ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಆಲ್ ರೌಂಡರ್ ವಿಜಯ್ ಶಂಕರ್‌ಗೆ ಗಾಯ

ಲಂಡನ್, ಮೇ 25: ಐಸಿಸಿ ವಿಶ್ವಕಪ್ ಕ್ರಿಕೆಟ್ ಸಮೀಪದಲ್ಲಿ ಇರುವಾಗಲೇ ಭಾರತಕ್ಕೂ ಆಟಗಾರರ ಗಾಯದ ತಲೆ ನೋವು ಶುರುವಾಗಿದೆ. ಟೀಮ್ ಇಂಡಿಯಾದ ಆಲ್ ರೌಂಡರ್ ವಿಜಯ್ ಶಂಕರ್ ಬಲಗೈಯ ಮುಂದೋಳಿಗೆ ಗಾಯ ಮಾಡಿಕೊಂಡಿದ್ದಾರೆ. ಅಭ್ಯಾಸದ ವೇಳೆ ವಿಜಯ್ ಗಾಯಕ್ಕೀಡಾಗಿದ್ದಾರೆ.
ಗುರುವಾರ (ಮೇ 23) ಭಾರತದ ಮೊದಲ ವಾರ್ಮ್ ಅಪ್ ವೇಳೆ ಎಡಗೈ ವೇಗಿ ಖಲೀಲ್ ಅಹ್ಮದ್ ಜೊತೆ ಅಭ್ಯಾಸ ನಡೆಸುತ್ತಿದ್ದಾಗ ವಿಜಯ್ ಶಂಕರ್ ಗಾಯ ಮಾಡಿಕೊಂಡಿದ್ದಾರೆ. ತಂಡದ ಅಭ್ಯಾಸದ ವೇಳೆಗೆ ನೆಟ್ ಬೌಲರ್ ಆಗಿ ತಂಡದೊಂದಿಗೆ ತೆರಳಿದ ನಾಲ್ವರಲ್ಲಿ ಕೆ ಖಲೀಲ್ ಅಹ್ಮದ್ ಕೂಡ ಇದ್ದಾರೆ.
ಗಾಯ ಮಾಡಿಕೊಂಡಿದ್ದ ವಿಜಯ್, ಯಾವುದಾದರೂ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರಾ? ಶೀಘ್ರ ಚೇತರಿಸಿಕೊಳ್ಳುತ್ತಾರಾ? ಶನಿವಾರ (ಮೇ 25) ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಇತ್ಯಾದಿ ಯಾವುದೂ ಮಾಹಿತಿಯನ್ನು ಬಿಸಿಸಿಐ ಈವರೆಗೆ ನೀಡಿಲ್ಲ.
ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ ಜೊತೆ ಎರಡನೇ ಬ್ಯಾಟಿಂಗ್ ಗ್ರೂಪಿನಲ್ಲಿರುವ ಶಂಕರ್, ಗಾಯವಾದ ಕೂಡಲೇ ಮೈದಾನದಿಂದ ಡ್ರೆಸ್ಸಿಂಗ್ ರೂಮಿನತ್ತ ತೆರಳಿದ್ದರು. ನ್ಯೂಜಿಲ್ಯಾಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ವಿಜಯ್ ಶಂಕರ್ ಚೇತರಿಸಿಕೊಳ್ಳದಿದ್ದರೂ ಕೇದಾರ್ ಜಾಧವ್ ತಂಡದಲ್ಲಿರುವುದರಿಂದ ಹೆಚ್ಚಿನ ಭೀತಿಯಿಲ್ಲ. ಆದರೆ ವಿಶ್ವಕಪ್ ವೇಳೆಗೆ ವಿಜಯ್ ಚೇತರಿಸಿಕೊಳ್ಳಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications