ಅವಕಾಶ ಸಿಕ್ಕಿಲ್ಲ ಎಂದು ಪೋಸ್ಟ್ ಹಾಕುವ ಬದಲು ಚೆನ್ನಾಗಿ ಆಡಬೇಕು; ಭಾರತೀಯನಿಗೆ ಸ್ಮಿತ್ ಕ್ಲಾಸ್!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಟೀಮ್ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸಿತು. ಈ ಸರಣಿಗೆ ಪ್ರಕಟವಾದ ಟೀಮ್ ಇಂಡಿಯಾದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರರಾದ ಅರ್ಷ್‌ದೀಪ್ ಸಿಂಗ್ ಮತ್ತು ಉಮ್ರಾಮ್ ಮಲಿಕ್‌ಗೆ ಅವಕಾಶ ನೀಡಲಾಗಿತ್ತು. ಇನ್ನು ಈ ಇಬ್ಬರಿಗೆ ಸರಣಿಯಲ್ಲಿ ಕಣಕ್ಕಿಳಿಯುವ ಅವಕಾಶ ಸಿಗದಿದ್ದರೂ ಸಹ ಮುಂಬರುವ ಐರ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಮತ್ತೆ ಅವಕಾಶ ದಕ್ಕಿದೆ.
ಹೌದು, ಇತ್ತೀಚೆಗಷ್ಟೆ ಬಿಸಿಸಿಐ ಆಯ್ಕೆ ಸಮಿತಿ ಇದೇ ತಿಂಗಳ 26 ಮತ್ತು 28ರಂದು ಐರ್ಲೆಂಡ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟಿ ಟ್ವೆಂಟಿ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಿತ್ತು. ಇನ್ನು ಈ ಸಮಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿರುವ ಕಾರಣ ಈ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದು, ನಾಯಕನಾಗಿ ಆಯ್ಕೆಗೊಂಡಿದ್ದಾರೆ.
ಈ ತಂಡದಲ್ಲಿ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ಇರಲಿದ್ದು, ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬ ಆಕಾಂಕ್ಷೆಯನ್ನು ಹೊಂದಿರುವ ಹಲವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ಸರಣಿ ಮೇಲೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರು ಹಾಗೂ ಕೋಚ್ ರಾಹುಲ್ ದ್ರಾವಿಡ್ ಕಣ್ಣಿಡಲಿದ್ದು, ಇದರಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ವಿಶ್ವಕಪ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಗಳು ಹೆಚ್ಚಿವೆ. ಹೀಗೆ ಐರ್ಲೆಂಡ್ ಪ್ರವಾಸ ಚಿಕ್ಕದಾಗಿದ್ದರೂ ಸಹ ಸಾಕಷ್ಟು ಮಹತ್ವದ್ದಾಗಿದೆ. ಹೀಗಾಗಿ ಈ ಸರಣಿಯಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದ ಹಲವರಿಗೆ ಅವಕಾಶ ಸಿಗದೇ ನಿರಾಸೆಗೊಳಗಾಗಿದ್ದು, ಯುವ ಆಟಗಾರ ರಾಹುಲ್ ತೆವಾಟಿಯಾ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಹೀಗೆ ನಿರಾಸೆ ಹೊರಹಾಕಿದ್ದ ರಾಹುಲ್ ತೆವಾಟಿಯಾ ಕುರಿತು ಹಲವು ಹಿರಿಯ ಕ್ರಿಕೆಟಿಗರು ಮಾತನಾಡಿದ್ದು, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಕೂಡ ಈ ಕೆಳಕಂಡಂತೆ ಸಲಹೆ ನೀಡಿ ತಿಳಿ ಹೇಳಿದ್ದಾರೆ.

ಟ್ವೀಟ್ ಮೂಲಕ ನಿರಾಸೆ ಹೊರಹಾಕಿದ್ದ ತೆವಾಟಿಯಾ
ರಾಜಸ್ಥಾನ್ ರಾಯಲ್ಸ್ ಮೂಲಕ ಕಳೆದ ಕೆಲ ಐಪಿಎಲ್ ಆವೃತ್ತಿಗಳಲ್ಲಿ ಮಿಂಚಿ ಗುರುತಿಸಿಕೊಂಡಿದ್ದ ರಾಹುಲ್ ತೆವಾಟಿಯಾ ಈ ಬಾರಿ ಚಾಂಪಿಯನ್ ಗುಜರಾತ್ ಟೈಟನ್ಸ್ ಪರ ಆಡಿ ಗಮನಾರ್ಹ ಪ್ರದರ್ಶನ ನೀಡಿದರು. ಆದರೆ, ಐರ್ಲೆಂಡ್ ಪ್ರವಾಸಕ್ಕೆ ಪ್ರಕಟವಾದ ತಂಡದಲ್ಲಿ ತನಗೆ ಅವಕಾಶ ಸಿಗದೇ ಇದ್ದದ್ದನ್ನು ಕಂಡ ರಾಹುಲ್ ತೆವಾಟಿಯಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ನಿರೀಕ್ಷೆಗಳು ನೋವು ಮಾಡುತ್ತವೆ' ಎಂದು ಬರೆದುಕೊಳ್ಳುವುದರ ಮೂಲಕ ನಿರಾಸೆ ವ್ಯಕ್ತಪಡಿಸಿದರು.

ಟ್ವೀಟ್ ಮಾಡುವ ಬದಲು ಆಟದ ಕಡೆ ಗಮನಹರಿಸಬೇಕು
ಪ್ರಸ್ತುತ ಭಾರತದಲ್ಲಿ ಹಲವಾರು ಪ್ರತಿಭಾವಂತ ಆಟಗಾರರು ಇರುವ ಕಾರಣ ಅವಕಾಶ ಸುಲಭವಾಗಿ ಲಭಿಸುವುದಿಲ್ಲ, ಹೀಗಾಗಿ ಅವಕಾಶ ಸಿಗದೇ ಇದ್ದುದ್ದಕ್ಕೆ ಟ್ವೀಟ್ ಮಾಡುವ ಬದಲು ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದರೆ ಮುಂದಿನ ಬಾರಿ ಅವಕಾಶ ಲಭಿಸುವುದನ್ನು ಯಾರಿಂದಲೂ ತಪ್ಪಿಸಲಾಗುವುದಿಲ್ಲ ಎಂದು ಗ್ರೇಮ್ ಸ್ಮಿತ್ ರಾಹುಲ್ ತೆವಾಟಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಐರ್ಲೆಂಡ್ ಪ್ರವಾಸಕ್ಕೆ ಪ್ರಕಟವಾದ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications