ರಶೀದ್ ಖಾನ್ ಪ್ರತಿನಿಧಿಸುವ ಪ್ರಾಂತ್ಯದಲ್ಲಿ ಸ್ಫೋಟ, ಅಂಪೈರ್ ಸಾವು!
ಕಾಬೂಲ್, ಅ.4: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರಲ್ಲಿ ಮಿಂಚುತ್ತಿರುವ ಅಫ್ಘಾನಿಸ್ತಾನದ ಕ್ರಿಕೆಟರ್ ರಶೀದ್ ಖಾನ್ ಅವರ ಪ್ರಾಂತ್ಯಕ್ಕೆ ಸೇರಿದ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ರೊಬ್ಬರು ದುರಂತ ಸಾವನ್ನಪ್ಪಿದ್ದಾರೆ. ಕಾರು ಬಾಂಬ್ ಸ್ಫೋಟದಲ್ಲಿ ಅಫ್ಘಾನಿಸ್ತಾನದ ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಮೃತಪಟ್ಟಿದ್ದಾರೆ.
ಕಾರು ಅಪಘಾತದಿಂದಾಗಿ ಅಫ್ಘಾನಿಸ್ತಾನ ಕ್ರಿಕೆಟರ್ ನಜೀಬ್ ತಾರಕೈ ಕೋಮಾಕ್ಕೆ ಜಾರಿದ ದುಃಖದ ವಿಷಯ ಅರಗಿಸಿಕೊಳ್ಳುವ ಮುನ್ನವೇ ಅಂಪೈರ್ ಸಾವು ಕ್ರಿಕೆಟ್ ಫ್ಯಾನ್ಸ್ ಗಳನ್ನು ಆಘಾತಕ್ಕೀಡು ಮಾಡಿದೆ.
ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಶನಿವಾರ (ಅಕ್ಟೋಬರ್ 3) ರಸ್ತೆಬದಿಯಲ್ಲಿ ಕಾರು ಬಾಂಬ್ ಸ್ಫೋಟಗೊಂಡಿದೆ. 36 ವರ್ಷದ ಶಿನ್ವಾರಿ ಹಾಗೂ ಕುಟುಂಬಸ್ಥರು ಬಾಂಬ್ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ನಂಗರ್ಹಾರ್ ಪ್ರಾಂತ್ಯದ ಶಿನ್ವಾರ್ ಜಿಲ್ಲೆಯಲ್ಲಿ ಮಧ್ಯಾಹ್ನ 12: 20 ಕ್ಕೆ ಸ್ಫೋಟ ಸಂಭವಿಸಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಮಾಧ್ಯಮ ವಕ್ತಾರ ಮೊಮ್ಮದ್ ಇಬ್ರಾಹಿಂ ಟ್ವೀಟ್ ಮಾಡಿದ್ದಾರೆ.
ಕಾರು ಬಾಂಬ್ ಸ್ಫೋಟದಲ್ಲಿ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಹಾಗೂ ಅವರ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಈ ಅಪಘಾತದಲ್ಲಿ ಒಟ್ಟು 15 ಜನರು ಮೃತಪಟ್ಟಿದ್ದು, 40 ಜನರು ಗಾಯಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರ್
36 ವರ್ಷ ವಯಸ್ಸಿನ ಶಿನ್ವಾರಿ 11 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ 5 ಏಕದಿನ ಪಂದ್ಯಗಳು ಮತ್ತು 6 ಟಿ 20 ಐ ಪಂದ್ಯಗಳು ಸೇರಿವೆ. ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ಅವರು ಮೊದಲ ಬಾರಿಗೆ ಡಿಸೆಂಬರ್ 7, 2017 ರಂದು ಅಂತಾರಾಷ್ಟ್ರೀಯ ಅಂಪೈರ್ ಆಗಿ ಪದಾರ್ಪಣೆ ಮಾಡಿದರು. ಕೊನೆಯದಾಗಿ 2020 ರ ಮಾರ್ಚ್ 10 ರಂದು ಐರ್ಲೆಂಡ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ 20 ಪಂದ್ಯ ದಲ್ಲಿ ಕಾರ್ಯ ನಿರ್ವಹಿಸಿದ್ದರು.

ಗಣಿಖಿಲ್ ಜಿಲ್ಲೆಯ ರಾಜ್ಯಪಾಲರ ಮೇಲೆ ಗುರಿ
ಅಫ್ಘಾನಿಸ್ತಾನದಲ್ಲಿ ಮಾಧ್ಯಮ ವರದಿಗಳ ಪ್ರಕಾರ, ನಂಗರ್ಹಾರ್ ನಲ್ಲಿ ಆ ಪ್ರಾಂತ್ಯದ ರಾಜ್ಯಪಾಲರನ್ನು ಗುರಿಯಾಗಿಸಿಕೊಂಡು ಕಾರ್ ಬಾಂಬ್ ಸ್ಫೋಟ ಮಾಡಲಾಗಿದೆ. ರಾಜ್ಯಪಾಲರ ನಿವಾಸದ ಕಾಂಪೌಂಡ್ ಬಳಿ ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ಕೆಲವು ಬಂದೂಕುಧಾರಿಗಳು ರಾಜ್ಯಪಾಲರ ಆವರಣಕ್ಕೆ ನುಸುಳಲು ಯತ್ನಿಸಿದ್ದರು. ಈ ಪೈಕಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಇತ್ತೀಚಿನ ವರದಿಗಳು ಬಂದಿವೆ.
ಸ್ಥಳೀಯವಾಗಿ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸಿದ್ದರು
2017ರಲ್ಲಿ ಘಾಜಿ ಅಮಾನುಲ್ಲಾ ಖನ್ ಪ್ರಾದೇಶಿಕ ಏಕದಿನ ಪಂದ್ಯಾವಳಿ ಹಾಗೂ ಅಹ್ಮದ್ ಶಾ 4 ದಿನಗಳ ಟೂರ್ನಮೆಂಟ್ ಗಳಲ್ಲೂ ಶಿನ್ವಾರಿ ಅವರು ಕಾರ್ಯ ನಿರ್ವಹಿಸಿದ್ದರು. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರು, ಸಿಬ್ಬಂದಿ ಬಗ್ಗೆ ಕಾಳಜಿ ವಹಿಸಲಿ, ಕೋಮಾಕ್ಕೆ ಜಾರಿರುವ ಕ್ರಿಕೆಟರ್ ಗೆ ನೆರವಾಗಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಶೀದ್ ಖಾನ್ ಪ್ರತಿನಿಧಿಸುವ ಪ್ರಾಂತ್ಯ
ರಶೀದ್ ಖಾನ್ ಪ್ರತಿನಿಧಿಸುವ ಶಿನ್ವಾರಿ ಪ್ರಾಂತ್ಯದವರಾದ ಬಿಸ್ಮಿಲ್ಲಾ ಖಾನ್ ಅವರು ಸ್ಪಿನ್ನರ್ ರಶೀದ್ ಅವರಿಗೆ ಚಿರಪರಿಚಿತ. ರಶೀದ್ ಖಾನ್ ಸದ್ಯ ಯುಎಇಯಲ್ಲಿ ಐಪಿಎಲ್ 2020ರಲ್ಲಿಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದು, ಇಂದು ಕೂಡಾ ಮುಂಬೈ ಇಂಡಿಯನ್ಸ್ ವಿರುದ್ಧ ಬೌಲ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications