Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೆಮೀಸ್‌ಗೂ ಮುನ್ನ ಭಾರತಕ್ಕೆ ಹೆಚ್ಚಾದ ಟೆನ್ಷನ್‌: ಪ್ರತಿಕಾ ರಾವಲ್‌ ಗಾಯದ ಬಗ್ಗೆ ಇಲ್ಲಿದೆ ಅಪ್‌ಡೇಟ್‌

ಭಾರತದಲ್ಲಿ ಸದ್ಯ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ನಡೆಯುತ್ತಿವೆ. ಈ ವೇಳೆ ಟೀಮ್ ಇಂಡಿಯಾ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ಭಾನುವಾರ ಬಾಂಗ್ಲಾದೇಶದ ವಿರುದ್ಧ ಆಡಿತು. ಈ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೂ ಸಹ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈ ವೇಳೆ ಟೀಮ್ ಇಂಡಿಯಾದ ಆಟಗಾರ್ತಿಯೊಬ್ಬರು ಗಾಯಕ್ಕೆ ತುತ್ತಾಗಿದ್ದಾರೆ. ಈ ಸುದ್ದಿ ಟೀಮ್ ಇಂಡಿಯಾ ಕ್ಯಾಂಪ್‌ನ ಚಿಂತೆಯನ್ನು ಹೆಚ್ಚಿಸಿದೆ.

ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವಾಗ ಪ್ರತಿಕಾ ಗಾಯಕ್ಕೆ ತುತ್ತಾಗಿದ್ದಾರೆ. ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವಾಗ 21ನೇ ಓವರ್‌ಗಳಲ್ಲಿ ಬಾಂಗ್ಲಾ ಬ್ಯಾಟರ್‌ ಶರ್ಮಿನ್‌ ಅಖ್ತರ್ ಚೆಂಡನ್ನು ಮಿಡ್‌ವಿಕೆಟ್‌ ಬೌಂಡರಿಯತ್ತ ಬಾರಿಸಿದರು. ಈ ವೇಳೆ ಇದೇ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಪ್ರತಿಕಾ ರಾವಲ್‌ ಚೆಂಡನ್ನು ಹಿಡಿಯಲು ಮುಂದೆ ಸಾಗಿದರು. ಆಗ ಕಾಲು ಜಾರಿ ಬಿದ್ದು ಕಾಲಿಗೆ ಗಂಭೀರ ಗಾಯವನ್ನು ಮಾಡಿಕೊಂಡರು.

Injury Scare for Team India In-form Opener Pratika Rawal Doubtful for Women s WC Semi-Final

ಪ್ರತಿಕಾ ರಾವಲ್‌ ಬಿದ್ದ ರಭಸವನ್ನು ಕಂಡು ಇವರನ್ನು ಸ್ಟ್ರೆಕ್ಚರ್‌ನಲ್ಲೇ ಕರೆದುಕೊಂಡು ಹೋಗಲಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಸಹಾಯಕ ಸಿಬ್ಬಂದಿ ಹಾಗೂ ಆಟಗಾರರ ಸಹಾಯದಿಂದ ಪ್ರತಿಕಾ ನಿಧಾನವಾಗಿ ಡ್ರೆಸ್ಸಿಂಗ್ ರೂಮ್‌ನತ್ತ ಹೆಜ್ಜೆ ಹಾಕಿದರು. ಇವರ ಕಾಲಿಗೆ ಗಂಭೀರ ಗಾಯವಾಗಿದ್ದು, ಇವರು ಬಿಸಿಸಿಐ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿದು ಬದಿದೆ. ಪ್ರತಿಕಾ ರಾವಲ್‌ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದರು. ಇವರು ಪ್ರಸಕ್ತ ವಿಶ್ವಕಪ್‌ನಲ್ಲಿ ಆಡಿದ 6 ಇನಿಂಗ್ಸ್‌ಗಳಲ್ಲಿ 51.33 ರ ಸರಾಸರಿಯಲ್ಲಿ 308 ರನ್ ಸಿಡಿಸಿದ್ಧಾರೆ. ಲೀಗ್‌ ಹಂತದ ಮಹತ್ವದ ಪಂದ್ಯದಲ್ಲಿ ಪ್ರತಿಕಾ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಭಾರತ ತಂಡ ಸೆಮಿಫೈನಲ್ ತಲುಪಲು ನೆರವಾಗಿದ್ದರು.

