Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾದಲ್ಲಿ ಹೆಚ್ಚುತ್ತಿದೆ ಗಾಯಾಳುಗಳ ಸಂಖ್ಯೆ: ಬುಮ್ರಾ ನಾಲ್ಕನೇ ಟೆಸ್ಟ್ ಆಡುವುದು ಅನಿವಾರ್ಯ

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಮಾಸ್ಟರ್‌ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ ತಂಡಕ್ಕೆ ಗಾಯದ ಸಮಸ್ಯೆ ಬಹುವಾಗಿ ಕಾಡಿದೆ. ಈಗಾಗಲೇ ಟೀಮ್ ಇಂಡಿಯಾದ ಹಲವು ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ತಂಡವನ್ನು ಕಟ್ಟುವುದೇ ತಂಡಕ್ಕೆ ದೊಡ್ಡ ತಲೆ ನೋವಾಗಿದೆ. ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ, ಈ ಟೆಸ್ಟ್‌ನಿಂದ ವಿಶ್ರಾಂತಿ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ ಅವರಿಗೆ ವಿಶ್ರಾಂತಿ ಸಿಗುವುದು ಈಗ ಕಷ್ಟ ಎಂದು ಕಾಣುತ್ತಿದೆ.

ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಜುಲೈ 23 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಸದ್ಯ ಅಡಿರುವ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕೇವಲ 1 ಪಂದ್ಯದಲ್ಲಿ ಜಯ ದಾಖಲಿಸಿದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ನಾಲ್ಕನೇ ಟೆಸ್ಟ್‌ ಟೀಮ್ ಇಂಡಿಯಾಗೆ ಡ್ರಾ ಸಾಧಿಸಲು ಬೆಸ್ಟ್‌ ಚಾನ್ಸ್ ಆಗಿದೆ. ಲಾರ್ಡ್ಸ್‌ನಲ್ಲಿ ಕಂಡಿರುವ 22 ರನ್‌ಗಳ ಸೋಲನ್ನು ಮೆಟ್ಟಿನಿಂತಿ ಟೀಮ್ ಇಂಡಿಯಾ ಮತ್ತೊಂದು ಗೆಲುವಿನ ಮಹಲ್‌ ಕಟ್ಟಲು ಬೇಕಾದ ಪ್ಲ್ಯಾನ್‌ಗಳನ್ನು ಮಾಡಿಕೊಳ್ಳುತ್ತಿದೆ.

Injuries Mount for Team India Bumrah s Participation Crucial for Fourth Test

ಇಂಗ್ಲೆಂಡ್‌ ಪ್ರವಾಸವನ್ನು ಬೆಳೆಸುವ ಮುನ್ನ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ, ತಾನು ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಆಡುವುದಾಗಿ ತಿಳಿಸಿದ್ದರು. ಹೀಗಾಗಿ ಇವರು ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್‌ ಹಾಗೂ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಆಡಿದ್ದರು. ಇವರು ನಾಲ್ಕನೇ ಟೆಸ್ಟ್‌ನಿಂದ ವಿಶ್ರಾಂತಿ ಬಯಸಿದ್ದರು. ಆದರೆ ತಂಡದ ಚಿತ್ರಣವನ್ನು ನೋಡಿದರೆ ಇವರಿಗೆ ವಿಶ್ರಾಂತಿ ಲಭಿಸುವುದು ಕಷ್ಟವಾಗಿದೆ. ಟೀಮ್ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಲೇ ಇದೆ.

ಬುಮ್ರಾ ಆಡುವುದು ಅನಿವಾರ್ಯ

ಸರಣಿಯಲ್ಲಿ ಸಮಬಲ ಸಾಧಿಸಲು ಈ ಪಂದ್ಯ ಮುಖ್ಯವಾಗಿದ್ದರಿಂದ ಬುಮ್ರಾ ಅವರಿಗೆ ನಾಲ್ಕನೇ ಟೆಸ್ಟ್‌ ಪಂದ್ಯದಿಂದ ವಿಶ್ರಾಂತಿ ನೀಡುವುದು ಕಷ್ಟವಾಗಿದೆ. ಅಲ್ಲದೆ ತಂಡದಲ್ಲಿರುವ ಅರ್ಷದೀಪ್‌ ಸಿಂಗ್, ಆಕಾಶ್‌ ದೀಪ್‌ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಯಾರ್ಕರ್‌ ಸ್ಪೇಷಲಿಸ್ಟ್‌ ನಾಲ್ಕನೇ ಟೆಸ್ಟ್‌ ಆಡುವುದು ಅನಿವಾರ್ಯವಾಗಿದೆ. ಅಂದಾಗ ಮಾತ್ರ ಟೀಮ್ ಇಂಡಿಯಾಆ ಗೆಲುವಿನ ಕನಸು ಕಾಣಬಹುದಾಗಿದೆ.

Injuries Mount for Team India Bumrah s Participation Crucial for Fourth Test

ಮೂರನೇ ಹಾಗೂ ನಾಲ್ಕನೇ ಟೆಸ್ಟ್‌ ನಡುವಣ 8 ದಿನಗಳ ವ್ಯತ್ಯಾಸ ಕಂಡು ಬಂದಿತ್ತು. ಆದರೆ ನಾಲ್ಕನೇ ಹಾಗೂ ಐದನೇ ಟೆಸ್ಟ್‌ ನಡುವಣ ಹೆಚ್ಚಿನ ದಿನದ ವ್ಯತ್ಯಾಸವಿಲ್ಲ. ಹೀಗಾಗಿ ಬುಮ್ರಾ ನಾಲ್ಕನೇ ಟೆಸ್ಟ್‌ ಆಡುವುದು ಅನಿವಾರ್ಯವಾಗಿದೆ. ಇನ್ನು ಅವರು ಬಯಸಿದಲ್ಲಿ ಇವರಿಗೆ ಐದನೇ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆಯಬಹುದು. ಇನ್ನು ಗಾಯಗೊಂಡಿರುವ ಆಟಗಾರರ ಸ್ಥಾನವನ್ನು ತುಂಬಲು ಟೀಮ್ ಇಂಡಿಯಾ ಯಾವೆಲ್ಲಾ ಪ್ಲ್ಯಾನ್ ಮಾಡುತ್ತದೆ. ಇನ್ನು ಬೌಲಿಂಗ್‌ ವಿಭಾಗವನ್ನು ಬಲಿಷ್ಠವಾಗಿಸಲು ಟೀಮ್ ಇಂಡಿಯಾ ಯಾವ ವೇಗದ ಬೌಲರ್‌ಗೆ ಮಣೆ ಹಾಕುತ್ತದೆ ಕಾದು ನೋಡಬೇಕಿದೆ.

Story first published: Monday, July 21, 2025, 17:43 [IST]
Other articles published on Jul 21, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+