For Quick Alerts
ALLOW NOTIFICATIONS  
For Daily Alerts
 

ಇನ್‌ಸ್ಟಾಗ್ರಾಮ್ ಸಿರಿವಂತರ ಪಟ್ಟಿ ಪ್ರಕಟ: ಒಂದು ಪೋಸ್ಟ್‌ಗೆ ಕೊಹ್ಲಿ ಗಳಿಸುವ ಆದಾಯ ಎಷ್ಟು ಗೊತ್ತಾ?!

Instagram Rich List 2021: Virat Kohli the only Indian in top 20; earns Rs 5 crore per post
ಭಾರತದ ಇನ್ಸ್ಟಾಗ್ರಾಮ್ ವಿಚಾರದಲ್ಲಿ ಕೊಹ್ಲಿಗಿಂತ ಶ್ರೀಮಂತ ಯಾರು ಇಲ್ಲ | Oneindia Kannada

ನವದೆಹಲಿ: ಇನ್‌ಸ್ಟಾಗ್ರಾಮ್‌ ಸಿರಿವಂತರ ಪಟ್ಟಿ 2021 ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಭಾರತೀಯ ಅಗ್ರಸ್ಥಾನಿಗರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಟಾಪ್ 20ನೇ ಸ್ಥಾನದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದರೆ, 27ನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಇದ್ದಾರೆ.

ಪ್ರಚಾರದ ಉದ್ದೇಶದಿಂದ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡುವ ಪೋಸ್ಟ್‌ ಒಂದಕ್ಕೆ ಎಷ್ಟು ಗಳಿಸುತ್ತಾರೆ ಗೊತ್ತಾ? ಬರೋಬ್ಬರಿ 5 ಕೋಟಿ ರೂ. ಒಂದು ಪೋಸ್ಟ್‌ಗೆ ಕೊಹ್ಲಿಗೆ ಸಿಗುತ್ತದೆ. ಅದೇ ಪ್ರಿಯಾಂಕಾ ಚೋಪ್ರಾಗೆ ಇಂಥ ಒಂದು ಪೋಸ್ಟ್‌ಗೆ ಸುಮಾರು 3 ಕೋಟಿ ರೂ.ನಷ್ಟು ಆದಾಯವಿದೆ.

ಕಳೆದ ಬಾರಿ ಇನ್‌ಸ್ಟಾಗ್ರಾಮ್ ಸಿರಿವಂತರ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿ ಕಾಣಸಿಕೊಂಡಿದ್ದ ಕೊಹ್ಲಿ ಈ ಬಾರಿ 20ನೇ ಸ್ಥಾನಕ್ಕೇರಿದ್ದಾರೆ. ಅಂದ್ಹಾಗೆ ಈ ಪಟ್ಟಿಯಲ್ಲಿ ಪೋರ್ಚುಗಲ್ ಸೂಪರ್‌ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಮೊದಲ ಸ್ಥಾನದಲ್ಲಿದ್ದಾರೆ. ರೊನಾಲ್ಡೋ ಒಂದು ಪ್ರಮೋಷನಲ್ ಪೋಸ್ಟ್‌ಗೆ ಬರೋಬ್ಬರಿ ಸುಮಾರು 11.9 ಕೋ.ರೂ. ಆದಾಯ ಗಳಿಸುತ್ತಾರೆ.

ರೋನಾಲ್ಡೋ ಅವರು ಸ್ಟಾರ್ ರಸ್ಲರ್ ಡ್ವೇನ್ ಜಾನ್ಸನ್ (ದ ರಾಕ್) ಅವರನ್ನು ಮೊದಲ ಸ್ಥಾನದಿಂದ ಕೆಳಗಿಳಿಸಿದ್ದಾರೆ. ರಾಕ್ ಇನ್‌ಸ್ಟಾಗ್ರಾಮ್‌ ಪ್ರತೀ ಪ್ರಮೋಷನಲ್ ಪೋಸ್ಟ್‌ಗೆ 11 ಕೋ.ರೂ. ಗಳಿಸುತ್ತಾರೆ. ಇನ್ನು ಕೆಳಗಿನ ಸ್ಥಾನಗಳಲ್ಲಿ ಅಮೆರಿಕಾದ ಹಾಡುಗಾರ್ತಿ ಅರಿಯಾನ ಗ್ರಾಂಡೆ, ಸೆಲೆನಾ ಗೊಮೆಜ್, ಅಮೆರಿಕನ್ ಮಾಡೆಲ್ ಕೈಲಿ ಜೆನ್ನರ್ ಇದ್ದಾರೆ.

Story first published: Friday, July 2, 2021, 18:33 [IST]
Other articles published on Jul 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+