ಹರ್ಮನ್‌ ಹೇಳಿದ್ದೇನು?

ಪತ್ರಿಕಾ ರಾವಲ್‌ ಬಗ್ಗೆ ಪಂದ್ಯದ ಬಳಿಕ ಕೇಳಿದ ಪ್ರಶ್ನೆಗೆ ನಾಯಕಿ ಹರ್ಮನ್ ಪ್ರೀತ್ ಕೌರ್‌, ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಶೀಘ್ರ ಚೇತರಿಸಿಕೊಳ್ಳಲಿದ್ದಾರೆ ಎಂಬ ಭರವಸೆಯನ್ನು ನೀಡಿದ್ದಾರೆ. ಇನ್ನು ಆಲ್‌ರೌಂಡರ್‌ ಪ್ರತಿಕಾ ರಾವಲ್ ಗಾಯದ ಬಗ್ಗೆ ಬಿಸಿಸಿಐ ಸಹ ಅಪ್‌ಡೇಟ್‌ ನೀಡಿದೆ. ಇವರ ಮೊಣಕಾಲು ಹಾಗೂ ಪಾದದ ಭಾಗಕ್ಕೆ ಗಾಯವಾಗಿದೆ ಎಂದು ತಿಳಿಸಿದೆ.

ಆರಂಭಿಕರಾಗಿ ಆಡುವುದು ಯಾರು?

ಒಂದು ವೇಳೆ ಪ್ರತಿಕಾ ರಾವಲ್‌ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಗುಣಮುಖರಾಗದಿದ್ದರೆ, ಭಾರತ ಓಪನಿಂಗ್‌ ಆಟಗಾರ್ತಿಯ ಹುಡುಕಾಟ ನಡೆಸುತ್ತಿದೆ. ಈ ವೇಳೆ ತಂಡದಲ್ಲಿರುವ ಉಮಾ ಚೆಟ್ರಿ, ರಾಧಾ ಯಾದವ್, ಅಮನ್‌ಜೋತ್‌ ಕೋರ್ ಅವರು ಈ ಸ್ಥಾನವನ್ನು ತುಂಬುವ ಕನಸು ಕಾಣುತ್ತಿದ್ದಾರೆ. ಇನ್ನು ಉಮಾ ಅವರನ್ನು ಹೊರತು ಪಡಿಸಿದರೆ ಉಳಿದ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಅನುಭವ ಹೊಂದಿಲ್ಲ.

Injury Scare for Team India In-form Opener Pratika Rawal Doubtful for Women s WC Semi-Final

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪ್ರತಿಕಾ ರಾವಲ್ ಬದಲಿಗೆ ಅಮನ್‌ಜೋತ್ ಕೌರ್ ಇನ್ನಿಂಗ್ಸ್ ಆರಂಭಿಸಿದರು. ಇವರು ಸ್ಮೃತಿ ಅವರೊಂದಿಗೆ ಉತ್ತಮವಾಗಿ ಇನಿಂಗ್ಸ್‌ ಕಟ್ಟಿದರು. ಇನ್ನು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ರಿಚಾ ಘೋಷ್ ಸಹ ಮೈದಾನಕ್ಕೆ ಇಳಿದಿರಲಿಲ್ಲ. ಇವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರ ಬಲದಿಗೆ ಉಮಾ ಛೆಟ್ರಿ ಆಡುವ ಬಳಗದಲ್ಲಿ ಸ್ಥಾನ ಪಡೆದರು.

Story first published: Monday, October 27, 2025, 11:16 [IST]
Other articles published on Oct 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+