Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG IPL 2025: ಲಕ್ನೋ ತಂಡಕ್ಕೆ ಗುಡ್‌ ನ್ಯೂಸ್‌: ಕಣಕ್ಕೆ ಸಿದ್ದವಾಗಿರುವ ವೇಗಿ

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗುಡ್‌ ನ್ಯೂಸ್.. ಗಾಯಕ್ಕೆ ತುತ್ತಾಗಿದ್ದ ವೇಗಿ ಮಯಾಂಕ್‌ ಯಾದವ್ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿದ್ದು, ಮಂಗಳವಾರದ ವೇಳೆಗೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಇವರು ತಮ್ಮ ಮೊದಲ ಪಂದ್ಯವನ್ನು ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಏಪ್ರಿಲ್ 19 ರಂದು ಆಡುವ ಸಾಧ್ಯತೆ ಇದೆ.

ಮಯಾಂಕ್‌ ಯಾದವ್ ಫಿಟ್ ಆಗಿದ್ದು, ಪಂದ್ಯವನ್ನು ಆಡಲು ರೆಡಿಯಾಗಿದ್ದಾರೆ ಎಂದು ಎನ್‌ಸಿಎ ಮೂಲಗಳು ತಿಳಿಸಿವೆ. "ಈಗ ಅವರು ಸಂಪೂರ್ಣ ಫಿಟ್ ಆಗಿದ್ದು ಪಂದ್ಯ ಆಡಲಿದ್ದಾರೆ" ಎಂದು ಎನ್‌ಸಿಎ ಮೂಲಗಳು ಖಚಿತ ಪಡಿಸಿವೆ. ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಸ್ಥಿರ ಪ್ರದರ್ಶನವನ್ನು ನೀಡುತ್ತಿದೆ. ಈ ವೇಳೆ ಆಡಿದ 6 ಪಂದ್ಯಗಳಲ್ಲಿ 4 ಜಯ, 2 ಸೋಲು ಕಂಡಿರುವ ಲಕ್ನೋ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ವೇಗಿ ಮಯಾಂಕ್‌ ಯಾದವ್‌ ತಂಡಕ್ಕೆ ವಾಪಸ್‌ ಆದರೆ, ಇನ್ನಷ್ಟು ಬಲವಾಗಲಿದೆ.

Injury-Free Mayank Yadav Ready to Boost Lucknow Super Giants Performance

ಮಯಾಂಕ್‌ ಯಾದವ್‌ ಇನ್ನು ಸಂಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿಲ್ಲವೇ ಎಂದು ಎಲ್‌ಎಸ್‌ಜಿ ಎನ್‌ಸಿಎ ನಲ್ಲಿ ಕೇಳಿತ್ತು. ಅಲ್ಲದೆ ಫಿಟ್ ಇಲ್ಲದೇ ಇದ್ದಲ್ಲಿ ಘೋಷಣೆ ಮಾಡುವಂತೆ ತಿಳಿಸಿತ್ತು. ಇವರು ಅಲಭ್ಯರಾದಲ್ಲಿ ಬೇರೆ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳುವ ಯೋಜನೆ ಅವರದ್ದಾಗಿತ್ತು. ಆಗ ಎಲ್‌ಎಸ್‌ಜಿ ಅನ್‌ಸೋಲ್ಡ್‌ ಬಕೆಟ್‌ನಿಂದ ವೇಗದ ಬೌಲರ್‌ ಒಬ್ಬರನ್ನು ಹುಡುಕಿ ತಂಡದಲ್ಲಿ ಮಣೆ ಹಾಕುವ ಯೋಜನೆ ಹಾಕಿಕೊಂಡಿತ್ತು. ಆದರೆ ಎನ್‌ಸಿಎ ಮೂಲಗಳಿಂದ ಬರುತ್ತಿರುವ ಸುದ್ದಿ ನಿಜಕ್ಕೂ ಎಲ್‌ಎಸ್‌ಜಿ ಮ್ಯಾನೇಜ್ಮೆಂಟ್‌ಗೆ ಸಮಾಧಾನ ತರಿಸಿದೆ.

ಲಕ್ನೋ ತಂಡದಲ್ಲಿರುವ ವೇಗಿಗಳಿಗೆ ಗಾಯ ಬಹುವಾಗಿ ಕಾಡುತ್ತಿದೆ. ಈ ವೇಳೆ ಮಯಾಂಕ್‌ ಯಾದವ್ ಅವರು ಚೇತರಿಸಿಕೊಂಡು ತಂಡ ಸೇರುತ್ತಿರುವ ಸುದ್ದಿ ನಿಜಕ್ಕೂ ಅಭಿಮಾನಿಗಳಿಗೆ ಖುಷಿ ನೀಡಿದೆ.

ಮಯಾಂಕ್‌ ಸಾಧನೆ

ಈಗಾಗಲೇ ಮಯಾಂಕ್‌ ಯಾದವ್ ತಮ್ಮ ಬಿಗುವಿನ ದಾಳಿಯ ಮೂಲಕ ಹೆಸರುವಾಸಿಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಇವರು ಆಡಿದ 4 ಪಂದ್ಯಗಳಲ್ಲಿ 7 ವಿಕೆಟ್‌ ಪಡೆದು ಗಮನ ಸೆಳೆದಿದ್ದುರು. ಇವರ ಈ ಪ್ರದರ್ಶನದ ಫಲವಾಗಿಯೇ ಇವರು ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದರು. ಇವರ ಸಾಧನೆಯನ್ನು ಗುರುತಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಇವರನ್ನು ಉಳಿಸಿಕೊಂಡಿತ್ತು. ಈಗ ಇವರು ಫಿಟ್ ಆಗಿ ತಂಡಕ್ಕೆ ಮರಳುವ ಸುದ್ದಿ ನಿಜಕ್ಕೂ ಖುಷಿ ತಂದಿದೆ.

Story first published: Monday, April 14, 2025, 14:06 [IST]
Other articles published on Apr 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+