ಎಂಎಸ್ ಧೋನಿಯ ನಡೆಗೆ ಬೇಸರವನ್ನು ವ್ಯಕ್ತಪಡಿಸಿದ ಪಾಕ್ ಮಾಜಿ ನಾಯಕ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣದ ಮೂಲಕ ಇದ್ದಕ್ಕಿಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಆಘಾತ ಉಂಟು ಮಾಡಿದೆ. ಮುಂದಿನ ವಿಶ್ವಕಪ್‌ನಲ್ಲಿ ಧೋನಿ ಆಡುತ್ತಾರೆ ಎಂದು ನಿರೀಕ್ಷಿಸಿದ್ದ ಎಲ್ಲರೂ ಧೋನಿಯ ಈ ನಿರ್ಧಾರದಿಂದ ಬೇಸರಗೊಂಡಿದ್ದಾರೆ.
ಧೋನಿ ಹೀಗೆ ಸಾಮಾಜಿಕ ಜಾಲತಾಣದ ಮೂಲಕ ವಿದಾಯವನ್ನು ಹೇಳಿರುವುದಕ್ಕೆ ಪಾಕಿಸ್ತಾನದ ಮಾಜಿ ನಾಯಕ ಕೂಡ ಬೇಸರವನ್ನು ವ್ಯಕ್ತಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಮೈದಾನದಿಂದಲೇ ತಮ್ಮ ನಿವೃತ್ತಿಯನ್ನು ಘೋಷಿಸಬೇಕಾಗಿತ್ತು ಎಂದು ಹೇಳಿದ್ದಾರೆ. ಯೂಟ್ಯೂಬ್ ವಿಡಿಯೋದಲ್ಲಿ ಈ ಬಗ್ಗೆ ಇನ್ಜಮಾಮ್ ಉಲ್ ಹಕ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ಜಮಾಮ್ ಉಲ್ ಹಕ್ ಬೇಸರ
ವಿಶ್ವಾದ್ಯಂತ ಧೋನಿಯ ಕೋಟ್ಯಂತರ ಅಭಿಮಾನಿಗಳು ಅಂತಿಮ ಪಂದ್ಯದಲ್ಲಿ ಆಡುವುದನ್ನು ಕಾಣಲು ಕಾತುರರಾಗಿರುತ್ತಾರೆ. ನನ್ನ ಅಭಿಪ್ರಾಯದ ಪ್ರಕಾರ ಧೋನಿ ರೀತಿಯ ಆಟಗಾರರು ಮನೆಯಲ್ಲಿ ಕುಳಿತು ನಿವೃತ್ತಿಯನ್ನು ಹೇಳಬಾರದು. ಅವರು ಮೈದಾನದಿಂದಲೇ ತಮ್ಮ ನಿವೃತ್ತಿಯನ್ನು ಘೋಷಿಸಬೇಕು ಎಂದಿದ್ದಾರೆ.

ಅಂಗಳದಲ್ಲಿ ಪಡೆದುಕೊಂಡ ತಾರಾಪಟ್ಟ
ಈ ವಿಚಾರವನ್ನು ಹಿಂದೆ ಸಚಿನ್ ಬಳಿಯೂ ನಾನು ಹಂಚಿಕೊಂಡಿದ್ದೆ. ನಿಮಗೆ ದೊಡ್ಡ ಮಟ್ಟದ ಅಭಿಮಾನಿಗಳು ಇದ್ದಾಗ ಅವರಿಗೆ ಆದರ್ಶವಾಗಿ ಮೈದಾನದಿಂದಲೇ ವಿದಾಯವನ್ನು ವ್ಯಕ್ತಪಡಿಸಬೇಕು. ಎಲ್ಲದಕ್ಕಿಂತಲೂ ಆ ಗೌರವ ಹಾಗೂ ತಾರಾ ಪಟ್ಟವನ್ನು ಅಂಗಳದಲ್ಲೇ ಪಡೆದುಕೊಂಡಿರುವಾಗ ಅದನ್ನು ಗೌರವಿಸಬೇಕು ಎಂದು ಹೇಳಿಕೆಯನ್ನು ನೀಡಿದ್ದಾರೆ.

ನನ್ನನ್ನೂ ಸೇರಿಸಿಕೊಂಡು ಅಭಿಮಾನಿಗೆ ಸಂತಸ ಭಾವ
ನನ್ನ ಅಭಿಪ್ರಾಯದ ಪ್ರಕಾರ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯನ್ನು ಅಂಗಳದಿಂದಲೇ ಘೋಷಿಸಿದ್ದರೆ ನನ್ನನ್ನೂ ಸೇರಿಸಿಕೊಂಡು ಅವರ ಅಭಿಮಾನಿಗಳು ಸಂತಸವನ್ನು ಅನುಭವಿಸುತ್ತಿದ್ದರು. ಯಾಕೆಂದರೆ ನಾನು ಆತನನ್ನು ಭಾರತದ ಅತ್ಯುತ್ತಮ ನಾಯಕ ಎಂದು ಈಗಾಗಲೇ ಹೇಳಿಕೊಂಡಿದ್ದೇನೆ ಎಂದಿದ್ದಾರೆ.

ಮಾಹಿಯನ್ನು ಹೊಗಳಿದ ಹಕ್
ಇನ್ನು ಇದೇ ಸಂದರ್ಭದಲ್ಲಿ ಇನ್ಜಮಾನ್ ಉಲ್ ಹಕ್ ಧೋನಿ ನಾಯಕತ್ವ ಹಾಗೂ ಆಟವನ್ನು ಶ್ಲಾಘಿಸಿದರು. ನಾಯಕನಾಗಿ ಅನೇಕ ಕ್ರಿಕೆಟಿಗರನ್ನು ಭಾರತ ಕ್ರಿಕೆಟ್ ತಂಡಕ್ಕೆ ನೀಡಿದ್ದಾರೆ. ಆತನೋರ್ವ ಚಾಣಾಕ್ಷ ಆಟಗಾರ ಎಂದು ಇನ್ಜಮಾಮ್ ಉಲ್ ಹಕ್ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications