ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿಕಾಕ್ ಮೇಲೆ ಹಲ್ಲೆಗೆ ಮುಂದಾದ ಡೇವಿಡ್ ವಾರ್ನರ್‌

By Manjunatha
Investigation against David warner from ICC

ಡರ್ಬನ್, ಮಾರ್ಚ್‌ 06: ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್‌ ಅವರು ಸಹ ಆಟಗಾರನ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆಗೆ ಸಂಬಂಧಪಟ್ಟಂತೆ ಮೇಲೆ ಮ್ಯಾಚ್ ರೆಫರಿ ತನಿಖೆಗೆ ಆದೇಶ ನೀಡಿದೆ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಡರ್ಬನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಟೀ ವಿರಾಮದ ವೇಳೆ ಡೇವಿಡ್ ವಾರ್ನರ್‌ ದ.ಆಫ್ರಿಕಾರ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿಕಾಕ್ ಅವರನ್ನು ಕೆಣಕಿ ಜಗಳಕ್ಕೆ ಮುಂದಾದರು. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಅಂಗಳದಲ್ಲಿ ಕೂಡಾ ವಾರ್ನರ್‌ ಅವರು ಡಿಕಾಕ್ ಅವರನ್ನು ತೀವ್ರವಾಗಿ ಮೂದಲಿಸಿದರು, ಡಿಕಾಕ್ ಅವರನ್ನು ಕೆರಳಿಸಲು ಪ್ರಯತ್ನಪಟ್ಟರು ಎನ್ನಲಾಗಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವು 112 ರನ್‌ಗಳಿಂದ ವಿಜಯ ಸಾಧಿಸಿತು.

Investigation against David warner from ICC

ಹಲವು ಹಿರಿಯ ಆಟಗಾರರು ಆಸ್ಟ್ರೇಲಿಯಾದ ಉಪನಾಯಕ ಡೇವಿಡ್ ವಾರ್ನರ್‌ ಅವರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಎರಡೂ ತಂಡದ ಆಟಗಾರರು ಅಂಗಳದಲ್ಲಿ ಕ್ರಿಕೆಟ್‌ ಪ್ರೇಮಿಗಳು ಮೆಚ್ಚತಕ್ಕುದಲ್ಲದ ರೀತಿಯ ಆಟವಾಡಿದ್ದಾರೆ' ಎಂದು ಐಸಿಸಿ ಅಭಿಪ್ರಾಯಪಟ್ಟಿದೆ. ಇದೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್‌ ಲಿಂಚ್‌ಗೆ ಅತಿರೇಕದ ವರ್ತನೆಗಾಗಿ ದಂಡ ವಿಧಿಸಲಾಗಿತ್ತು.

ದ.ಆಫ್ರಿಕಾ ನಾಯಕ ಪಾಪ್‌ ಡು ಪ್ಲಿಸಿಸ್ ಸ್ಲೆಡ್ಜಿಂಗ್ ತಡೆಯಲು ಅಂಪೈರ್‌ಗಳು ಮುಂದಾಗಬೇಕು, ಮೊದಲ ಟೆಸ್ಟ್‌ನಲ್ಲಿ ಎರಡೂ ತಂಡದ ಆಟಗಾರರು ಹದ್ದು ಮೀರಿ ಸ್ಲೆಡ್ಜಿಂಗ್ ಮಾಡಿದ್ದಾರೆ, ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ಆಗಲೇ ಬೇಕು ಎಂದಿದ್ದಾರೆ.

ಆಸ್ಟ್ರೇಲಿಯನ್ ಆಟಗಾರರು ಸ್ಲೆಡ್ಜಿಂಗ್‌ಗೆ ಕುಖ್ಯಾತರು. ಅದರಲ್ಲಿಯೂ ವಾರ್ನರ್‌ ಸ್ವಲ್ಪ ಹೆಚ್ಚೇ ಎನ್ನುವಷ್ಟು ಎದುರಾಳಿ ಆಟಗಾರರನ್ನು ಕೆಣಕುತ್ತಾರೆ. ಈ ಮುಂಚೆಯೂ ವಾರ್ನರ್‌ ಇದೇ ವಿಷಯವಾಗಿ ದಂಡ ಹಾಗೂ ಐಸಿಸಿ ಇಂದ ಎಚ್ಚರಿಕೆಯನ್ನೂ ಪಡೆದಿದ್ದಾರೆ.

Story first published: Tuesday, March 6, 2018, 10:01 [IST]
Other articles published on Mar 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X