ ಈ ಆಟಗಾರರಿಗೆ ಮಾಲೀಕರು ಹಣವನ್ನು ಹೂಡಲಿದ್ದಾರೆ.